ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಜೋಡುಗಳಿಗೆ ನಮಸ್ಕಾರ

hazarath ali u

ಹಜರತ್ ಆಲಿ ಯು 

ಅಪ್ಪನ ಹಾರ್ಡ್ವೇರು.

ನನ್ನಪ್ಪ ಹೊಗಳಿಕೆಯ ಹೀರೋ ಅಲ್ಲ,ವಾಸ್ತವದ ಹೀರೋ.

ವಯಸ್ಸು ಅರವತ್ತು ದಾಟಿದರೂ ಕೂತುಣ್ಣದ ನಮ್ಮಪ್ಪಾ ವೃತ್ತಿಯಲ್ಲಿ ಕೃಷಿಕರಾದರೂ ಪ್ರೌವೃತ್ತಿಯಲ್ಲಿ ವ್ಯಾಪಾರಿ. ಹತ್ತಾರುಹಳ್ಳಿಗಳನ್ನು ಸುತ್ತಿ ವಾರದಲ್ಲಿ ಒಂದೋಎರಡೋ ಸಿಗಬಹುದಾದ ಎತ್ತು ಎಮ್ಮೆ ಕರ ಕುರಿಗಳ ವ್ಯಾಪಾರಿ.

ಹರಿದ ಮುರಿದ ಮೆಟ್ಟುಗಳನೇ ಎಳೆದುಕೊಂಡು ಹತ್ತಾರು ಕಿಲೋಮೀಟರು ಊರೂರು ತಿರುಗುವ ನನ್ನಪ್ಪನಿಗೆ ಈ ವಯಸ್ಸಲ್ಲಿ ಇದುಬೇಕಾ ಎಂದು ಕೇಳುವ ಧೈರ್ಯ ನನಗಿಲ್ಲ.

ಧರ್ಮಕರ್ಮಗಳ ಹೆಸರಲ್ಲಿ ಮುಗ್ದಜನರ ಅಙ್ಞಾನವನ್ನೇ ಬಂಡವಾಳವಾಗಿಸಿಕೊಂಡು ಪರರ ಬೆವರಹನಿಯಲ್ಲೇ ಬದುಕುವ ಪರಾವಲಂಬಿಗಳದ್ದೊಂದು ಪ್ರಪಂಚವಾದರೆ ತನ್ನ ಶ್ರಮದ ದುಡಿಮೆಯ ಪ್ರತಿಫಲದಿಂದ ಮಾತ್ರ ಉಂಡುಬದುಕುವ ಕಾಯಕಯೋಗಿ ನನ್ನಪ್ಪ ನನಗೆ ನಿಜವಾದ ಹೀರೋ.

ನಮಿಸಿಕೊಳ್ಳುವ ನಿರ್ಜೀವಿ ವಸ್ತುಗಳಿಗಿಂತಲೂ ಶ್ರಮದ ಪ್ರತೀಕವಾದ ನನ್ನಪ್ಪನ ಕಾಲಜೋಡುಗಳು ನನಗೆ ಗೌರವದ ಪ್ರತೀಕ.

‍ಲೇಖಕರು Admin

20 February, 2016

3 Comments

  1. Krishna

    ಆ ಜೋಡುಗಳಿಗೆ ನನ್ನದೊಂದು ನಮಸ್ಕಾರ..

  2. Hjajarat ali deginal

    Hamara bi ek namaskar!!

  3. Kiran

    ಮನುಷ್ಯರು ನಿಜವಾದ ಅರ್ಥದಲ್ಲಿ ಮನುಷ್ಯರಾದಾಗ ಆಗುವ ಸುಖವೇ ಬೇರೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading