ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳೆಂದರೆ ಉಗಾದಿ

 ಎನ್ ರವಿಕುಮಾರ್ / ಶಿವಮೊಗ್ಗ

ಕಂಕುಳಲ್ಲಿ ಕುಕ್ಕೆ ಇರಿಕಿಕೊಂಡು
ತುಂಡು ಕಬ್ಬಿಣ. ಪ್ಲಾಸ್ಟಿಕ್ಕು, ಸೀಸದ ಚೂರುಗಳ
ಅಯುತ್ತಾ ಅಲೆದಲೆದು ದಣಿಯದೆ ದುಡಿದ ನನ್ನವ್ವ
ಬೇವ ನುಂಗಿ ಬೆಲ್ಲವ ಬಾಯ್ಗಿಟ್ಟು ಬದುಕಿಸಿದವಳು.

ತನ್ನೊಳಗೆ ತಾನೆ ಉರಿಯುತ್ತಿದ್ದಳು
ಒಲೆ ಮುಂದೆ ಒಲೆಯಂತೆ
ಹಸಿ ಪುಳ್ಳೆಗಳ ಉರಿಕೊಟ್ಟು ಉರಿಸುತ್ತಲೆ
ಕಣ್ಣ ಕೆಂಡದಲ್ಲಿ ಹೋಳಿಗೆ ಸುಡುತ್ತಿದ್ದಳು.

ಮುಗಿಲ ಮನೆಯಲ್ಲಿ ಕತ್ತಲು ಕವಿದಾಗ
ಬಾಚಿ ಕವುಚಿಕೊಂಡು
ತಣ್ಣನೆಯ ಚಂದ್ರನ ತೋರಿ
ತಂಪಾದ ಕಡಲು ಅವಳು
ಅವಳೆಂದರೆ  ನಿತ್ಯ ‘ಉಗಾದಿ’

‍ಲೇಖಕರು avadhi

18 March, 2018

6 Comments

  1. Dr.Srinivaschari Badiger

    ಬಹಳ ಸುಂದರ ಮತ್ತು ವಾಸ್ತವ

  2. Nasrin

    Very Nice…

  3. Kusumapatel

    Very touching.

  4. Sudharani naik

    ಅದ್ಭುತ ಕವಿತೆ,ಅವ್ವನ ಮಾಡಿಲ ನೆನಪಿಸಿದಂತಿತ್ತು.

  5. ಬಸವರಾಜ.ಬೂದಿಹಾಳ.ಗೋವಾ.

    ನಿಮ್ಮ ತಾಯಿಯ ಪ್ರಭಾವ ನಿಮ್ಮ ಮಕ್ಕಳ ತಾಯಿಗೂ ಬೀಳಲಿ.

  6. Manjunatha BT

    ಹಿಡಿಸಿತು. ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading