ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಕುಮಾರ್ ಬರೆವ ಟೆಕ್ ಅಂಕಣ

ಅಶೋಕ್ ಕುಮಾರ್. ಎ

ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ

ಹಳೆಯ ಮೊಬೈಲ್ ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳಿಲ್ಲವಷ್ಟೇ?ಆದರೆ ಈಗಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳದ್ದೇ ಕಾರುಬಾರು.ಈ ಸವಲತ್ತಿಗಾಗಿ,ಹಳೆಯ ಫೋನ್‌ಗಳಿಗೆ ವಿದಾಯ ಹೇಳಬೇಕೇ?ಅವನ್ನು ಸ್ಪರ್ಶ ಸಂವೇದಿಗಳಾಗಿಸಲು ಬಾರದೇ?ಕೇಂಬ್ರಿಜ್

ವಿವಿಯ ಸಂಶೋಧಕರು ಹೀಗೆ ಪರಿವರ್ತಿಸಲು ತಂತ್ರಾಂಶದ ದಾರಿ ಕಂಡುಕೊಂಡಿದ್ದಾರೆ.ತೆರೆಯ
ಮೇಲೆ ಸ್ಪರ್ಶಸಂವೇದಿ ತೆರೆಯ ಮೇಲೆ ಮಾಡಿದಂತೆ ಮುಟ್ಟಿ,ತಟ್ಟಿದಾಗ, ಉಂಟಾಗುವ ಶಬ್ದದ
ಆಧಾರದ ಮೇಲೆ ನೀವು ಎಲ್ಲಿ ಮುಟ್ಟಿದ್ದೀರಿ,ಏನು ಸೇವೆ ಬಯಸುವಿರಿ ಎಂದು
ಅಂದಾಜಿಸಿ,ಅದನ್ನು ಮಾಡುವ ತಂತ್ರಾಂಶ ಅಭಿವೃದ್ಧಿ ಪಡಿಸುವ ಮೂಲಕ,ಸಾದಾ ಫೋನನ್ನು
“ಸ್ಪರ್ಶಸಂವೇದಿಯಾಗಿಸುವ” ವಿನೂತನ ಪ್ರಯೋಗ ಯಶಸ್ವಿಯಾಗಿದೆ.ಈ ತಂತ್ರಜ್ಞಾನದ ಮೂಲಕ
ಕಡಿಮೆ ಖರ್ಚಿನ “ಟಚ್‌ಸ್ಕ್ರೀನ್” ಫೋನ್ ಹ್ಯಾಂಡ್‌ಸೆಟ್‌ಗಳು ಲಭ್ಯವಾಗುವ ಭರವಸೆಯೂ
ಮೂಡಿದೆ.ಮೈಕ್ ಮೂಲಕ ಶಬ್ದವನ್ನು ಗ್ರಹಿಸುವ ತಂತ್ರಾಂಶ,ಅದರ ಪ್ರಮಾಣ,ಸ್ಥಾನ ಎರಡನ್ನೂ
ಅಂದಾಜು ಮಾಡುವ ಈ ನವೀನ ತಂತ್ರದಿಂದ ಕಸವಾಗಬೇಕಿದ್ದ ಫೋನ್‌ಗಳ ಆಯುಷ್ಯ ವರ್ಧಿಸಲಿವೆ!
————————–
ಎವರೆಸ್ಟ್ ಪರ್ವತ ಪ್ರದೇಶದಲ್ಲೂ ತ್ರೀಜಿ!

3ಜಿ ಸೆಲ್‌ಫೋನ್ ಸೇವೆಯು ಎವರೆಸ್ಟ್ ಶಿಖರ ಪ್ರದೇಶದಲ್ಲೂ ಸಿಗಲಾರಂಭಿಸಿದೆ.ಅದೂ ಎಂತ ವೇಗ ಅಂತೀರಾ? 3.6ಎಂಬಿ ವೇಗದಲ್ಲಿ ಹೆಚ್ಚಾಗಿ ಸೇವೆ ಸಿಕ್ಕಿದರೆ,ಆಗೀಗ ಅದರ ದುಪಟ್ಟು ವೇಗದ
ಸಂಪರ್ಕವೂ ಸಿಗಬಹುದು.ನೇಪಾಲ ಎನ್ಸೆಲ್ ಕಂಪೆನಿಯು ಹದಿನೇಳು ಅಡಿ ಎತ್ತರದಲ್ಲಿ
ಸೆಲ್‌ಫೋನ್ ಮೊಬೈಲ್ ಗೋಪುರಗಳನ್ನು ಹಾಕಿ ಸೇವೆಯನ್ನು ನೀಡಲಾರಂಭಿಸಿದೆ.ಒಂಭತ್ತು
ಗೋಪುರಗಳನ್ನು ಸ್ಥಾಪಿಸಿರುವ ಕಂಪೆನಿಯು,ಮೂವತ್ತು ಸಾವಿರ ಶಿಖರಾರೋಹಿ ಪ್ರವಾಸಿಗಳನ್ನು
ಗುರಿಯಾಗಿಸಿದೆ.ಒಂದು ಸಲ ಐವತ್ತು ಜನರು ಸೇವೆ ಬಳಸಲು ಸಾಧ್ಯವಾಗುತ್ತದಂತೆ.ನಾಲ್ಕು
ಗೋಪುರಗಳಲ್ಲಿ ಸೌರವಿದ್ಯುತ್ ಮೂಲಕ ಸೇವೆ ನೀಡಲಾಗುತ್ತಿದೆ.ಮೂರು ದಿನಗಳಿಗೆ
ಸಾಕಾಗುವಷ್ಟು ಬ್ಯಾಕಪ್ ನೀಡುವ ಬ್ಯಾಟರಿಗಳಿವೆ.ಎವರೆಸ್ಟ್ ಪರ್ವತದ ತುತ್ತ ತುದಿ
ತಲುಪುವವರು ಬಹಳ ಕಮ್ಮಿಯಾದ್ದರಿಂದ,ಅಲ್ಲಿನ ಸೇವೆಯ ಲಭ್ಯತೆಯ ಬಗ್ಗೆ ಕಂಪೆನಿ
ತಲೆಕೆಡಿಸಿಕೊಂಡಿಲ್ಲ.
——————————————
ಉತ್ಪ್ರೇಕ್ಷಿತ ಮೊಬೈಲ್ ಬಳಕೆದಾರರ ಸಂಖ್ಯೆ
ದೇಶದ ಸೆಲ್‌ಫೋನ್ ಬಳಕೆದಾರರ ಸಂಖ್ಯೆಯು ಅತಿರಂಜಿತವಾಗಿ ಹೇಳಲ್ಪಡುತ್ತಿರುವುದು ಟ್ರಾಯ್‌ಗೂ ಸ್ಪಷ್ಟವಾಗಿದೆ.ತಮ್ಮಿಂದ ಮಾರಾಟವಾದ ಸಿಮ್‌ಗಳ ಸಂಖ್ಯೆಯನ್ನೇ ತಮ್ಮ ಬಳಕೆದಾರರ
ಸಂಖ್ಯೆಯಾಗಿ ನೀಡುವ ಅಭ್ಯಾಸವನ್ನು ಸೆಲ್‌ಕಂಪೆನಿಗಳು ಹೊಂದಿವೆ.ಆದರೆ ಓರ್ವನೇ ಹಲವು
ಸಿಮ್ ಹೊಂದಿರುವ ಈ ದಿನಗಳಲ್ಲಿ,ಇದು ಅತಿರಂಜಿತವಾದ ಸಂಖ್ಯೆಯನ್ನು ನೀಡುತ್ತದೆ,ವಿನ:
ನಿಜವಾದ ಬಳಕೆದಾರರ ಸಂಖ್ಯೆಯಲ್ಲ ಎನ್ನುವುದು ಸ್ಪಷ್ಟ.ಆದ್ದರಿಂದ ನಿಜವಾಗಿಯೂ
ಸಕ್ರಿಯವಾಗಿರುವ ಬಳಕೆದಾರರ ಸಂಖ್ಯೆಯ ಆಧಾರದಲ್ಲಿ ಚಂದಾದಾರರ ಸಂಖ್ಯೆಯನ್ನು
ಅಂದಾಜಿಸಬೇಕೆಂದು ಟೆಲಿಕಾಂ ನಿಯಂತ್ರಕ ಪ್ರಾಧಿಕಾರ ನಿಗದಿಪಡಿಸುವ ಸೂಚನೆಗಳಿವೆ.
——————————–
ಸೂಪರ್ ಕಂಪ್ಯೂಟರಿನಲ್ಲೂ ಲೀನಕ್ಸ್
ಚೀನಾವು ಜಗತ್ತಿನ ಅತ್ಯಂತ ವೇಗದ ಸೂಪರ್ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸಿದೆ,ಟಿಯಾನಿ ಎನ್ನುವ ಹೆಸರು ಹೊತ್ತ ಸೂಪರ್ ಕಂಪ್ಯೂಟರ್ ಸದ್ಯದ ಕ್ರೇಎಕ್ಸ್‌ಟಿ5ಜಾಗ್ವಾರ್ ಎನ್ನುವ
ಯಂತ್ರಕ್ಕೆ ಹೋಲಿಸಿದರೆ ಹತ್ತಿರ ಹತ್ತಿರ ಒಂದೂವರೆಪಟ್ಟು ವೇಗದ ಗಣಕಕಾರ್ಯದಲ್ಲಿ
ಮಾಡುತ್ತದೆ ಮಾಡುತ್ತದೆ ಎಂಬುದು ಅಂದಾಜು.ಆದರಿಲ್ಲಿ ಗಮನಿಸ ಬೇಕಾದ ಸಂಗತಿ
ಎಂದರೆ,ಯಂತ್ರಾಂಶದ ವಾಸ್ತುವಿನಲ್ಲಿ ಹೊಸತನ ಬಳಸಿದ್ದರೂ,ತಂತ್ರಾಂಶಕ್ಕೆ ಬಂದಾಗ,ಸೂಪರ್
ಕಂಪ್ಯೂಟರಿನಲ್ಲಿ ಬಳಸಿದ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಲೀನಕ್ಸ್ ಆಗಿದೆ
ಎನ್ನುವುದು.ಇಲ್ಲಿ ಮಾತ್ರಾ ಅಲ್ಲ,ಲಂಡನ್‌ನ ಶೇರು ವಿನಿಮಯ ಕೇಂದ್ರದಲ್ಲಿ ಬಳಕೆಯಾಗುವ
ಕಂಪ್ಯೂಟರಿನಲ್ಲೂ ಲೀನಕ್ಸ್ ಬಳಕೆಯಾಗುತ್ತಿದೆ.ಅಲ್ಲಿ ವಿಂಡೋಸ್ ವ್ಯವಸ್ಥೆಗೆ ವಿದಾಯ
ಹೇಳಿ ಲೀನಕ್ಸ್ ಬಳಸ ತೊಡಗಿದ್ದು ಈಗ ಹಳೆ ಸುದ್ದಿಯಾಗಿದೆ.ಗಣಕಯಂತ್ರ ವೇಗವಾಗಿ
ಕಾರ್ಯಾಚರಿಸಲು,ಕೈಕೊಡದೆ ಕೆಲಸ ಮಾಡಲು,ವೈರಸ್ ಅಂತಹ ಭದ್ರತೆಗೆ ಅಪಾಯ ತರುವ ಕಾಟಗಳಿಂದ
ಮುಕ್ತವಾಗಲು ಲೀನಕ್ಸ್ ವ್ಯವಸ್ಥೆಯೇ ಸೂಕ್ತವೆನ್ನುವುದು ಸ್ಪಷ್ಟವಾಗುವ ಅಂಶವಾಗಿದೆ.
————————————
ನಡೆಯದಿನ್ನು ವಾಕ್‌ಮನ್
ಜಪಾನ್‌ನ ಸೋನಿ ಕಂಪೆನಿಯು ಕ್ಯಾಸೆಟ್ ಬಳಸುವ ವಾಕ್ಮನ್ ಟೇಪ್‌ಗಳನ್ನು 1979ರಿಂದ ತಯಾರಿಸುತ್ತಿದೆ.ಇನ್ನವುಗಳಿಗೆ ವಿದಾಯ ಹೇಳಲದು ನಿರ್ಧರಿಸಿದೆಯಂತೆ.ಸುಮಾರು
ಇಪ್ಪತ್ತೆರಡು ಕೋಟಿ ವಾಕ್‌ಮನ್‌ಗಳನ್ನು ಮಾರಿದ ನಂತರ ಅವುಗಳ ಮಾರಾಟದ
ಪ್ರಮಾಣದಲ್ಲಾಗಿರುವ ಕುಸಿತದಿಂದ ಇನ್ನು ಅವುಗಳ ತಯಾರಿ ನಿಲ್ಲಿಸಲು,ಸೋನಿ ಕಂಪೆನಿಯು ಮನ
ಮಾಡಿದೆ.ಆದರೆ ಚೀನಾದಲ್ಲಿ ಅದರ ತಯಾರಿ,ಮಾರಾಟ ಇನ್ನಷ್ಟು ಕಾಲ ನಡೆಯಬಹುದು.
——————————-
ಯಾಹೂ ಮಿಂಚಂಚೆ ಮಿಂಚಲಿದೆ
ಯಾಹೂವನ್ನು ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಹೊಸತಾಗಿ ಮಿಂಚಲಿದೆ.ಯಾಹೂವಿನಲಿದ್ದುಕೊಂಡು ಟ್ವಿಟರ್,ಫೇಸ್‌ಬುಕ್‌ಗಳಿಗೆ ಸಂದೇಶಗಳನ್ನು ಕಳುಹಿಸಬಹುದು.ಇದು ಗೂಗಲಿಗಿಂತ ವೇಗವಾಗಿ
ಕಾರ್ಯನಿರ್ವಹಿಸಲಿದೆ.ಇತ್ತೀಚೆಗೆ ಜಿಮೇಲ್‌ನಲ್ಲಿ ಬಳಕೆದಾರರಿಗೆ ಮುಖ್ಯ ಮಿಂಚಂಚೆಗಳು
ಪ್ರತ್ಯೇಕವಾಗಿ ತೋರಿಸುವ ವ್ಯವಸ್ಥೆ ಆರಂಭವಾಗಿತ್ತು.ಈಗ ಅಂತಹ ಅನುಕೂಲತೆ ಯಾಹೂವಿನಲ್ಲೂ
ಸಿಗಲಿದೆ.ಈ ಬದಲಾವಣೆಗಳ ಲಾಭ ಯಾಹೂವಿನ ಇಪ್ಪತ್ತೆಂಟು ಕೋಟಿ ಬಳಕೆದಾರರಿಗೆ
ಮುಟ್ಟಲಿದೆ.ಫ್ಲಿಕರ್,ಪಿಕಾಸ,ಯುಟ್ಯೂಬ್ ಮುಂತಾದ ಚಿತ್ರ-ವಿಡಿಯೊ ಸೇವೆಗಳನ್ನು ಯಾಹೂವಿನ
ಇನ್‌ಬಾಕ್ಸಿನಲ್ಲಿದ್ದುಕೊಂಡೇ ವೀಕ್ಷಿಸುವುದು ಸಾಧ್ಯವಾಗಿಸಲಾಗುತ್ತದೆ.ಮಿಂಚಂಚೆಗಳ
ರಾಶಿಯಿಂದ, ಬೇಕಾದ ಮಿಂಚಂಚೆಯನ್ನು ಹುಡುಕಿ ನೋಡುವ ಸೇವೆಯ ಗುಣಮಟ್ಟವೂ ಹೆಚ್ಚಲಿದೆ.
————————————————–
“ಹೆಸರೇ ಬೇಡ” ಪುಸ್ತಕ ಗೆಲ್ಲಿ!

