ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂತಿ, ಪ್ರೀತಿಯಿಂದ…

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆ

“Song Of Rain” ನ ಭಾವಾನುವಾದ

ಚೈತ್ರಾ ಶಿವಯೋಗಿಮಠ
ಮಳೆಯ ಹಾಡು…

ದೇವಾನುದೇವತೆಗಳು ಸ್ವರ್ಗದಿಂದಿಳಿಬಿಟ್ಟ
ಬೆಳ್ಳಿ ದಾರಗಳ ಬಿಂದು ನಾನು
ನನ್ನನ್ನ ಉಡಿತುಂಬಿಸಿಕೊಂಡ ಪ್ರಕೃತಿ
ಬಯಲು, ಕಣಿವೆಗಳ ಸಿಂಗರಿಸಿಕೊಳ್ಳುವಳು ತಾನು.

ಉಷೆಯು ನವಿರಾಗಿ, ಮನ್ಮಥನ
ಮುಕುಟದಿಂದಲಿ ಬಿಡಿಸಿ
ನಲ್ದೋಟವನು ನಲುಮೆಯಿಂದಲೆ
ಸಿಂಗರಿಸಿದ ಇಬ್ಬನಿಯು ನಾನು.

ಗಿರಿ ಶೃಂಗಗಳು ನಗುವವು ನಾನಳಲು
ಪುಷ್ಪಸಂಕುಲವು ನಲಿಯುವುದು,
ವಿನೀತನಾಗಲು ನಾನು.
ಸಕಲವೂ ಉಲ್ಲಸಿತ ತಲೆಬಾಗಲು ನಾನು!

ವಸುಧೆಯು, ಘನ ಮೇಘನು ಪ್ರೇಮಿಗಳು
ಈರ್ವರ ನಡುವಿನ ಕಾರುಣ್ಯದ ದೂತ ನಾನು
ಒಬ್ಬರ ದಾಹ ನೀಗಿಸಿದರೆ
ಮತ್ತೊಬ್ಬರ ಹಗುರಾಗಿಸುವೆನು ಸುರಿದು!

ಗುಡುಗು ಸಿಡಿಲು ನನ್ನ ಬರುವಿಕೆಯ
ಬಹುಪರಾಕು ಹೇಳಿದರೆ
ಇಂದ್ರಧನು ನಿರ್ಗಮನವ ಸಾರುವುದು
ಗಡಿಬಿಡಿ, ಗದ್ದಲದಲಿ ಜನಿಸಿ,
ತಣ್ಣಗೆ ಸಾವಿನ ರೆಕ್ಕೆಯಲಿ ಅಡಗುವ
ಐಹಿಕ ಜೀವನದಂತೆ ನಾನು

ಸಮುದ್ರದ ಹೃದಯಾಳದಿಂದ ಹೊರಹೊಮ್ಮುವೆ
ಮೆಲುಗಾಳಿಯ ಮೇಲ್ಮೇಲೆ ಹಾರುವೆ
ಬಾಯಾರಿದ ನೆಲವ ಕಾಣಲು
ಒಡನೆ ಇಳಿಯುವೆ, ಇಳೆಯ ತಣಿಸುವೆ.
ಮಿಲಿಯಗಟ್ಟಲೆ ತರುಗಳ, ಸುಮಗಳ ಬಿಗಿದಪ್ಪುವೆ

ನನ್ನ ಸುಕೋಮಲ ಬೆರಳುಗಳಿಂದ
ಮೃದುವಾಗಿ ಕಿಟಕಿಗಳ ಸೋಕಿಸುವೆ
ನನ್ನಾಗಮನದ ಹಾಡುಗಬ್ಬವ
ಎಲ್ಲರೂ ಕೇಳುವರು, ಆದರೆ
ಸೂಕ್ಷ್ಮ ಮತಿಗಳು ಮಾತ್ರ ಗ್ರಹಿಸುವರು!

ಹವೆಯೊಳಗಿನ ಧಗೆಯಿಂದ ಜನಿಸಿ
ಪ್ರತಿಯಾಗಿ ಆರಿಸಿ, ಕೊಲ್ಲುವೆ ಧಗೆಯನ್ನೆ.
ಗಂಡಿಂದ ಬಲ ಪಡೆದು,
ಮಣಿಸಿದಂತೆ ಹೆಣ್ಣು ಅವನನ್ನೆ!

ಅಬ್ಧಿಯ ನಿಟ್ಟುಸಿರು ನಾನು,
ಬಯಲಿನ ನಗೆಬುಗ್ಗೆ ನಾನು,
ಸಗ್ಗದ ಕಂಬನಿಯು ನಾನು!

ಇಂತಿ ಪ್ರೀತಿಯಿಂದ,
ಅಕ್ಕರೆಯ ಕಡಲಾಳದಿಂದ ನಿಟ್ಟುಸಿರುಗಳು
ಚೈತನ್ಯದ ಚಿಲುಮೆಯಿಂದ ನಗೆಬುಗ್ಗೆಗಳು
ನಿತ್ಯ ನಿರಂತರ ಸಗ್ಗದಂತಹ ನೆನಪುಗಳಿಂದೊಸರುವ ಕಂಬನಿಗಳು


Song of Rain

Song of the Rain
I am dotted silver threads dropped from heaven
By the gods. Nature then takes me, to adorn
Her fields and valleys.

I am beautiful pearls, plucked from the
Crown of Ishtar by the daughter of Dawn
To embellish the gardens.

When I cry the hills laugh;
When I humble myself the flowers rejoice;
When I bow, all things are elated.

The field and the cloud are lovers
And between them I am a messenger of mercy.
I quench the thirst of one;
I cure the ailment of the other.

The voice of thunder declares my arrival;
The rainbow announces my departure.
I am like earthly life, which begins at
The feet of the mad elements and ends
Under the upraised wings of death.

I emerge from the heart of the sea
Soar with the breeze. When I see a field in
Need, I descend and embrace the flowers and
The trees in a million little ways.

I touch gently at the windows with my
Soft fingers, and my announcement is a
Welcome song. All can hear, but only
The sensitive can understand.

The heat in the air gives birth to me,
But in turn I kill it,
As woman overcomes man with
The strength she takes from him.

I am the sigh of the sea;
The laughter of the field;
The tears of heaven.

So with love—
Sighs from the deep sea of affection;
Laughter from the colorful field of the spirit;
Tears from the endless heaven of memories.

‍ಲೇಖಕರು avadhi

10 April, 2020

1 Comment

  1. Dr. Karunakara Nidinji.

    ಗಂಡಿಂದ ಬಲಪಡೆದು
    ಮಣಿಸಿದಂತೆ ಹೆಣ್ಣುಅವನ್ನೆ. ಎಂಥಾ ಸಾಲುಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading