ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಿಲ್ಲದ ಸಂಜೆ..

ಶರತ್ಕಾಲದ ಒಂದು ದಿನ

-ರಮೇಶ್ ಗೋನಾಳ್

ಅವಳಿಲ್ಲದ ಸಂಜೆ
ಬಲುಬೇಸರ
ಬಲುಭಾರ ಮನದ ತುಮುಲ
ಮಹಾ ಯುದ್ದಗಳಿಗಿಂತಲೂ ಘನಘೋರ
ಅವಳ ಕಿರು ನಗು
ಪಿಸು ಮಾತಿಗೆ
ಚುಕ್ಕಿ-ತಾರೆಗಳ ದಂತಗಳಿಂದ ಚಿಮ್ಮುವುದು ಒಲವಿನ
ಹೂ ನಗೆಯು

ಆ…! ಶರತ್ಕಾಲ
ಸುತ್ತಲೂ ಕಾರ್ಗತ್ತಲು ಆವರಿಸಿ
ಬಿರುಗಾಳಿ ಬೀಸುತಲಿರಲು
ಸ್ವಪ್ನ ಕಾರ್ಮೋಡವ ಚದುರಿಸಿ
ಮಳೆಹನಿಯಾಗಿ ಬಂದಳು…
ತುಸು ತಂಗಾಳಿ ಸೂಸಿ
ಬಲುದೂರ ಹೋದಳು

ಧವಳ ಕಾಂತಿಯ ಹವಳ ಅವಳು…!
ಕಂಡು ಕಾಣದಂತೆ ಮರಿಚಿಕೆಯಾದಳು
ಆಗಾಗ
ಸ್ಮೃತಿಪಟಲದಲ್ಲಿ ಮಿಂಚಂತೆ ಹೊಳೆವವಳು
ಕಾಮನಬಿಲ್ಲಿನಂತೆ
ಅರೆಕ್ಷಣವೇ ಮರೆಯಾದವಳು

ಹೇ… ಕವಿದ ಕಾರ್ಮೋಡವೇ
ಧರೆಗಿಳಿದು ಬಿಡು ನೀನೊಮ್ಮೆ
ಎದೆಗೆರಗಿ ಹೋದವಳ ನೆನೆದು
ಯಾರಿಗೂ ಕಾಣದಂತೆ
ಅಳಬೇಕಿದೆ ನಾನೊಮ್ಮೆ !

‍ಲೇಖಕರು Admin

27 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading