ಪಾಶ
ನಾ ದಾಮೋದರ ಶೆಟ್ಟಿ
ಅದೊಂದು ಕರಾಳರಾತ್ರಿ
ಬಾನ ತುಂಬ ದಟ್ಟ ಮೋಡ
-ವಕ್ಕೆಲ್ಲ ಖಿನ್ನತೆ. ಸುರಿಯಿತು ಸುರಿಯಿತು
ಮೋಡ ಮುಗಿಯುವ ತನಕ
ತುಂಬಿದವು ಕೆರೆಕಟ್ಟು, ಒಡೆಯಿತಣೆಕಟ್ಟು.
ಅಲ್ಲೆ ಸನಿಹದಲ್ಲಿ ಜಗನ್ನಿಯಾಮಕನ ಗುಡಿ,
ಒಳಗಿದ್ದ ಅರ್ಚಕರ ದಂಡು
ಮಳೆಯ ಅಬ್ಬರಕಂಡು ಭಯಭೀತರಾಗಿ
ಗೋಪುರದ ಗುಡಿಯೇರಿ
ಶಿವಮಂತ್ರ ಜಪಿಸುತ್ತ ರಾತ್ರೆ ಕಳೆದರು,
ಹಟ್ಟಿಯಲಿ ಕಟ್ಟಿದ್ದ ಗೋವುಗಳ ಮರೆತರು.
ಹಟ್ಟಿಯ ಗೋವುಗಳೊ
ಅರ್ಚಕರಿಗೆ ಕೊಡುತಲಿತ್ತು
ತಮ್ಮೆದೆಯ ಶ್ವೇತಜಲ,
ಸೆಗಣಿ ಮೂತ್ರವೆಲ್ಲ ಸೇರಿ ಪಂಚಗವ್ಯ ಭಕ್ತರಿಗೆ
ದುಡಿಮೆ ಹಟ್ಟಿಯಾಳಿಗೆ.
ಊರಿಗೂರೆ ಕೊಂಡಾಡುವ ದೇಗುಲದ
ಗೋಶಾಲೆ, ಮಳೆಗೆ ಕುಣಿಕೆ ಹರಿಯದಂತೆ
ಸಾಲು ನಿಂತ ಗೋವುಗಳು!
ಧೋ ಧೋ ಮಳೆ ಉಕ್ಕಿತು:
‘ಒಂದು ಮೆಟ್ಲೇರುದಕ
ಪಾದಕೆ ಬಂದಾಳು ಗಂಗಿ
ಎರಡು ಮೆಟ್ಲೇರುದಕ
ಮೊಳಕಾಲು ಮಟ್ಟಕೆ ಬಂದಾಳು ಗಂಗಿ
ಮೂರು ಮೆಟ್ಲೇರುದಕ
ತಲೆಮೇಲೆ ಹರಿದಾಳು ಗಂಗಿ
ಹಟ್ಟೀಯ ಗೋವುಗಳ ನುಂಗಿ.’
ಗೋಪುರದಲಿ ಅರ್ಚಕರು
ಮಲಗಿ ಗೊರಕೆ ಹೊಡೆಯುತಿದ್ದು
ಬೆಳಗಾಗುವ ಸಮಯದಲ್ಲಿ ಇಳಿತ
ಕಿಳಿದರು. ನೆಲತುಂಬಿದ ಕೊಚ್ಚೆಕೆಸರು
2
ಎತ್ತಿಎತ್ತಿ ಕಾಲನಿಟ್ಟು ಬಿಸಿಕಾಫಿಯ
ಚಿಂತೆಕಾಡಿ, ಹಾಲ ಕರೆಯಲೆಂದು ತಿರುಗಿ
ಹಟ್ಟಿಗೆ ಮುಖ ಮಾಡಿದರು.
ಸಾಲು ಸಾಲು ಗೋವುಗಳು
ಗೋಣುಬಿಗಿದು ಹೊಟ್ಟೆಯೂದಿ
ಆಕಾಶಕೆ ಕೆಚ್ಚಲಿಟ್ಟು ನರಳಿ ಸತ್ತಿದ್ದುವು.
ಆ ತೀರದ ಹಟ್ಟಿಯಾಳು ಮುಂಜಾನೆಗೆ ಈಸಿ ಬಂದು
ಸತ್ತ ದನವ ತಬ್ಬಿಕೊಂಡು
ಗೋಗರೆಯುತಿದ್ದನು:
‘ಹೇ ಜಗನ್ನಿಯಾಮಕನೇ, ಈ ಮೂಕಪ್ರಾಣಿಗಳ
ಯಾರು ಕೊಂದರು? ಕರುಣೆಯಿಲ್ಲದ ನೀನು?
ಸ್ವಾರ್ಥಿಗಳಾದ ಅರ್ಚಕರು? ಬದುಕಬೇಕಿತ್ತು ಗೋವುಗಳು
ಈ ಅರ್ಚಕರಿಗೆ ಹಾಲು ಕೊಡಲು, ಭಕ್ತರಿಗೆ ಪಂಚಗವ್ಯ ಕೊಡಲು
ಹಾಗೂ ನಿನಗೆ ಅಭಿಷೇಕ ಮಾಡಲು!’






chennagide..naada avare.goovugala aakrandana kelisutiddee enesutide.
tumba chennagide kavithe…
priya Na.Da., PAASHA tiruvumuruvagi SHAAPA !! aadaroo sariyallave?! ; Go-Gathe chennagide –
Uttara-khandavideko, Mamsavideko, Gundigeya bisi rakta videko !! – andare hege? !!