ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕೆ..

ರೂಪಾ ಮಂಜಪ್ಪ

ಹೇಳಲೇ ಬೇಕೆಂದು ಹೋದವಳು..
ಬರೆಯಲು ಕೂತಳು..
ಹೇಳಲು ಅವಕಾಶ ಸಿಗಲಿಲ್ಲವೆಂದಲ್ಲ..
ಜೋರು ಬಾಯಿಗಳ ನಡುವೆ..
ಕೇಳುವವರಿಲ್ಲವೆಂದರಿತು ಸುಮ್ಮನಾದಳು.. 
ಆಸ್ತಿ ಐಶ್ವರ್ಯ ಕೇಳಿದವಳಲ್ಲ..
ತುಸು ಗೌರವ ಕೇಳಿದವಳು..
ಸಾಕಷ್ಟು ಜೀವನ ಒಲೆಯ ಮುಂದೆ ಕಳೆದು..
ತುಸು ಪ್ರೀತಿ,ಸ್ವಾತಂತ್ರ್ಯ ಬಯಸಿದವಳು..
ಅಂದ್ಕೊಂಡದ್ದೆಲ್ಲ ಮಾಡಬೇಕೆಂದಲ್ಲ, ಯಾವ ಜಿದ್ದು ಇವಳಿಗಿಲ್ಲ..
ಬೇಕಾಗಿರುವುದನ್ನೇ ಮಾಡಲು..
ಸೋಲುವ ಭಯವಿಲ್ಲ..
ಗೆದ್ದ ಅಹಂ ಇಲ್ಲ..
ಬರೀ ಬಯಸಿದವಳು.. ತುಸು ಗೌರವ 

ಯಾವುದು ಸಿಗದೇ ಹೋದಾಗ..
ಮೌನಿಯಂತೆ ಮರುಮಾತಾಡದೆ ಬಂದು ಹಾಸಿಗೆ ಹೊದ್ದು ಮಲಗಿದವಳು..
ಮತ್ತೆ ಎದ್ದು ಹೋರಾಡುತ್ತಾಳೆ ಬದುಕಲು ಎಂದುಕೊಂಡರೆ….
ಆಕೆಗೆ ಅದೆ ಕೊನೆ ಗಳಿಗೆ ಎಂದೂ ತಿಳಿಯದೆ..
ನಿದ್ರೆ ಹೋದವಳು..
ಬೆಳಗಾಗುವುದರೊಳಗೆ ತಣ್ಣಗಾಗಿದ್ದಳು..

‍ಲೇಖಕರು Avadhi

26 June, 2021

1 Comment

  1. Deepa G S

    Ondodu padadalli ondondu bhavanegale tumbidave. it’s very nice poem siss

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading