ಗರತಿಯರ ನೆನೆಯುತ್ತಾ
-ವಿದ್ಯಾಶಂಕರ್ ಹರಪನಹಳ್ಳಿ
ಮುಸ್ಸಂಜೆಯ ಹೊತ್ತು
ಮಂಜು ಅಡರುವ ಹೊತ್ತು
ಲೋಕದ ಸರಿ-ತಪ್ಪುಗಳು,
ಒಂದಾಗುವ ಹೊತ್ತು…
ದೀಪದ ಕಂಬದ ಬಳಿ
ನಿಂತಿದ್ದಳು ಯಾರದೋ ನಿರೀಕ್ಷೆಯಲಿ
ಡಾಳದ ಬಣ್ಣ ಬಳಿದ ಪೇಲವ ಮುಖ
ಬಾಡಿದ ತುಟಿಗೆ ಕೆಂಪು ರಂಗು…
ಗೀಲಿಟಿನದಾದರು ಹೊಳೆಯುವ ಆಭರಣ…
ಆಕಾಶದಲ್ಲಿ ಕಾರ್ಮುಗಿಲು…
ಅದರ ಮಧ್ಯೆ ಅಳುವ ಒಂಟಿ ನಕ್ಷತ್ರ
ಭೂಮಿ ಮೇಲೆ ನರರ ಗಡಿಬಿಡಿ…
ಕುಶಲವೇ? ಎಂದೇ
ಮಾತಿಗೆ ಮುನ್ನವೇ ವ್ಯವಹಾರ…
ಗಂಟೆ ಸುಖಕ್ಕೆ ಮುನ್ನೂರು
ಪೂರ್ತಿ ರಾತ್ರಿಗೆ ಸಾವಿರ ಎಂದಳು
ನಗುವ ನೆಪದಲಿ ಹಲ್ಲ ತೋರುತ್ತಾ
ನಾನೆಂದೆ ನಿನ್ನ ಆತ್ಮದ ಬೆಲೆ ಏನು?
ಯಾಕೋ ಹುಚ್ಚು ನಗುತ್ತಾ, ನಡುವೆ ಅಳುತ್ತಾ
ಮೊದಲು ಆತ್ಮಾ ಮಾರಿ ನಂತರ ದೇಹ
ಹೇಗೂ ಆತ್ಮಕ್ಕೆ ಬೆಲೆ ಇಲ್ಲಾ ಸ್ವಾಮೀ…
ಎಂದೆನುತ ಹೊರಟೆ ಹೋದಳು…
ಅಂದು ಊರ ಗರತಿಯರಿಂದ
ಗಂಡನ ಒಳಿತಿಗೆ ದೇವಸ್ಥಾನದಲ್ಲಿ ದೊಡ್ಡ ಪೂಜೆ
ನಾನು, ಗಂಡನ ಪಾದಧೂಳಿಯ
ಹಣೆಗೆ ಒತ್ತಿಕೊಳ್ಳುವ ಗರತಿಯರ ನೆನೆದು
ನಿಟ್ಟುಸಿರಾದೆ
]]>





nice one ….
Sooper kavithe ri VidyaShankar avare. Bheemana amavaseya kattalalli, keechakiriddarendu nenapu maadikotri, dhanyavadagaLu.