ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಸಿಜಿಕೆ..

parameshwar

ಪರಮೇಶ್ವರ ಗುರುಸ್ವಾಮಿ

ಖಾಲಿ ಕೈಯಲ್ಲಿ, ಎಲ್ಲ ಮುಗಿಯಿತು ಇನ್ನೇನೂ ಇಲ್ಲ ಎಂಬಂಥ ಸಂದರ್ಭಗಳಲ್ಲಿ ಶೂನ್ಯದಿಂದ ಅದ್ಭುತವಾದುದನ್ನು ಸಾಧಿಸಿ ಹೊಸತನ್ನು ಸೃಸ್ಟಿಸಿಬಿಡುತ್ತಿದ್ದವರು ಸಿಜಿಕೆ.

ಅವರು ರಂಗನಿರಂತರವನ್ನು ಹುಟ್ಟು ಹಾಕಿದ ಸಂದರ್ಭದಲ್ಲಿ ನಾನು ಅವರ ನಿಕಟವರ್ತಿಗಳಲ್ಲಿ ಒಬ್ಬನಾಗಿದ್ದೆ.

ಕನ್ನಡದ ಬಹು ಮುಖ್ಯ ನಾಟಕಗಳನ್ನು ಬರೆಸಿ ಅಂದಿಗೆ ವೈಭವ ಸದೃಶ ಪ್ರದರ್ಶನಗಳನ್ನುಕೊಟ್ಟಿದ್ದರು. ಹವ್ಯಾಸಿ ಪ್ರಯೋಗಗಳಿಗೆ ಅವರು ಮಾಡಿಸುತ್ತಿದ್ದ ಖರ್ಚಿನಿಂದಾಗಿ ವ್ಯವಸ್ಥಾಪಕರು ಸುಸ್ತು ಹೊಡೆದು ಹೋಗುತ್ತಿದ್ದರು. ಮನೆಯ ಆಭರಣಗಳನ್ನುಅಡವಿಟ್ಟದ್ದೂ ಉಂಟು. ನಾಟಕಗಳು ತಾಲೀಮು ಮುಗಿಯುತ್ತಾ ಪ್ರದರ್ಶನಕ್ಕೆ ಹತ್ತಿರವಾಗುತ್ತಿದ್ದಂತೆ ಹೈರಾಣಾಗಿಬಿಡುತ್ತಿದ್ದರು.

ಆ ಸಂದರ್ಭದಲ್ಲಿ ಹೆಸರಾಗಿದ್ದ ವ್ಯವಸ್ಥಾಪಕರೊಂದಿಬ್ಬರು ನನ್ನೊಡನೆ, “ನಿಮ್ ಫ್ರೆಂಡ್ ಗೆ ಪ್ರೊಡಕ್ಷನ್ ಖರ್ಚ್ ಸ್ವಲ್ಪ ಕಡ್ಮೆ ಮಾಡಕ್ ಹೇಳ್ರೀ” ಅಂದಿದ್ದೂ ಉಂಟು. ಜೊತೆಗೆ ಒಮ್ಮೊಮ್ಮೆ ಅವರೊಡನೆ ಸಹಾಯಕರಾಗಿ ಬೆಳೆದವರೆಲ್ಲ ಅವರಿಂದ ದೂರವಾಗಿ ಬಿಡುತ್ತಿದ್ದರು. ಸಿಜಿಕೆ ಹೇಗೆ ಸದಾ ಅಮ್ಮನ ಪ್ರೀತಿ ಕೊಡುತ್ತಿದ್ದರೋ ಕೆಲವು ಸಲ ಅಷ್ಟೇ ಕ್ರೂರಿ ಎನ್ನುವಂತೆಯೂ ವರ್ತಿಸುತ್ತಿದ್ದರು.

ಇದು ಆಪ್ತ ವಲಯದಲ್ಲಿ ಮಾತ್ರ. ಅವರದೇ ಒಂದು ಭಾಗ ಅನ್ನುವಂತಿದ್ದವರೊಂದಿಗೆ ಮಾತ್ರ. ಆ ಹಕ್ಕು ಮತ್ತು ಸ್ವಾತಂತ್ರ ಅವರಿಗೆ ಇತ್ತಾದರೂ ಅನುಭವಿಸುವವರಿಗೆ ಬಹಳ ನೋವಾಗುತ್ತಿತ್ತು. ಅವರು ತಾಯಿ ಎಂಬಂತೆ ಹಚ್ಚಿಕೊಂಡಿದ್ದವರಿಗಂತೂ ಬಹಳ ಕಷ್ಟವಾಗುತ್ತಿತ್ತು. ಇದರಿಂದ ಅವರ ಬಗ್ಗೆ ಎಷ್ಟೇ ಮಮತೆ, ಪ್ರೀತಿ, ಅಭಿಮಾನ ಇದ್ದರೂ ಒಂದಷ್ಟು ದಿನ ಸಿಜಿಕೆ ಬೆಳೆಸಿದವರು ದೂರಾಗಿಬಿಡುತ್ತಿದ್ದರು. ಇನ್ಯಾವುದೋ ಹೊಸ ಪ್ರಾಜೆಕ್ಟಿನಲ್ಲಿ ಅವರ ಜೊತೆ ಮೊದಲಿನಂತೆಯೇ ಕೆಲಸ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಸಿಜಿಕೆ ಏಕಾಂಗಿತನ ಅನುಭವಿಸುತ್ತಿದ್ದರು.

ಆಗ ಹುಟ್ಟಿಕೊಂಡಿದ್ದು, ‪#‎ರಂಗನಿರಂತರ‬# ದ ಕಲ್ಪನೆ. ಅದಕ್ಕೆ ಅವರಿಟ್ಟ ಟ್ಯಾಗ್ ಲೈನ್, THEATRE ADDICTS.

ADDICTSನ ಪ್ರತಿ ಅಕ್ಷರದ ಉಪ ವಿವರಣೆ ಹೀಗೆ: AMAETURE, DRAMATISTS, DIRECTORS, INTIMATE, CREATIVE ಮತ್ತು THEATRE.

ಇಲ್ಲಿ ಅಂದು ರಂಗನಿರಂತರದ ಪ್ರಾರಂಭೋತ್ಸವದ ಕೆಲವು ಚಿತ್ರಗಳಿವೆ.

cgk3 cgk4 cgk6 cgk7 cgk8 cgk9 cgk10 cgk11 cgk12 cgk13 cgk14 cgk15 cgk16 cgk17 cgk18 cgk19

‍ಲೇಖಕರು admin

16 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading