ಕನಸಿನ ಸೀರೆ
ಇಮ್ತಿಯಾಜ್ ಬಿ ಎಸ್
ಚಟ ಪಟ ಸದ್ದು ಮಾಡುವ ಮಗ್ಗಲು ಮನೆಯ ಮಗ್ಗದಲ್ಲಿ, ಯಾರದೋ ಕನಸಿನ ಸೀರೆ, ನೆಚ್ಚಿನ ಕುಪ್ಪಸ ಸಿದ್ಧವಾಗುತ್ತಿದೆ,,
ಮಗ್ಗದ ರಮೇಶ ಕನಸಿನ ಸೀರೆಗೆ ಬಣ್ಣ ಬಳೆಯುತ್ತಿದ್ದಾನೆ..
ಬೇರೆಯವರಿಗೆ ಅದು ಆಶೆ
ಇವನಿಗೆ ಹೊಟ್ಟೆ ತುಂಬುವ ಕಾಯಕ..
ಬೆಳಗಾಗುತ್ತಲೇ ಓಣಿಯ ಕಸ ಹೊಡೆಯಲು ಬರುವ ಪರವ್ವ.., ಮೊದಲು ಊರಿನಲ್ಲೇ ಇದ್ದಳಂತೆ ಈಗ ಊರಾಚೆಯ ಕೊಂಪೆ ಅವಳ ಅರಮನೆ
ಇದು ಎಲ್ಲರು ಮರೆತ ಜಾಣ ಮೆರೆವಿನ ಸತ್ಯ..
ಗರಿ ಹಿಡಿದು ಕಸಗುಡಿಸುವಾಗಲೆಲ್ಲ ಅವಳು ಮಗ್ಗಕ್ಕೆ ನೋಟದಿಂದಲೇ ದಾಳಿ ಮಾಡುತ್ತಾಳೆ ,,,
ಎಲ್ಲ ಗುಡಿಸಿದ ಮೇಲೆ ರಮೇಶನೊಂದಿಗೆ ಸೀರೆ ಬಗ್ಗೆ ಚಾವಕಾಶಿ,, ಸೆರಗಿನ ಬಣ್ಣದ ಬಗ್ಗೆ ಕುತೂಹಲದಿಂದ ಕೇಳುತ್ತಾಳೆ,,,
ನೇಯ್ದ ಹೊಸ ಸೀರೆ ನೋಡಿ ನೋಟದಲ್ಲೇ ಉಡುತ್ತಾಳೆ….
ಗುಂಗಲ್ಲಿ ದಿನಕಳೆದು,, ರಾತ್ರಿ ಕನಸಲ್ಲಿ, ಹಗಲು ಕಂಡ ಹೊಸ ಸೀರೆ ಉಡುತ್ತಾಳೆ ಅಥವಾ ಸೀರೆಯೇ ಅವಳ ಉಡುತ್ತದೆ…
ಬೆಳಗ್ಗೆದ್ದರೆ ಉಟ್ಟ ಮಾಸಿದ ಸೀರೆಯಿಂದ ಮುಖ ಒರೆಸಿ, ವಾಸ್ತವದ ಘೋರಕ್ಕೆ ತಲೆಬಾಗುತ್ತಾಳೆ.
ಅಷ್ಟೇ ಅಲ್ವಾ
ಕೆಲವರಿಗೆ ಸೀರೆಯೆಂದರೆ ಮಾನ ಮುಚ್ಚುವ ಸಾಧನ.. ಇನ್ನು ಕೆಲವರಿಗೆ ಆಡಂಬರದ ಪ್ರದರ್ಶನ
ನನ್ನಂತವರಿಗೆ ಕನಸಿನ ಕೂಸು ಎನ್ನುತ್ತಾಳೆ,,
ಯಾರಾದರೂ ಸೀರೆಬಗ್ಗೆ ಕೇಳಿದರೆ.. ಸಂದರ್ಭ ಸಹಿತ ಉತ್ತರಿಸುತ್ತಾಳೆ..
ಭಾವ ಸಮೇತ ಅಂಕ ಕೊಡುವಷ್ಟು ಸರಿಯಾಗಿ..
ಇತ್ತೀಚೆಗಷ್ಟೇ ತೀರಿ ಹೋದಳು
ಅವಳು ಪೂರ್ತಿಯಾಗಿ ಸೀರೆಯೇ ಆಗಿದ್ದಳು, ಆದರೆ, ನನಸಲ್ಲಿ ಕಂಡ ಸೀರೆ.. ಬರಿ ಕನಸಲ್ಲಿ ಮಾತ್ರ ಅವಳದಾಗಿತ್ತು..






ತುಂಬಾ ಚೆನ್ನಾಗಿದೆ.
Nice write-up and beautiful picture..
ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ
ಧನ್ಯವಾದಗಳು ಪ್ರತಿಭಾ ನಂದಕುಮಾರ ಮೇಡಮ್…
ನಿಮ್ಮ ಪ್ರತಿಕ್ರಿಯೆಯನ್ನು ಈಗ ನೋಡಿದೆ,, ಅದು,,,
ನಿಮ್ಮದೆ ಒಂದು ಕವಿತೆ ಹುಡುಕುತ್ತಿರುವಾಗ.
ಕಾಕತಾಳೀ ಎಂಬಂತೆ ” ಕೌ ಬಾಯ್ಸ್ ಮತ್ತು ಕಾಮಪುರಾಣ ” ಇವತ್ತೇ ನನ್ನ ಕೈ ಸೇರಿತು.
ಕಾಫಿ ಹೌಸ್, ಮುದುಕಿಯರಿಗೆ ಇದು ಕಾಲವಲ್ಲ, ಪ್ರೇತಗಳೆಂದು ಕರೆಯಲು ಮನಸ್ಸಾಗದು ಇವುಗಳ ಮುಖಾಂತರ ನನಗೆ ತುಂಬಾ ಇಷ್ಟ ವಾಗುವ ಮತ್ತು ಮತ್ತೆ ಮತ್ತೆ ಓದಿಸಿಕೊಳ್ಳುವ ಕವಿಯತ್ರಿ ನೀವು.
ನಿಮ್ಮ ಪ್ರತಿಕ್ರಿಯೆ ಖುಷಿ ನೀಡಿತು.
ಇಮ್ತಿಯಾಜ್ ಬಿ ಶಿರಸಂಗಿ