ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಬುದ್ಧನಿದ್ದಿದ್ದರೆ…

ವಿಶ್ವನಾಥ ಎನ್ ನೇರಳಕಟ್ಟೆ

ಇಂದು ಬುದ್ಧನಿದ್ದಿದ್ದರೆ-

ಮೂಗು ಮುರಿಯುತ್ತಿದ್ದ
ತನ್ನ ಹೊತ್ತಗೆಗಳ ತುಂಬಾ
ಅಡರಿ
ಬೋಧನೆಗಳನ್ನೆಲ್ಲಾ ತಿಂದು ಮುಗಿಸಿರುವ
ಗೆದ್ದಲುಗಳ ಕಂಡು

‘ಕ್ಷಮಿಸಿಬಿಡಿ ಅವರನ್ನು’
ಎಂದು ಬೊಬ್ಬಿರಿಯುತ್ತಿದ್ದ,
ಎಲ್ಲವನ್ನೂ ಗುಳುಂ ಸ್ವಾಹಾ ಮಾಡಿ
ಮರಕ್ಕೆ ಸುತ್ತು ಹಾಕಿ
ಮೈಮರೆತು ಬಿದ್ದಿರುವ
ಹೆಬ್ಬಾವುಗಳತ್ತ ನೋಡುತ್ತ

ಮತ್ತೊಮ್ಮೆ ಏಳುತ್ತಿದ್ದ
ನಡುರಾತ್ರೆ
ಎಲ್ಲವನ್ನೂ ತೊರೆದು ಹೋಗುತ್ತಿದ್ದ
ಬೋಧಿ ಮರದಡಿ ಕುಳಿತು
ಧ್ಯಾನಿಸುತ್ತಿದ್ದ-

ಮತ್ತೆ ಬುದ್ಧನಾಗಬಾರದೆಂದು!

‍ಲೇಖಕರು Avadhi

26 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading