ಶಿಕ್ಷಕರ ದಿನ ಅಂತ ನಮಗೆ ಆಗ ನಮಗೇನು ಗೊತ್ತು,!?.
ಚೀಟಿ ಕೊಡ್ತಾರೆ ಅಂತ ಮನೆಯಲ್ಲಿ ಕಾಡಿ ತಂದ ನಾಲ್ಕಾಣೆ ಕೊಟ್ಟು ಪಡೆದು, ಆಗಲೆ ಹತ್ತಾರು ಮೊದಲ ಹಾಗೂ ಕೊನೆಯ ಪುಟಗಳು ಕಿತ್ತು ಹೋದ ಪುಸ್ತಕದ ಮಧ್ಯೆದಲ್ಲಿಟ್ಟು ಖುಷಿ ಪಡುತ್ತಿದ್ದೇವು.
ಈ ದಿನದ ನೆವಕ್ಕೊನೆ ಎಂಬಂತೆ ಸಿಕ್ಕಿ ಬಿಟ್ಟವು.
ನೆನಪು ಸಿಹಿಯಾಯ್ತು. ಬಾಲ್ಯ ಮತ್ತೊಮ್ಮೆ ಬಂದು ಕಾಡಿತು.
ಚೀಟಿಯೂ ಬದಲಾಗಿದೆ, ಅದರ ಬೆಲೆಯೂ ಜಾಸ್ತಿಯಾಗಿದೆ. ಗುರುವೂ ಬದಲಾಗಿದ್ದಾನೆ.
ಎಷ್ಟೇ ಬದಲಾದರೂ ಬಾಲ್ಯದ ಆ ಸವಿಯ ಮೀರಿಸುವ ತೂಕ ಯಾವುದಕ್ಕಿದೆ. ಹೇಳಿ!?
-ಸದಾಶಿವ್ ಸೊರಟೂರು
ಶಿಕ್ಷಕರು
ಚಿಂತಾಮಣಿ
Super subject