*ಈ ತಾಣ ಯಾವ ಸಾಹಿತಿಯದ್ದು? http://www.shivaramk… ಅವರು ನಟಿಸಿದ್ದ ಚಿತ್ರ ಯಾವುದು?
*ಅಂತರ್ಜಾಲತಾಣದ ಜನಪ್ರಿಯತೆ ಅಳೆಯುವ ಮಾನದಂಡ ಯಾವುದು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಪ್ರಕಾಶ್ ಹೆಗ್ಡೆಯವರಿಗೆ ಮಿಂಚಂಚೆ ಮಾಡಿ,ವಿಷಯ:NS3 ನಮೂದಿಸಿkash531@gmail.com).
(
ಕಳೆದ ವಾರದ ಸರಿಯುತ್ತರಗಳು:*ಶೇಷಾದ್ರಿ ವಾಸು,1998
*www.udayavani.com,ಯುನಿಕೋಡ್‌ನಲ್ಲಿದೆ.
ಬಹುಮಾನ ಗೆದ್ದ ಮನೋಜ್‌ಕೃಷ್ಣ ಕೆ ಎಸ್ ಮತ್ತು ವಿಕಾಸ್ ಹೆಗ್ಡೆ,ಭದ್ರಾವತಿ ಅವರಿಗೆ ಅಭಿನಂದನೆಗಳು.)
—————————————————
ಟ್ವಿಟರ್ ಚಿಲಿಪಿಲಿ
*ಹುಡುಗಿಯ ಏಜ್,ಪುರುಷರ ವೇಜ್,ವಿದ್ಯಾರ್ಥಿಯ ಪರ್ಸಂಟೇಜ್ ಕೇಳಬೇಡ!
*ಹಿಂದುಳಿದ ಜಾತಿಯ ತೋಳಗಳ ಮೆಚ್ಚಿನ ರಾಗ ಯಾವುದು? ಹಿಂದೋಳ!!
————————————————-
ಮಲ್ಲಿಕಾರ್ಜುನರ ಕ್ಯಾಮರಾ ಕಣ್ಣಲ್ಲಿ

ಮಲ್ಲಿ(ಕ್ಯಾಮರಾ) ಕಣ್ಣಲ್ಲಿ ಎನ್ನುವುದು ಮಲ್ಲಿಕಾರ್ಜುನ ಡಿ.ಜಿ. ಅವರ ಬ್ಲಾಗ್ ಬರಹಗಳ ಗುಚ್ಛ.ಇದರಲ್ಲಿ ಅವರ ಚಿತ್ರ-ಬರಹಗಳ ಸಂಗ್ರಹಗಳಿವೆ.ವೈವಿಧ್ಯಮಯ ಬರಹಗಳ ಸಂಗ್ರಹ ಇಲ್ಲಿವೆ.ಬೇರೆ ಬೇರೆ
ಕೋನಗಳಿಂದ ಚಿತ್ರಗಳನ್ನು ತೆಗೆಯುವಂತೆ,ತಮ್ಮ ಸುತ್ತಲಿನ ಬದುಕಿನತ್ತಲೂ ಬೇರೆ ಬೇರೆ
ಕೋನಗಳಿಂದ ನೋಡಿದ ಅನುಭವ ಇಲ್ಲಿನ ಬರಹಗಳಿಂದಲೂ
ಸಿಗುತ್ತವೆ.http://dgmalliphotos.blogspot.comನತ್ತ
ಪ್ರಯಾಣಬೆಳೆಸಿ,ಬ್ಲಾಗ್‌ಬರಹಗಳತ್ತ ಕಣ್ಣಾಡಿಸಿ.

udayavani Unicode
—————————–
Udayavani

 

‍ಲೇಖಕರು avadhi

5 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading