ಅವಳು ಅಹಲ್ಯ 'ನಾ' ಅವಳಲ್ಲ..

‘ಅಹಲ್ಯೆ’ ಅಲ್ಲ…!

bhuvaneshwari_h_cಭುವನೇಶ್ವರಿ ಹೆಚ್ ಸಿ

 

ಇಲ್ಲೊಂದು ಸೋಜಿಗ (?)

ಇದ್ದದ್ದು ಬಿದ್ದದ್ದು ಕದ್ದು ಮೆದ್ದದ್ದು

ಎಲ್ಲವೂ ಸಾಕು ಬೇಕಷ್ಟು.

 

ಮನೆ ವೈದ್ಯರ ಸಲಹೆ-

‘ಒತ್ತಡದ ಕೆಲಸ, ಮುಂಜಾನೆ ನಡಿಗೆ ಅತ್ಯಗತ್ಯ’

ಹುಸಿನಕ್ಕು ತೊಡಗಿಸಿಕೊಂಡೆ

she2

ನಿತ್ಯಕಾಯಕದಬ್ಬರದಲಿ

ಮಲಗಿದ್ದರೂ ಮಗಳ ಅರಚಾಟ, ಗಂಡನ ಕಿರುಚಾಟ

…ಗೊಣಗಾಟವನ್ನೂ ಮೀರಿ

ಮನೋಶರಧಿಯ ಅಟ್ಟಹಾಸ!

ಕಿವುಡು ಹೊರಜಗತ್ತಿಗೆ;

ಮಂದಹಾಸ, ಆಧುನಿಕ ಗರತಿ ಪಟ್ಟ!

ಕೊಟ್ಟವರ ಇಣುಕಿ ನೋಡುವ ಸಾಹಸ

ಸಫಲವಾಯ್ತು; ಮನಃಪೂರ್ತಿ ಈಜಾಟ

ಮೈದಣಿಯೆ ಮುದದಾಟ-

 

ಛೇ… ಅಲ್ಲೂ ಪುರುಷನ್ಹೆಗ್ಗಳಿಕೆ ‘ಕಾಮನಾಟ?’

ರತಿ ‘ಮಂದ್ರ’ದಲಿ ಮುಲುಗುತ್ತಿದ್ದಳು

ಸೋತಿದ್ದಳು ಹೊರಜಗಕೆ; ಗೆದ್ದಿದ್ದಳು ತನ್ನಲ್ಲಿ ‘ತಾ’

‘ಅದುಮಿದಷ್ಟೂ ಜಿಗಿವ ಬೆಂಡು ಪ್ರಶ್ನೆ’

 

ಮತ್ತೆ ಎದುರಾದದ್ದು-

ಫೇಸ್ಬುಕ್ಕಿನ ಮೊಗವಾಡದ ರಹದಾರಿಯಲಿ ಅದೂ ನಿನ್ನೆ

‘ತುಂಬಾ ಚೆಂದ, ವಯಸು ಕಾಣುವುದಿಲ್ಲ,

ಮಕ್ಕಳೆಷ್ಟು, ಹೆಚ್ಚೆಂದರೂ ನೀ ಹತ್ತು-ಹನ್ನೆರಡು ವರುಷ ಹಿರಿಯಳಷ್ಟೆ?’

ಹೆಸರು ಗಳಿಸಿಕೊಂಡವರ ‘ಕುದಿ ಬಸಿರಿನ’ ತವಕ…

ನಕ್ಕು ನಿವಾಳಿಸಿದೆ… ದೂರ ತಳ್ಳಲಿಲ್ಲ!

 

ಗೊತ್ತಿದ್ದೂ ಹೊತ್ತಿದ್ದೂ ಹುತ್ತದಲಿ ಇದ್ದದ್ದೆಲ್ಲ

ಎಳೆದೆಳೆದು ಬಿಸುಟೆ…

‘ಗರತಿಯ ನಿಜಬಣ್ಣ’ ಅವನಂಥವರ ಎಲೆಅಡಿಕೆ

ಸಮಾಧಾನದ ನಿಟ್ಟುಸಿರಿಟ್ಟೆ; ಮತ್ತಷ್ಟು ಪುಟಿದೆ-

ಹಿಂಸರಿದ… ಓಡಲಿಲ್ಲ!

ಬಾಯ್ಬಿಟ್ಟವನ ಕಣ್ಣರಳಿ ನಭದತ್ತ ದಿಟ್ಟಿshe3

ಪ್ರಖರತೆಗೆ ಕಣ್ಣು ನೆಲದತ್ತ ಬಾಗಿತ್ತು…

 

ಗರ್ವವಡಗಿದರೂ ಗಂಡುತನ ಆಸ್ಪದವೀಯದೆ

ಬುಸುಗುಡುತ್ತಿತ್ತು, ಸಮಯಸಿಕ್ಕಾಗ ಹೊರಳುತ್ತಿತ್ತು; ಚಪಲತೆಯ ಜಿಹ್ವೆ!

ಸೆಟೆದೆ; ನನ್ನೊಳಗೆ

ಅಕ್ಕ, ಲಲ್ಲೇಶ್ವರಿ….ದ್ರೌಪದಿಯ ಸಂಚಾರ

ಸ್ವಾಭಿಮಾನಿ ಸೀತೆ ಸದಾ ಜಾಗೃತೆ!

ಮಮತೆ ಮಂಡೋದರಿಯಂತೆ.

 

ಇವಳ್ಯಾರು…? ನಾ ಅವಳಂತಲ್ಲ-

ಬೇಕಾದ್ದು ಬೇಕೆಂದೇ ಪಡೆದರೂ

ತಲ್ಲಣಕೆ ತಂಪು ಸಿಂಪರಿಸಲು ಕಲಿತಿಲ್ಲ

ಅವಳು ‘ಅಹಲ್ಯೆ’-

‘ನಾ’ ಅವಳಲ್ಲ…

‍ಲೇಖಕರು Admin

October 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: