ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆಯುರ್ವೇದ’ದಿಂದ ‘ಕಾಮ’ಕ್ಕೆ..

ಗುರು ಆಕೃತಿ

ಇವತ್ತು ಒಬ್ಬರು ವಯಸ್ಕರು (ಸುಮಾರು ಐವತ್ತು ದಾಟಿದೆ ಅನ್ನೋದು ನನ್ನ ಅಂದಾಜು) ಆಕೃತಿ ಹೊಕ್ಕಿ, ಆಯುರ್ವೇದ ಗುಣ ಇರುವ ಈ ಸೊಪ್ಪು ತರಕಾರಿ ಹಣ್ಣು ಹಂಪಲುಗಳ ವಿವರ ಇರುವ ಪುಸ್ತಕ ಕೊಡಪ್ಪ ಅಂದ್ರು.

ನಾನು ರ್ಯಾಕ್ ನಿಂದ ಹಲವು ಪುಸ್ತಕ ಎಳೆದುಕೊಟ್ಟೆ.

ಅಡ್ಡಡ್ಡ ಜೋಡಿಸಿ ಇಟ್ಟಿರ್ತಿವೆಲ್ಲ. ಸ್ಪೈನ್ ಮೇಲೆ ಏನು ಬರೆದಿರುತ್ತೋ ಅದನ್ನು ಓದಿ ಪುಸ್ತಕ ಹೊರಗೆ ಎಳೆದು ಕೊಡ್ತೀನಿ.

ಹಾಗೆ ‘ಆಯುರ್ವೇದ ಪ್ರಕೃತಿ ಚಿಕಿತ್ಸೆ’ ಅಂತ ಬೆನ್ನಿನ ಮೇಲೆ ಇದ್ದ ಪುಸ್ತಕ ಎಳೆದು ಅವರ ಕೈಗೆ ಇಟ್ಟೆ.

ಅವರು ಪುಸ್ತಕ ಕೈಗೆ ತೆಗೆದುಕೊಂಡವರೆ, ಹೆಹೆ ಇವೆಲ್ಲಾ ಬೇಡಪ್ಪ ಅಂದ್ರು.

ಆಯುರ್ವೇದ ಪುಸ್ತಕ ಸರ್ ಅಂತ ಆಕಡೆ ಕಣ್ಣು ಬಿಟ್ಟು ನೋಡಿದರೆ ಸ್ಪೈನ್ ನಿಂದ ಕವರ್ ಗೆ ಅದು ‘ಕಾಮದ ಗುಟ್ಟು’ ಆಗಿಬಿಟ್ಟಿದೆ.

ನಾನು ತಬ್ಬಿಬ್ಬಾಗಿ, ವಿವರಿಸಿದೆ.

ಹಹಹ ನಗೆ ಬೀರಿದರು ಅವರು. ಪುಸ್ತಕ ಪಕ್ಕಕ್ಕೆ ತೆಗೆದಿಟ್ಟೆ ಅನ್ನಿ.

Don’t judge books by their cover ಅಂತಾರೆ Never judge books by their spine ಅಂತ ಅದನ್ನು ವಿಸ್ತರಿಸಬಹುದೇನೋ!

 

‍ಲೇಖಕರು Avadhi

28 November, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading