ಪ್ರಸಾದ್ ರಕ್ಷಿದಿ
ಕಾಡು…..
ಪುತ್ತೂರು ನಗರದೊಳಗೊಂದು ‘ಕಾಡು’ ಇದೆ. ಆ ಕಾಡನ್ನು ನಿರ್ಮಿಸಿದವರು ವೀಣಾ ಮತ್ತು ರಘು ಹಾಲ್ಕೆರೆ ದಂಪತಿ.
ಪುತ್ತೂರಿನ ಸಾಂಸ್ಕೃತಿಕ ವಲಯದಲ್ಲಿ ಪರಿಚಿತ ಹೆಸರು, ಹಲವು ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಬಳಿ ಇರುವ ತಮ್ಮ ಸ್ವಂತ ನೆಲದಲ್ಲಿ ‘ಕಾಡು’ ಎನ್ನುವ ಸಾಂಸ್ಕೃತಿಕ ಕೇಂದ್ರ ಕಟ್ಟಿ ಬೆಳೆಸಿದ್ದಾರೆ. ಇಲ್ಲಿನ ಹಾ.ಮ. ಭಟ್ ರಂಗಮಂದಿರದಲ್ಲಿ ನಾಟಕ, ಸಿನಿಮಾ, ಸಂಗೀತ, ಕಲೆ, ಸಾಹಿತ್ಯದ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.
ಇಷ್ಟು ಹೇಳಿದರೆ ಏನೂ ಹೇಳಿದಂತಾಗದು.. ಹಾ.ಮ. ಭಟ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತುಮರಿಯವರು.

ಶಾಂತವೇರಿ ಗೋಪಾಲಗೌಡರ ಅನುಯಾಯಿ ಹಾಗೂ ಸಹವರ್ತಿ.. ಗೋಪಾಲಗೌಡರ ಜೊತೆಯಲ್ಲಿ ಸಮಾಜವಾದಿ ದೀಕ್ಷೆ ಪಡೆದವರು.
ಹಾ.ಮ. ಭಟ್ ಬಳಗದವರು ತುಮರಿಯಲ್ಲಿ ಶಾಂತವೇರಿ ಗೋಪಾಲಗೌಡ ರಂಗ ಮಂದಿರ ಕಟ್ಟಿದರು.
ರಘು ಹಾಲ್ಕೆರೆ ಹಾ.ಮ ಭಟ್ ಅವರ ಪುತ್ರ, ಈಗ ಪುತ್ತೂರಿನಲ್ಲಿ ನೆಲೆಸಿದ್ದರೂ ಹುಟ್ಟೂರಿನ ನಂಟು ಬಿಟ್ಟಿಲ್ಲ. ಪ್ರತಿವರ್ಷ ತುಮರಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಾರೆ.
ರಘು ಅವರ ಪತ್ನಿ ವೀಣಾ ಸಂಗೀತ ವಿಧುಷಿ.. ಪುತ್ತೂರಿನಲ್ಲಿ ಕರ್ನಾಟಕ ಸಂಗೀತದ ತರಗತಿಗಳನ್ನೂ ನಡೆಸುತ್ತಾರೆ.

ವೀಣಾ ಅಭಿನೇತ್ರಿಯೂ ಹೌದು. ಪ್ರಶಸ್ತಿ ವಿಜೇತ ಚಿತ್ರ “ಧಾಳಿ” ಯಲ್ಲಿ ( ನಿ: ಮೇದಿನಿ ಕೆಳಮನೆ) ಮುಖ್ಯ ಪಾತ್ರ ನಿರ್ವಹಿಸಿದ್ದರು.
ಪುತ್ತೂರಿನ “ಕಾಡು” ವಿನಲ್ಲಿ ಹಾಗೂ ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಮ್ಮ ತಂಡವೂ ನಾಟಕ ಪ್ರದರ್ಶನ ನೀಡಿದೆ.
ಇಂದು ರಘು – ವೀಣಾ ದಂಪತಿ ನಮ್ಮೂರಿಗೆ ಬಂದರು.. ರಂಗಮಂದಿರ ನೋಡಿದರು. ಊರೊಳಗೆಂದು ಸಣ್ಣ ಸುತ್ತಾಟ ನಮ್ಮ ರಂಗ ತಂಡದವರೊಂದಿಗೆ ಒಂದಷ್ಟು ಮಾತುಕತೆ, ನಂತರ ನಮ್ಮ ಮನೆಗೂ ಭೇಟಿ.
ಜ್ಞಾನಪೀಠಾರೋಹಣ…..
..
ಅದು ಇಲ್ಲದಿದ್ದರೆ ಹೇಗೆ?…..
0 ಪ್ರತಿಕ್ರಿಯೆಗಳು