ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವ್ವ ಏನನ್ನೊ ಹೇಳಬೇಕು ಅಂದುಕೊಂಡಿದ್ದಳು 

ವೆಂಕಟೇಶ ಪಿ. ಮರಕಮದಿನ್ನಿ 

ಅವ್ವ ಏನನ್ನೊ ಹೇಳಬೇಕು

ಅಂದುಕೊಂಡಿದ್ದಳು 

ನಾನೇನೊ ಮಹತ್ತರ ಕೆಲಸದಲ್ಲಿ

-ರಬೇಕಂದುಕೊಂಡು ಸುಮ್ಮನಾದಳು

ಗೆಳತಿಯೊಬ್ಬಳು ತನ್ನ ದಿನಚರಿಯಲಿ 

ಅವಳಿಗಾದ ಸಂತಸವೊಂದನ್ನು ನನ್ನ ಮುಂದೆ 

ಅರುಹಬೇಕು ಅಂದುಕೊಂಡಿದ್ದಳೊ ಏನೋ 

ನನ್ನ ಕಣ್ಗಳು ಉತ್ತರಿಸಲು ಎದುರಾಗಲೇ ಇಲ್ಲ

ಗೆಳೆಯನೊಬ್ಬ ಚಹಾದ ಮಾತಿಗೆಂದು ಕರೆದ

ತನ್ನ ಟೈಪುಮಣಿಯಲಿ ಇನ್ನಾರಿಗೋ

‘ಟೀ ಆಯ್ತಾ?’ ಎಂದು ರವಾನಿಸಿದ

ಅಂದೇಕೋ ಎಕ್ಸ್ಟ್ರಾ ಸಕ್ಕರೆ ಹೇಳಿದ

ಚಾವು ಸಪ್ಪಗೆ ಅನಿಸಿತು!

ಕಾಲೇಜೊಂದರ ಸೂಚನಾ ಫಲಕಕೆ 

ಹಾಕಿದ ಕಲಾಕೃತಿ ಫಾರ್ವರ್ಡಾಯಿತು

ಸಾವಿರಗಟ್ಟಲೆ ಗುಂಪುಗಳಲಿ 

ಬಗಲೆ ಇದ್ದರು ನೈಜತೆ

ಕಾಣದೆ ಹೋಯಿತು ಕಣ್ಣಿಗೆ ಕವಿತೆ!

ಅಂಗೈಗನ್ನಡಿ ಏನೆಲ್ಲಾ ಕಸಿಯಿತು? ಏನೆಲ್ಲಾ ಕೊಟ್ಟಿತು?

ಯಾರ ಹೃದಯವನು  ಅದೆಷ್ಟು ಮುಟ್ಟಿತು?

ಯಾರ ಗೋಡೆಗೆ ಎಷ್ಟು ಪ್ರೇಮಚಟ್ಟು ಬಡಿಯಿತು?

ಯಾವ ಭಾವ ಇಲ್ಲಿ ನಡೆಯಿತು? ಇಲ್ಲಿ ಮಡಿಯಿತು?

ಇಲ್ಲಿ ಯಾವುದೂ ಅಲ್ಲ ತಾನೇ ಯಕ್ಷಪ್ರಶ್ನೆ?

ಇಲ್ಲಿ ಎಲ್ಲ ಇರುವುದು ‘ನಮ್ಮ ಕೈಲೆ’ ತಾನೆ!?

‍ಲೇಖಕರು avadhi

20 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading