ಅವೆನ್ಯೂ ರೋಡ್ ಎಂಬ ವಿಸ್ಮಯ…

ಸಂಗೀತಾ ಚಚಡಿ

ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಪೊಲೀಸ್ ಸ್ಟೇಷನ್ ಪಕ್ಕದ ಒಂದು ಚಿಕ್ಕ ಮೂಲೆಯಲ್ಲಿತ್ತು ಆ ಪುಸ್ತಕದಂಗಡಿ . ಆವಾಗಲಷ್ಟೇ ಶುರುವಾಗಿತ್ತು . ಅಣ್ಣ ತಮ್ಮಂದಿರಿಬ್ಬರು ಸೇರಿ ಶುರು ಮಾಡಿದ್ದ ಅಂಗಡಿ . ಮುಂದೆ ಕೆಲವೇ ದಿನಗಳಲ್ಲಿ , ಯಾವದೇ ಇಂಜಿನೀರಿಂಗ್ ಪುಸ್ತಕ ಬೇಕಾದರೂ ” ಏ ತಾಳಿಕೋಟಿ ಕಡೆ ಹೋಗೋ. ಎಲ್ಲಾ ಪುಸ್ತಕ ಸಿಗ್ತಾವ ” ಅನ್ನುವಷ್ಟು ಪ್ರಸಿದ್ಧವಾಗಿತ್ತು . ಅರ್ಧ ಬೆಲೆಗೆ, ಕೆಲವೊಮ್ಮೆ ಅದಕ್ಕೂ ಕಡಿಮೆ, ಕೆಲವೊಮ್ಮೆ ಅದಕ್ಕೂ ಹೆಚ್ಚು.

ಒಟ್ಟಿನಲ್ಲಿ ಎಲ್ಲ ಪುಸ್ತಕಗಳು ಸಿಗುತ್ತಿದ್ದವು . ಇರದಿದ್ದರೆ ತರಿಸಿಕೊಡುತ್ತಿದ್ದದ್ದೂ ಇತ್ತು . ಯಾವ ರೈಟರ್, ಯಾವ ಪುಸ್ತಕ ಇವೆನ್ನೆಲ್ಲ ಹುಡುಕುವದು ಅವರಿಗೆ ನೀರು ಕುಡಿದಷ್ಟು ಸಲೀಸಾಗಿದ್ದದ್ದನ್ನು ನೋಡಿ ಆಶ್ಚರ್ಯವಾಗುತ್ತಿತ್ತು .
ಮುಂದೆ ಬೆಂಗಳೂರಿಗೆ ಬಂದಾಗ ಕಂಡಿದ್ದು ಇಂತಹ ಸಾಲು ಸಾಲು ಅಂಗಡಿಗಳು . ಮೆಡಿಕಲ್, ಇಂಜಿನಿಯರಿಂಗ್, ಗೇಟ್, ನೀಟ್, ಬ್ಯಾಂಕಿಂಗ್, ಕಾಮರ್ಸ್ ಯಾವದೇ ವಿಷಯದ ಯಾವದೇ ಪುಸ್ತಕಗಳ ಬಗ್ಗೆ ಇವರಿಗಿರುವ ನೆನಪಿನ ಶಕ್ತಿ ಅಪಾರ. ಕೇಳಿದ ತಕ್ಷಣವೇ ರಾಶಿ ರಾಶಿ ಪುಸ್ತಕಗಳ ಮಧ್ಯದಿಂದ ಸಲೀಸಾಗಿ ಎಳೆದು ಬಿಡುತ್ತಾರೆ .

ಇಷ್ಟು ದಿನ ಆಕಾಶ, ಬೈಜು, ಅಲೆನ್ ಎನ್ನುತ್ತಿದ್ದ ಮಗ ಈಗ ಅದ್ಯಾವುದೋ ಮರ್ರೋ ಅಂದ . ಇದೇನು ಸಿಗಲಿಕ್ಕಿಲ್ಲ ಅಂದುಕೊಂಡೇ ಕೇಳಿದ್ದು . ಸುಮಾರು ನಲವತ್ತು ಸಾವಿರ ಬೆಲೆಯ ಒನ್ಲೈನ್ ಮೆಟಿರಿಯಲ್ ಇದು. ನಾಲ್ಕು ಸಾವಿರಕ್ಕೆ ಸಿಕ್ಕಿತು . ಒಂದೆರಡು ವರ್ಷ ಹಿಂದಿನದ್ದಿರಬಹುದು . ಈಗಿಷ್ಟು ಸಾಕೆಂದ ಮಗ . Name it and get it ಅನ್ನುವ ಅವೆನ್ಯೂ ರೋಡ ಎಂಬ ವಿಸ್ಮಯ ಹಾಗೂ ಅಷ್ಟೇ ಅಚ್ಚರಿಯ ಈ ಅಂಗಡಿಕಾರರು , ಅದೆಷ್ಟೋ ವಿದ್ಯಾರ್ಥಿಗಳ ಹಾಗೂ ಪಾಲಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದಂತೂ ನಿಜ

‍ಲೇಖಕರು avadhi

March 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: