ಆಶಾ ಜಗದೀಶ್
ಗಡಿಯಾರದ ಮುಳ್ಳುಗಳಿಗೆ
ಬೆಂಕಿ ಹಚ್ಚಿ
ಅವುಗಳ ಅಪರಾಧ:
ಸದಾ ಚಲಿಸುತ್ತವೆ
ಭೂಮಿಯನ್ನು ಕಟ್ಟಿ
ಸೆರೆಗೆ ಹಾಕಿ
ಅದರ ಅಪರಾಧ:
ಸದಾ ತಿರುಗುತ್ತದೆ

ಜಗದ ನಿಯಮವನ್ನು
ಬದಲಾಯಿಸಿ
ಮತ್ತು
ಯಾರೂ ಚಲಿಸಬಾರದೆಂದು
ಫರ್ಮಾನು ಹೊರಡಿಸಿ
ಮತ್ತೆ
ಚಲಿಸುವ ರಕ್ತವನ್ನು?!
ಮಿಡಿಯುವ ಹೃದಯವನ್ನು?!
ತುಂಬಿ ಹೊರಚೆಲ್ಲುವ ಉಸಿರನ್ನು?!
ಸಾಕು ನಿಲ್ಲಿಸಿ!






0 Comments