ಸೂಗೂರೇಶ ಹಿರೇಮಠ
ಆಫ್ಘಾನಿಗೊಬ್ಬ ಗಾಂಧಿ ಬೇಕಾಗಿದ್ದಾನೆ
ಬಂದೂಕಿಗೆ ಎಲುಬಿನ ಎದೆಕೊಡಲೊಬ್ಬ
ಗಾಂಧಿ ಬೇಕಾಗಿದ್ದಾನೆ
ನೆತ್ತರವಿಲ್ಲದ ಜಯಕ್ಕೆ
ಅಲ್ಲೊಬ್ಬ ಗಾಂಧಿ ಅಗತ್ಯವಿದ್ದಾನೆ
ಕೋವಿಯೊಡನೆ ಕೋಲು ಹಿಡಿದು ಹೋರಾಡಲು
ಮಹಿಳೆ ಮಕ್ಕಳೆಂಬ ದೈವಗಳ ಕಾಯಲು
ಆಫ್ಘಾನಿಗೊಬ್ಬ ಗಾಂಧಿಬೇಕಿದ್ದಾನೆ..

ಆತಂಕದ ನೆತ್ತಿ ಸವರಿ ಸಂತೈಸಲು
ನಳಿಕೆಯ ನಡುಗಿಸಲು
ಬಡಕಲು ದೇಹದ ಗಾಂಧಿ ಬೇಕಿದ್ದಾನೆ..
ಸಬ್ ಕೋ ಸನ್ಮತಿ ದೇ ಭಗವಾನ್
ಪ್ರಾರ್ಥನೆಯ ಅರ್ಥೈಸಲು
ಜರೂರು ಒಬ್ಬ ಗಾಂಧಿ ಬೇಕಿದ್ದಾನೆ
ಶಾಂತಿ ಎಂದರೇನೆಂದು ಜಗಕೆ ಮತ್ತೆ ಸಾರಲು
ಗಾಂಧಿಯೆಂಬ ಬೆಳಕೊಂದು ಬೇಕಾಗಿದೆ.






ಅಲ್ಲಿ ಗಡಿನಾಡು ಗಾಂಧಿ ನೆನಪಿನಿಂದ ಅಳಿಸಿಹೋಗಿದ್ದಾನೆ….ಭಾರತದಲ್ಲಿಯ ಗಾಂಧಿ ಹಾಗೆ!…ನಮ್ಮಲ್ಲಿ ಅಂತರಂಗದಲ್ಲಿ ಸತ್ತರೂ ಪ್ರತಿಮೆಗಳಲ್ಲಾದರೂ ಉಳಿದಿದ್ದಾನೆ ಗಾಂಧಿ!…ಅಲ್ಲಿ ಪ್ರತಿಮೆಗಳೂ ವರ್ಜ್ಯ!….ಆದರೂ ನಿಮ್ಮ ಸ್ಪಂದನಕ್ಕೆ ನನ್ನದೂ ಜೋಡಿಸುತ್ತೇನೆ….