ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಸೆಯೊಂದು ಇರಲೇಬೇಕಲ್ಲವೆ?’ – ಪ್ರತೀಭಾ ಕಾಗೆ ಕವನ

ಡಾ ಪ್ರತೀಭಾ ಕಾಗೆ


ನಿತ್ಯ ನೂರಾರು ಗೊಂದಲಗಳು
ಮುಕ್ತಿಯುಂಟೆ ಅದಕೆ
ಸೂರ್ಯ ಉದಯದೊಂದಿಗೆ
ಆರಂಭಿಸುವ ಆ ನೀರಿಕ್ಷೆಗಳು
ಹೊತ್ತು ಮುಳುಗಿದರು
ತೀರಲಿಲ್ಲವಲ್ಲವೇ?
ಮತ್ತೆ ಕನಸಿನೊಂದಿಗೆ
ಹಾಸಿಗೆಯ ಮೇಲೆ
ಮಲಗಲು ನಿದ್ರೆ
ಸುಳಿಯದು ಎಷ್ಟೊ
ವಿಷಯಗಳು ಇಂದಿಗೂ
ಅಸ್ಪಷ್ಟ ಮನದ ಕೊಣೆಯನೊಮ್ಮೆ
ಇಣುಕಿ ನೊಡಲು
ಅವಿಶ್ರಾಂತ ದುಡಿಮೆಯ
ಬಯಕೆ ತೀರಲಿಲ್ಲ
ದಾಹ ಉನ್ನತಿಯದೊ
ಸಂಪತ್ತಿನದೊ ,ಹೆಸರುಗಳಿಕೆಯ
ದಾಹವೇ ಇರಬಹುದೆನೋ
ಯಾವದು ಅತಿಯಲ್ಲ
ಆಸೆಯೊಂದು ಇರಲೇಬೇಕಲ್ಲವೆ?
ತೀರುವದೊ,ಇಲ್ಲವೋ ಯಾರಿಗು
ತಿಳಿಯದೆ ಹೋದರು
ಕನಸು ಕಾಣುವದರಲ್ಲೆನು
ತಪ್ಪು ಅಂದುಕೊಂಡದ್ದೆಲ್ಲ
ಆಗಲೇಬೆಕೆಂಬ ನಿಯಮವಿಲ್ಲ
ಆದರೂ ಕನಸು ಕಾಣುತಲೆ
ಇರಬೇಕು ನನಸಾಗುವ
ಆಸೆಯೊಂದನ್ನ ಮನದಲ್ಲೆ
ನೆನೆಯುತ
 

‍ಲೇಖಕರು G

19 September, 2014

4 Comments

  1. mmshaik

    nice..very nice madam..

  2. pratibha kage

    thankyou

  3. ಅಕ್ಕಿಮಂಗಲ ಮಂಜುನಾಥ

    ಒಂದೇ ಆಸೆಯಿದ್ದರೆ ಬದುಕು ಸಾಗದು ಮೇಡಂ.ಹತ್ತು…ನೂರು….ಸಾವಿರವಾದರೂ ಇದ್ದರೆ…ಎಟುಕಿಸಿ ಕೊಳ್ಳಲು ಪ್ರಯತ್ನಿಸಿದರೆ,ಒಂದಾದರೂ ಕೈಗೂಡ ಬಹುದು. ಪದ್ಯ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading