ಸೌಜನ್ಯ ನಾಯಕ
ಏನಾಗಬೇಕೊ ನೀನು ನನಗೆಎಂಬ ಪ್ರಶ್ನೆಯೊಂದು
ಮೂಡಿದೆ ನನ್ನೊಳಗೆ
ಬಗೆಹರಿಸಬಾರದೆ ಬಂದು
ಬಳಿಗೊಮ್ಮೆ ನೀನು
ಅಥವಾ ಉತ್ತರವರಿತು
ನೀ ಮೌನಿಯಾದೆಯೇನು?
ಕಣ್ಣ್ಮುಚ್ಚಿದರೆ ಕಾಡುವ
ಆ ನಿನ್ನ ಕಂಗಳು
ಹಣೆಯ ಮೇಲೆ ಕುಣಿವ
ಆ ನಿನ್ನ ಮುಂಗುರುಳು
ಕೆಡಿಸುತಿದೆ ಮನವ
ಹಂತ ಹಂತವಾಗಿ
ಬೆಳೆವಂತೆ ಅದುಮಿಟ್ಟ
ಪ್ರೀತಿ ಹೆಮ್ಮರವಾಗಿ

ನಿನಗಾಗಿ ಕಟ್ಟಿಹೆನೊಂದು ಮಹಲ
ಈ ಎದೆಯ ಗೂಡಲಿ
ಪ್ರೀತಿ ಕದವನೊಮ್ಮೆ ಸರಿಸಿ ಬಾ
ಆ ಕೋಮಲ ಕೈಗಳಲಿ
ದಿನವೂ ನಿನ್ನ ಹಿಂಬಾಲಿಸುವುದೊಂದೆ
ಈ ಪ್ರೇಮಿಯ ದಿನಚರಿ
ಮನಸಿಗೆ ಮುದ ನೀಡುವುದು
ರಜೆ ಇಲ್ಲದ ನಿನ್ನ ಹಾಜರಿ
ಇಷ್ಟಾದರೂ ನಿನ್ನ ಅರಿವಿಗೆ
ಬಂದಿಲ್ಲವೆ ನಾನು
ಬಂದೊಮ್ಮೆ ಬಗೆಹರಿಸು ಗೆಳತಿ
ಈ ತಳಮಳವ ನೀನು
ನಿನ್ನ ಪ್ರೀತಿಯೆಂಬ ನೌಕೆಯಲಿ
ನಾನಾಗಬೇಕು ನಾವಿಕ
ಕೆಲವೊಮ್ಮೆ ನೀ ಸಿಗಲಾರದ ಕಲ್ಪನೆ
ನನ್ನಾಗಿಸುವುದು ಭಾವುಕ
ಈ ಹುಚ್ಚು ಪ್ರೇಮಿಯ
ಪ್ರೀತಿ ಪರಿಯ ನೀ ಅರಿವವರೆಗೂ
ನಿನ್ನ ಹಿಂಬಾಲಿಸುವ ನಾನು ಮೂಖ ವೀಕ್ಷಕ






0 Comments