ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಷ್ಟು ಒತ್ತೊತ್ತಾಗಿ ಇಬ್ಬರೂ ಮಲಗಲು ನಿಜಕ್ಕೂ ಸಾಧ್ಯವಿರಲಿಲ್ಲ…

ಮರಣದ ನಂತರ

ಕಾಜೂರು ಸತೀಶ್

ಆ ರಾತ್ರಿ ಕನಸ್ಸು ಬಿದ್ದಂತೆ
ಅಷ್ಟು ಒತ್ತೊತ್ತಾಗಿ ಇಬ್ಬರೂ ಮಲಗಲು
ನಿಜಕ್ಕೂ ಸಾಧ್ಯವಿರಲಿಲ್ಲ .
 
ಎಷ್ಟೆಂದರೆ,
ನಡುವೆ ಒಂದು ನೂಲನ್ನೂ ಒಳಗಿಳಿಸಲಾಗದ್ದಷ್ಟು.
ಅಷ್ಟು ಅಪ್ಪಿಕೊಂಡು,
ಅಷ್ಟು ಅಂಟಿಕೊಂಡು .
 
ಎಚ್ಚರವಾದಾಗ,
ಅದು ಕನಸ್ಸೆಂದು ತಿಳಿದಿದ್ದರೂ ,
ಖುಷಿಯೋ ಖುಷಿ
ಬಿರಿಯುವ ನಗು
ಪುಟಿಯುವ ಉತ್ಸಾಹ
ಉಕ್ಕುವ ಉನ್ಮಾದ .

ಮರುದಿನ ಅವನು ಹೇಳಿದ-
‘ನಮ್ಮಿಬ್ಬರಿಗೂ ಸ್ಮಶಾನದಲ್ಲಿ
ಜಾಗ ಬುಕ್ ಮಾಡಿಸಿ ಬಂದಿದ್ದೇನೆ ‘.
 
ಒಳಗೆ ಸೇರಿದ ಕಳ್ಳು
ಹಾಗೆ ಹೇಳಿಸಿತ್ತು.
 
ಆದರೂ,
‘ಆಯ್ತು ‘ ಎಂದೆ.
 
ಹೇಗೋ ಮುದುರಿಕೊಂಡು
ಅಂಟಿಕೊಂಡು ಮಲಗಿಬಿಡಬಹುದು-
ಸ್ವಲ್ಪ ಜಾಗ ಸಿಕ್ಕರಷ್ಟೇ ಸಾಕು .
 
ಸತ್ತ ಮೇಲೆ ,
ಮಣ್ಣಿನೊಳಗೆ
ಒಟ್ಟೊಟ್ಟಿಗೆ ಚಟ್ಟದಲ್ಲಿದ್ದಾಗ ಮಾತ್ರ
ನಮ್ಮಿಬ್ಬರಿಗೆ ರತಿಸುಖ ಸಿಗುವುದು .
 
ಅಷ್ಟೇ ಸಾಕು.
**
ಮಲಯಾಳಂ ಮೂಲ- ದೇವಸೇನ
ಕನ್ನಡಕ್ಕೆ -ಕಾಜೂರು ಸತೀಶ್
 

‍ಲೇಖಕರು G

24 January, 2015

2 Comments

  1. Anonymous

    ಸತ್ತ ಮೇಲೆ ,
    ಮಣ್ಣಿನೊಳಗೆ
    ಒಟ್ಟೊಟ್ಟಿಗೆ ಚಟ್ಟದಲ್ಲಿದ್ದಾಗ ಮಾತ್ರ
    ನಮ್ಮಿಬ್ಬರಿಗೆ ರತಿಸುಖ ಸಿಗುವುದು .

  2. ashwini rao.k.n.

    Kavithe eno super aithi saar..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading