ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಸರದಲ್ಲಿ ನೀ ಕಳಚಿಟ್ಟು ಹೋದ ಕಾಲ್ಗೆಜ್ಜೆ …

ಗೆಳತೀ…

– ಕೆ.ಎಸ್.ಅಪ್ಪಣ್ಣ

  ನೀ ಹೋಗಿ ಅದೆಷ್ಟು ದಿನಗಳಾದವೋ….. ನಾ ಲೆಕ್ಕ ಕೂಡ ಇಟ್ಟಿಲ್ಲ… ಆದರೆ ನನಗೇನೋ ನೀ ಇಲ್ಲೇ ಎಲ್ಲೋ ಇರುವೆಯೇನೋ ಎಂದು ಭ್ರಮೆಯಾಗಿದೆ… ಕಣ್ಣೆದುರಲ್ಲಿ ನೀನಿರದಿದ್ದರೂ ನಿನ್ನ ಬಿಸಿಯುಸಿರು ನನ್ನ ತಾಕುತ್ತಿದೆ.. ಕೊನೆಯದಾಗಿ ನೀ ಒತ್ತಿ ಹೋದ ಮುತ್ತಿನಲ್ಲಿ ಇನ್ನೂ ನಿನ್ನ ತುಟಿಯ ತೇವವಿದೆ… ನಿನ್ನ ಮುಡಿಯಲ್ಲಿ ಮಲಗಿದ್ದ ಮಲ್ಲಿಗೆ ಬಾಡಿದ್ದರೂ… ಅದರ ಘಮಲು ಅಮಲು ಹಾಗೇ ಇದೆ… ಅವಸರದಲ್ಲಿ ನೀ ಕಳಚಿಟ್ಟು ಹೋದ ಕಾಲ್ಗೆಜ್ಜೆ .. ಮಾತು ಮರೆತು ಕುಳಿತಿದೆ… ಬಿಚ್ಚಿಟ್ಟ ಬಳೆಗಳು ನಾಚಿಕೊಂಡು ಮೌನವಾಗಿವೆ.. ಹಾಸಿಗೆಯ ಮುದುರಿನಲ್ಲಿ ನಿನ್ನ ಮೈಬಿಸುಪಿನ್ನೂಆರದೆ ಉಳಿದಿದೆ… ನೀ ನುಡಿಸಿಟ್ಟ ವೀಣೆ ಕೂಡಾ….. ಇನ್ನೂ ನಿನ್ನ ನೆನಪಿನಲ್ಲಿ ಕಂಪಿಸುತ್ತಿದೆ…. ಎಲ್ಲಕ್ಕಿಂತ ಗೆಳತೀ…… ನೀ ಮನಸಿಗೆ ಮಾಡಿ ಹೋದ ಗಾಯ.. ಒಂದಿಷ್ಟೂ ಆರದೆ ಹಸಿಯಾಗಿದೆ… ಉಳಿಸಿ ಹೋದ ನೆನಪಂತೂ….. ಮರೆತು ಕೂಡ ಮರೆಯದಂತೆ.. ಹಠ ಹೂಡಿದೆ… ಇನ್ನುನನ್ನಿಂದಿನ್ನಾಗದು…. ಹೇ… ಬಂದುಬಿಡು ಗೆಳತೀ.. ಹೊಸಲ ಮೇಲಿನ ಹಣತೆ.. ಹೇಳದೆ ಉಳಿದ ಕವಿತೆ… ಎಂದೂ ಬತ್ತದ ನನ್ನೊಲವಿನೊರತೆ.. ನಿನ್ನದೇ ದಾರಿ ಕಾಯುತ್ತಿವೆ.. ಬಂದುಬಿಡೇ…    ]]>

‍ಲೇಖಕರು G

5 June, 2012

5 Comments

  1. D.RAVI VARMA

    ಹೇ…
    ಬಂದುಬಿಡು ಗೆಳತೀ..
    ಹೊಸಲ ಮೇಲಿನ ಹಣತೆ..
    ಹೇಳದೆ ಉಳಿದ ಕವಿತೆ…
    ಎಂದೂ ಬತ್ತದ ನನ್ನೊಲವಿನೊರತೆ..
    ನಿನ್ನದೇ ದಾರಿ ಕಾಯುತ್ತಿವೆ..
    ಬಂದುಬಿಡೇ…ವಾವ್ ,ತುಂಬಾ ರೋಮಾನ್ಚಕಾರಿಯಾಗಿದೆ . ಆ ಹೆಣ್ಣಿನ ಪ್ರೀತಿಗಾಗಿ,ಸಾಂಗತ್ಯಕ್ಕಾಗಿ ಹಂಬಲಿಸುವ,ಹಾತೊರೆಯುವ,ಮನಸಿನ ಉತ್ಕಟತೆ ,ವ್ಯಾಮೋಹ,ಅದಮ್ಯ ಆಕಾನ್ಷೆ ,ಮತ್ತು ಆ ಕ್ಸನದ ಆವೇಗ, ಕನವರಿಕೆ, ಸ್ಪಷ್ಟವಾಗಿ,ನವಿರಾಗಿ ,ಓದುಗನಿಗೂ ಥ್ರಿಲ್ ಕೊಡುವಂತಿದೆ ಎ ದಿಲ್ ಮಾಂಗೆ more ……………
    ರವಿ ವರ್ಮ ಹೊಸಪೇಟೆ

  2. venkatesh

    Simpley beautiful , ‘pada lalitya’kke ondu sundara udaharane……

  3. SunnyS

    Hosal Melin Hanate……….
    Helade Ulida Kavite………
    Andu Battad Nannolavinorate…..
    Ninnade Dari Kayuttive…..
    Bandubidu
    i like dis lines nice………….

  4. shama, nandibetta

    “ಹೊಸಲ ಮೇಲಿನ ಹಣತೆ..
    ಹೇಳದೆ ಉಳಿದ ಕವಿತೆ…
    ಎಂದೂ ಬತ್ತದ ನನ್ನೊಲವಿನೊರತೆ..
    ನಿನ್ನದೇ ದಾರಿ ಕಾಯುತ್ತಿವೆ..”
    ಅದ್ಭುತವಾದ ಸಾಲುಗಳು…. ಬಿಟ್ಟು ಹೋದ ಹುಡುಗಿ ಯಾರೇ ಆದರೂ, ಎಲ್ಲೇ ಇದ್ದರೂ, ಎಂಥವಳೇ ಆದರೂ ಇದನ್ನೋದಿದರೆ ಬರದೇ ಇರೋದು ಸಾಧ್ಯವೇ ಇಲ್ಲ ಬಿಡಿ…

  5. archith.kg

    Thumba sogasagide…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading