ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಹೊಸಮನಿ ಕವಿತೆ- ನೆರಳಾಗಲಿ ಮುಡಿಯಾದರೊ…

ಅಶೋಕ ಹೊಸಮನಿ

ಆ ಉಸಿರನ್ನಾದರೊ ತುಸು ಕಡ ಕೊಡುವೆಯಾ ಗೆಳೆಯ
ಆ ನಾದ ನಿನಾದದ ಹೆಜ್ಜೆಗಳನ್ನಾದರೊ ಸರಿಸು ಗೆಳೆಯ

ಆ ನಿನ್ನ ಡೋಲಿಯ ನೆರಳ ಹಿಡಿ ಬೆಳಕನ್ನಾದರೊ ಹಂಚು ಗೆಳೆಯ
ಸೆರಗಿನ ಹೂವುಗಳ ಕಂಬನಿಯನ್ನಾದರೊ ಸ್ಪರ್ಶಿಸು ಗೆಳೆಯ

ಸೋಗಿನ ಬೀದಿಗಾದರೊ ಹಗೆಗಳ ಬಗೆ ಧಗೆಯೊ
ಮುಳ್ಳಿಗೂ ಹಾದಿ ತೋರುವೆಯಾ ಗೆಳೆಯ

ಆತ್ಮದ ತೆನೆಯನ್ನಾದರೊ ದಾಟಿಸು ಗೆಳೆಯ
ಬೇರ ಕೊರಳನ್ನಾದರೊ ಕತ್ತರಿಸಿ ಬಿಡು ಗೆಳೆಯ

ಗೂಢ ನೆರಳ ಸೇತುವೆಯ ರವುದಿಯನ್ನಾದರೊ ತೂರಿ ಬಿಡು ಗೆಳೆಯ
ಅರಳುವ ಕಾಳನ್ನಾದರೊ
ಹಂಬಲಿಸೊ ಬಟ್ಟೆಯನ್ನಾದರೊ ಸಂತೈಸು ಗೆಳೆಯ

ಧರಿಸು ಕರಿಜಾಲಿಯ ತೊಗಲನ್ನಾದರೊ
ಲೋಕದಾಚೆ ಬಿಸಾಕು ಮುಷ್ಟಿ ಮನವನ್ನಾದರೊ ಗೆಳೆಯ

ಬಾರಿಹಣ್ಣ ನೆತ್ತರನ್ನಾದರೊ ಮಾತಾಡಿಸು ಗೆಳೆಯ
ಗೂಢ ಗಡ್ಡೆಗಳ  ಆನೆ ಹೆಜ್ಜೆಗಳನ್ನಾದರೊ ಅರಿಯಬೇಕು ಗೆಳೆಯ

ಕಡು ಬೆಂಡಾಲಿಯಾದರೊ ನಕ್ಕು ನಲಿಯಲಿ ಗೆಳೆಯ
ತಾಕಿಹ ಉಸಿರಾದರೊ ಬೆಂದಿದೆಯೊ ಗೆಳೆಯ

ಕಡು ರೋದನಕ್ಕೊ
ಆ ಹಾಸಿಗಲ್ಲಿಗಾದರೊ
ಈ ಮಣ್ಣಿಗಾದರೊ
ನೀನೇ ಗತಿ ಮತಿ ಗೆಳೆಯ

ಕಡು ಆತ್ಮಕ್ಕೊ,
ನೇತ್ರಕ್ಕೊ ,
ಮಣ್ಣೆರೆಚಿದೆಯಾ ಗೆಳೆಯ

ಧಿಕ್ಕರಿಸಿದ್ದೇನೆ ಗೆಳೆಯ
ಕಡು ಸಂತೆಯ ಜಾಡನ್ನೊ
ಮುಡಿಯಾದರೊ ನೆರಳಾಗಲಿ ಗೆಳೆಯ

‍ಲೇಖಕರು Admin

7 October, 2022

1 Comment

  1. ಕೆ. ಶ್ರೀ ನಿವಾಸ. ಬೈಲ್ ಪತ್ತಾರ

    ಛಾಯಾಚಿತ್ರ ಅದ್ಭುತವಾಗಿದೆ ಕವನದ ಶೀರ್ಷಿಕೆ ಚನ್ನಾಗಿದೆ ಕವನದಲ್ಲಿ ಪದ ಪುಂಜ ಜೋಡಣೆ ಚನ್ನಾಗಿದೆ ನಿಮ್ಮ ಸಾಹಿತ್ಯ ವಲಯದಲ್ಲಿ ನವ ನವೀನ ಭಾವಸ್ಪರ್ಸದ ನೆಲದ ಸೊಗಡಿನ ಭಾಷೆ ಪರಿಕಲ್ಪನೆ ಇರಲಿ ಧನ್ಯವಾದಗಳೊಂದಿಗೆ.
    ಕೆ.ಶ್ರೀನಿವಾಸ್ ಅಂಕೋಶಿ ಬೈಲ್ ಪತ್ತಾರ. ಮರ್ಲಾನಹಳ್ಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading