ಎಂ ಎಂ ಶೇಕ್
ಎಲ್ಲೋ ದೂರ ..
ಜಗದ ಶಬ್ದಗಳನು ದಾಟಿ
ಬಂದ ಒಂಟಿ ಮೌನಕ್ಕೆ
ಜತೆಯಾಗುತ್ತದೆ ಈ
ಹೃದಯ ಬಡಿತದ ಖಾಲಿ ಮನೆ.
ಇಲ್ಲಿ ನಾ ಕೊಡುವ ಬಾಡಿಗೆಗೆ
ಜೀತಕ್ಕುಂಟು ಆದರೂ ..
ಮುಗುಳ್ನಕ್ಕ ಆ ತುಟಿಗೇನು ಶಿಕ್ಷೆ ..?

ಜಗಸುತ್ತಿ ಬಂದ
ನಿಂದೆಗಳ ಹೆಜ್ಜೆಗಳಿಗದು
ಸರಪಳಿ ಕಟ್ಟಿ ಮಣ್ಣಲ್ಲಿ ಹುಗಿದರೂ
ತೊಗಟೆ ಕಳಚಿ ಸಸಿಯೊಂದು ನಕ್ಕಂತೆ …
ಇದೆ, ಪ್ರತಿ ಕ್ಷಣಕ್ಕೊಂದು
ಹೊರಳಾಟ …..
ನಾ ನಿಲ್ಲಬೇಕು ಮುಖಕ್ಕೊಂದು
ಮುಖವಾಡ ಧರಿಸಿ ..
ಏಕೆಂದರೆ …..
ಮೌನ ಕೆದರಬೇಕಿದೆ ……. !!!!!!
ಅದು ಈ ಭುವಿಯ ಭಾಷೆಯಲ್ಲ …
ಹೀಗೇ ಕಳೆದುಹೋಗಲು
ನಾ ಸಿದ್ಧನಿಲ್ಲ ……. !!!!
ಇಷ್ಟಕ್ಕೆಲ್ಲಾ ನಾನತ್ತು
ಬರುವ ಅಗತ್ಯವುಂಟೇ …..????!
ನೀ ಕುಳಿತು ಕಣ್ಮುಚ್ಚಿದ
ಧ್ಯಾನಕ್ಕೆಷ್ಟು ಶಿಷ್ಯವರ್ಗ ….
ಶತಮಾನಗಳೇ ಗತಿಸಿದರೂ
ಮಾಸದ ಮುಗುಳ್ನಗೆಗೆ
ಹೊತ್ತಿಕೊಂಡ ಕರ್ಪೂರ
ಅದನ್ನು ಹೆಕ್ಕುವ ಧ್ಯಾನಕ್ಕೆ
ಕಿಲುಬು ಹತ್ತಿದ ಶತಮಾನ ನನ್ನದು …… !!!!!






ಚೆನ್ನಾಗಿದೆ .
Excellent
Magical words