ಆಕೆ…

ಸತೀಶ್ ಶೆಟ್ಟಿ ವಕ್ವಾಡಿ

ಆಕೆಯೆಂದರೆ ಹಾಗೆ…
ಅವಳದಲ್ಲದ ಬದುಕಲಿ ಸದಾ ಬೇಯುವವಳು.

ಅಮ್ಮನ ಕಣ್ಣೀರು, ಅಪ್ಪನ ನಿಟ್ಟುಸಿರು,
ಗಂಡನ ಕ್ರೋದ, ಮಕ್ಕಳ ಅಳು.
ಯಾವುದೂ ಅವಳದ್ದಲ್ಲ, ಆದರೂ ಅವಳದ್ದಾಗಿಸಿಕೊಂಡು
ಮತ್ತೆ ಮತ್ತೆ ಧಹಿಸುವಳು, ಬೆಂಕಿಯ ಕಾವು ಯಾರನ್ನೂ ತಟ್ಟದಂತೆ.

ಆಸ್ತಿ ಮಾರಿ, ಸಾಲ ಹೊತ್ತು, ಯಾರೋ ಅನಾಮಿಕನಿಗೆ
ಮಗಳ ಧಾರೆಯೆರೆದ ಹೆತ್ತವರ ಒದ್ದೆ ಕಣ್ಣಾಲಿಗಳಲಿ
ಇವಳದ್ದೆ ನೆರಳು.

ಸಾಲದ ಹೊರೆಯೊತ್ತು ಮಲಗಿರುವ ಗಂಡನ ಪಕ್ಕ,
ನಿದ್ದೆಗೆಟ್ಟು ನಾಳೆಗಳ ಕಟ್ಟಲು
ಹೂವು ಪೋಣಿಸುವವಳು ಇವಳೆ.

ನಾಳೆಗಳ ಕನಸಿನ ಬಾರ ಹೊತ್ತು ಶಾಲೆಯ ಪಾಠ
ಅರಗಿಸಿಕೊಳ್ಳಲಾಗದ ಹತಾಶ ಕಂದನಿಗೆ,
ಅಡುಗೆ ಮನೆಯ ಕಪ್ಪುಗಟ್ಟಿದ ಮೂಲೆಯಲ್ಲಿ
ಮತ್ತೆ ಅದನ್ನು ಅರ್ಥೈಸುವವಳು ಅವಳೆ.

ತರಕಾರಿಯವನ ಸಿಡಿಮಿಡಿ, ಹಾಲಿನವಳ ಧಾವಂತ,
ಶಾಲಾ ವಾಹನದ ಹಾರ್ನಿನ ಮಾರ್ದನಿ,
ಕಸದವನ ಕಿರಿಕಿರಿ, ಪಕ್ಕದ ಮನೆಯವರ ಗುಸುಗುಸು
ಗಾಸಿಪ್ಪುಗಳಿಗೆಲ್ಲ ಹೊಣೆ ಇವಳೆ.

ಎದುರು ಮನೆಯಲ್ಲೊಬ್ಬ ತಲೆಮಾಸಿದ ಅಂಕಲ್ಲು,
ತಾನು ಕುಳಿತ ಸಿಟಿಗೆ ಪದೇ ಪದೇ ಒರಗಿ ನಿಲ್ಲುವ ಬಸ್ಸಿನ ಕಂಡಕ್ಟರ್,
ಹಲ್ಲು ಗಿಂಜುತ್ತ ಕೆಲಸ ಬಿಟ್ಟು ಬೇರೇನೋ ಮಾತಾಡುವ
ಮೇಲಾಧಿಕಾರಿಯರ ಕಣ್ಣೊಳಗಿನ ಕ್ಷುದ್ರ ಆಸೆಗಳಿಗೆ ಕಾರಣ ಇವಳೆ…

ಆಕೆಯೆಂದರೆ ಹಾಗೆ..,
ತನ್ನದಲ್ಲದ ಆಸೆಗೆ ಬೆವರಾಗುವವಳು,
ತನ್ನದಲ್ಲದ ಕನಸಿಗೆ ಕಣ್ಣಾಗುವಳು,
ತನ್ನದಲ್ಲದ ಬದುಕಿಗೆ ಬದುಕ ಸವೆಯುವವಳು…

‍ಲೇಖಕರು Avadhi

March 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shubha

    ತುಂಬಾ ಚೆನ್ನಾಗಿದೆ . ಮನ ಮುಟ್ಟುವ ನೈಜ ಘಟನೆಗಳ ಬಗ್ಗೆ ಚೆನ್ನಾಗಿ ಮೂಡಿ ಬಂದಿದೆ ಕವನ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: