ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ನೇಣು ಕುಣಿಕೆ ಇನ್ನೂ ಹಾಗೆಯೇ ಇದೆ

ಜಾನ್ ಶುಂಠಿಕೊಪ್ಪ

ಆ ನೇಣು ಕುಣಿಕೆ
ಇನ್ನೂ ಹಾಗೆಯೇ ಇದೆ..
ತಿರುಗುವ ಫ್ಯಾನಿಗೆ
ಒ಼ದು ಪೂರ್ಣ ವಿರಾಮವಿಟ್ಟಂತೆ…
 
ಅವರು ಅವಳನ್ನು
ಹೊತ್ತು ಹೋಗಿದ್ದಾರೆ
ಮತ್ತು ನಾನು
ಅವಳೊಂದಿಗೆ ಲೀನವಾಗಿದ್ದೇನೆ …

ಎಡವಿ ಬಿದ್ದ ಕುರ್ಚಿ
ಜೋತುಬಿದ್ದ ಹಗ್ಗ
ಮತ್ತು ಆ
ಕೋಣೆಯ ನೀರವತೆ
ನನ್ನ ಲೀನವಾಗಿಸಿದೆ …
ನಾನು ಲೀನವಾಗಿದ್ದೇನೆ …
 
ಕೋಣೆಯೊಳಗೆ ಇಣುಕುವ
ಅವರ ಗು಼ಡಿಗೆ ಢವಗುಟ್ಟುತ್ತಿದೆ
ಜತೆಗೆ ಕಣ್ಣಂಚಲಿ ನೀರು
ಇದ್ದಾಗ ಇಲ್ಲದವರು
ಇಲ್ಲವಾದಾಗ ತಡವರಿಸುತ್ತಾರೆ…
ನನ್ನಂತೆ …
 
ಆ ನೇಣು ಕುಣಿಕೆ
ಇನ್ನೂ ಹಾಗೆಯೇ ಇದೆ
ಇರಲಿ ಬಿಡಿ
ಪದೇಪದೇ ನನಗೂ
ಕೊರಳೊಡ್ಡಬೇಕಿದೆ…
 

‍ಲೇಖಕರು G

26 July, 2014

2 Comments

    • nasrin

      good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading