ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಾದರೂ ಬಂದೆಯಲ್ಲಾ..

ಜೀವ ನಾಡಿ

ಪ್ರಕಾಶ ಕಡಮೆ 

ಇಂದಾದರೂ ಬಂದೆಯಲ್ಲಾ
ಗೊತ್ತಿತ್ತು ನನಗೆ
ನೀ ಬಂದೇ ಬರುವಿ ಎಂದು.
ಇಲ್ಲೋ ಕಾತುರದಿ ಕಾಯುತ್ತಿದ್ದರು
ಕದ್ದು ತಿನ್ನುವವರು
ಎದ್ದು ತಿನ್ನುವವರು
ಬಿದ್ದು ತಿನ್ನುವವರು
ಮತ್ತು ಖುದ್ದಾಗಿ ತಿನ್ನುವವರು.

ನಿನ್ನ ಸುಳಿವಿಲ್ಲದೇ
ಮತ್ಯ್ಸಕನ್ನಿಕೆಯರು ತಮ್ಮ
ಬದುಕಿಗಾಗಿ ಪರಿತಪಿಸುತ್ತಿದ್ದರು
ಹೊತ್ತು ಗೊತ್ತಿಲ್ಲದ ಬದುಕಿಗೆ
ಮತ್ತವರ ಮಕ್ಕಳ
ಪುಸ್ತಕ ಪಾಟೀಚೀಲಕೆ
ಗಂಡಂದಿರ
ಮತ್ತಿನ ನಂಜುವಿಕೆಗೆ.

ಜಗವನೇ ನಡುಗಿಸಿ
ಜನಗಳ ಜೀವಹೀರಿದ
ಕೊರೋನಾ
ನಿನಗೆ ಜೀವದಾನ ಮಾಡಿ
ಸಾಗರದ ಭೋರ್ಗೆರೆತದಲಿ
ಮತ್ತೆ ಕೆಲದಿನಗಳ ಕಾಲವಾದರೂ
ನಕ್ಕು ನಲಿಸಿತು
ಉಕ್ಕುಕ್ಕಿ ಬರುವ
ಚಂದಿರನ ಬೆಳದಿಂಗಳ ಕಾಣಿಸಿತು.

ಇಂದಾದರೂ ಬಂದೆಯಲ್ಲಾ
ಬದುಕಿನ ಕಾವಲಿ ಕಾಯಿಸಲು
ಬಾಯಿಗೆ ಆಸೆಗಳ ಹಾಯಿಸಲು.

 

‍ಲೇಖಕರು avadhi

7 May, 2020

1 Comment

  1. ಡಾ.ಪ್ರಕಾಶ ಖಾಡೆ

    ಅರ್ಥಪೂರ್ಣ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading