ಇಂದು ರಘು-ವೀಣಾ ದಂಪತಿ ನಮ್ಮೂರಿಗೆ ಬಂದರು..

ಪ್ರಸಾದ್ ರಕ್ಷಿದಿ

ಕಾಡು…..

ಪುತ್ತೂರು ನಗರದೊಳಗೊಂದು ‘ಕಾಡು’ ಇದೆ. ಆ ಕಾಡನ್ನು ನಿರ್ಮಿಸಿದವರು ವೀಣಾ ಮತ್ತು ರಘು ಹಾಲ್ಕೆರೆ ದಂಪತಿ.

ಪುತ್ತೂರಿನ ಸಾಂಸ್ಕೃತಿಕ ವಲಯದಲ್ಲಿ ಪರಿಚಿತ ಹೆಸರು, ಹಲವು ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಬಳಿ ಇರುವ ತಮ್ಮ ಸ್ವಂತ ನೆಲದಲ್ಲಿ ‘ಕಾಡು’ ಎನ್ನುವ ಸಾಂಸ್ಕೃತಿಕ ಕೇಂದ್ರ ಕಟ್ಟಿ ಬೆಳೆಸಿದ್ದಾರೆ. ಇಲ್ಲಿ‌ನ ಹಾ.ಮ. ಭಟ್ ರಂಗಮಂದಿರದಲ್ಲಿ ನಾಟಕ, ಸಿನಿಮಾ, ಸಂಗೀತ, ಕಲೆ, ಸಾಹಿತ್ಯದ ಹಲವು ‌ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.

ಇಷ್ಟು ಹೇಳಿದರೆ ಏನೂ ಹೇಳಿದಂತಾಗದು.. ಹಾ.ಮ. ಭಟ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತುಮರಿಯವರು.

ಶಾಂತವೇರಿ ಗೋಪಾಲಗೌಡರ ಅನುಯಾಯಿ ಹಾಗೂ ಸಹವರ್ತಿ.. ಗೋಪಾಲಗೌಡರ ಜೊತೆಯಲ್ಲಿ ಸಮಾಜವಾದಿ ದೀಕ್ಷೆ ಪಡೆದವರು.

ಹಾ.ಮ. ಭಟ್ ಬಳಗದವರು ತುಮರಿಯಲ್ಲಿ ಶಾಂತವೇರಿ ಗೋಪಾಲಗೌಡ ರಂಗ ಮಂದಿರ ಕಟ್ಟಿದರು.

ರಘು ಹಾಲ್ಕೆರೆ ಹಾ.ಮ ಭಟ್ ಅವರ ಪುತ್ರ, ಈಗ ಪುತ್ತೂರಿನಲ್ಲಿ ನೆಲೆಸಿದ್ದರೂ ಹುಟ್ಟೂರಿನ‌ ನಂಟು ಬಿಟ್ಟಿಲ್ಲ. ಪ್ರತಿವರ್ಷ ತುಮರಿ‌ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಾರೆ.

ರಘು ಅವರ ಪತ್ನಿ ವೀಣಾ ಸಂಗೀತ ವಿಧುಷಿ.. ಪುತ್ತೂರಿನಲ್ಲಿ ಕರ್ನಾಟಕ ಸಂಗೀತದ ತರಗತಿಗಳನ್ನೂ ನಡೆಸುತ್ತಾರೆ.

ವೀಣಾ ಅಭಿನೇತ್ರಿಯೂ ಹೌದು. ಪ್ರಶಸ್ತಿ ವಿಜೇತ ಚಿತ್ರ “ಧಾಳಿ” ಯಲ್ಲಿ ( ನಿ: ಮೇದಿನಿ ಕೆಳಮನೆ) ಮುಖ್ಯ ಪಾತ್ರ ನಿರ್ವಹಿಸಿದ್ದರು.

ಪುತ್ತೂರಿನ “ಕಾಡು” ವಿನಲ್ಲಿ ಹಾಗೂ ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಮ್ಮ ತಂಡವೂ ನಾಟಕ ಪ್ರದರ್ಶನ ನೀಡಿದೆ.

ಇಂದು ರಘು – ವೀಣಾ ದಂಪತಿ ನಮ್ಮೂರಿಗೆ ಬಂದರು.. ರಂಗಮಂದಿರ ನೋಡಿದರು. ಊರೊಳಗೆಂದು ಸಣ್ಣ ಸುತ್ತಾಟ ನಮ್ಮ ರಂಗ ತಂಡದವರೊಂದಿಗೆ ಒಂದಷ್ಟು ಮಾತುಕತೆ, ನಂತರ ನಮ್ಮ ‌ಮನೆಗೂ ಭೇಟಿ.

ಜ್ಞಾನಪೀಠಾರೋಹಣ…..

..

ಅದು ಇಲ್ಲದಿದ್ದರೆ ಹೇಗೆ?…..

‍ಲೇಖಕರು avadhi

August 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: