-ರಾಜು ಹೆಗಡೆ
ಸೂರ್ಯ ಮುಳುಗುತ್ತಿದ್ದಾನೆ
ಎತ್ತರದ ಮರ ನೆಲಕೆ
ಉರುಳಿದೆ ತೊಡೆ ಮುರಿದು
ಎಲೆ ಬಾಡಿವೆ
ಜೀವರಸ ಒಣಗುತ್ತಿದೆ
ಎಂಥ ಮರವಾಗಿದ್ದರೂ,ಇಲ್ಲಿ
ಹಕ್ಕಿ ಹಾಡಿದ್ದವು
ಮಕ್ಕಳಾಡಿದ್ದರು
ಇದರ ಕೆಳಗೆ ಆಕಳು, ಎಮ್ಮೆ ಮೆಂದು
ಮೆಲುಕಾಡಿಸಿದ್ದವು, ಪ್ರೇಮಿಗಳು
ಕೂತು ಮಾತಾಡಿದ್ದರು, ಜತೆಗೆ
ನರಿಯು ಊಳಿಟ್ಟಿತ್ತು
ಭೂಮಿ ನಡುಗಿತ್ತು
ನಕ್ಷತ್ರ ಉದುರಿದ್ದವು. ಈಗ ಆ ಮರ
ತೊಡೆ ಮುರಿದುಕೊಂಡಿದೆ
ಶ್ರೀ ಕೃಷ್ಣ ಎಲ್ಲೊ ಹೋಗಿದ್ದಾನೆ
ಪಾಂಡವರ ಕರೆದುಕೊಂಡು.








0 Comments