ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ನಿದ್ದೆಗೆ ನನ್ನ ಲಾಲಿ..

ಪಿರಿಯಡ್ ಮಿಕ್ಸ್…

ರಾಜೇಂದ್ರ ಪ್ರಸಾದ್ , ಮಂಡ್ಯ

ಅವಳು ಒಳಬರದ

ಮೂರೂ ದಿನವೂ

ನಾನೂ ಹೊರಗಾಗುತ್ತೇನೆ!

 

ಬಾಲ್ಕನಿಯಲಿ ಬೆಚ್ಚಗೆ ಕುಳಿತು

ಬೆಂಕಿ ಇಲ್ಲದ ಅಡುಗೆ ಅಟ್ಟು,

ಕೊಂಚ ದ್ರಾಕ್ಷಾರಸ ಗುಟುಕಿಸಿ

ಮುತ್ತಿನ ಮಲ್ಲಿಗೆ ಕಟ್ಟುತ್ತಾ,

ಕಣ್ಣಲಿ ತುಂಬಿದ ಪ್ರೀತಿಯ

ಎದೆಗಿಳಿಸಿಕೊಳ್ಳುತ್ತೇವೆ,

ಅವನರತ.

 

ಒಮ್ಮೊಮ್ಮೆ

ನೋವಿಗೆ ಬಿಗಿದಪ್ಪುತ್ತಾಳೆ ..

ನನ್ನ ಕಣ್ಣಲಿ ಅವಳು ಅಳುತ್ತಾಳೆ

ನನ್ನ ಚಡಪಡಿಕೆ ಕಂಡು

ಮೂದಲಿಸುತ್ತಾಳೆ.

 

ಅವಳ ನಾಭಿಯ ಹೊಕ್ಕ ಬೆರಳಿನಿಂದ

ನೋವು ನನಗೂ ವರ್ಗವಾಗಲೆಂದು,

ನನ್ನ ಕೈ ಅಲ್ಲೇ ನಡುವಿನಲ್ಲೇ ಬಿಡಾರ ಹೂಡಿದೆ.

ಮತ್ತೊಂದು ತಲೆಗೆ ತಳವಾಗಿದೆ.

 

ಈ ತೆರೆದ ಕಿರು ಹಜಾರದಲ್ಲಿ
ಹಿನ್ನಲೆಗೆ ಒಂದು ಸಣ್ಣ ರಾಗಾಲಾಪ,
ಮಿಟುಕಿ ಮಿನುಗುವ ಸಣ್ಣ ಸೊಡರು
ಅವಳ ನಿದ್ದೆಗೆ ನನ್ನ ಲಾಲಿ..
ಮಲಗಲಿ ನನ್ನೊಲವು ಸುವ್ವಾಲಿ.

‍ಲೇಖಕರು avadhi

23 May, 2013

5 Comments

  1. MOULYA M

    Padhya aavarisida bage vivarisalu padagale tohuttilla..

  2. haravu spoorthy

    ela henn makklugu nimantha ganda sigli

  3. chalam

    ನನ್ನ ಕಣ್ಣಲಿ ಅವಳು ಅಳುತ್ತಾಳೆ……….ತುಂಬಾ ಚೆಂದದ ಸಾಲುಗಳು.ಮೊದಲ ಮೂರು ಸಾಲುಗಳು ಪಂಚಿಂಗೋ ಪಂಚಿಂಗು.ನಂತರ ನೇರವಾಗಿ ಎದೆಯೊಳಗಿಳಿದಿವೆ.

  4. Gururaja kathriguppe

    There is no death for ROMANTIC Poems, very good poem, looks like extention of K S Narasimha swamy era. good luck my friend, keep on writing quality poems.

  5. shanthi k a

    nice….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading