ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಿನ್ನೂ ಮರದ ಬುಡದಲ್ಲೇ ಕುಳಿತಿದ್ದಾಳೆ…

ಅವಳು ಮತ್ತು ಆ ಮರ

– ಎಚ್ ಕೆ ಶರತ್

ಅವಳು
ಆ ಮರದೊಂದಿಗೆ
ಮಾತಿಗಿಳಿದಿದ್ದಾಳೆ
 
ತನ್ನಂತೆ
ಚೆಲುವು ಕಳಕೊಂಡು
ಬರಡಾಗಿರುವ
ಅದರೆದುರು
ಚೂರಾದ ಕನಸುಗಳ ಲೆಕ್ಕ
ಒಪ್ಪಿಸುತ್ತಿದ್ದಾಳೆ
 
ಮರ ಹರಡಿಕೊಂಡಿದೆ
ವಿಶಾಲವಾಗಿ
ಹಸಿರು ಕಳಕೊಂಡು
ನೆರಳಿನ ನೆಂಟಸ್ತನ ತೊರೆದಿದೆ

ಆದರೂ ಅವಳು
ಅದರ ಬುಡದಲ್ಲೇ ಕುಳಿತು
ಬಿಸಿಲಿನ ಧಗೆ ಎದುರು
ತನ್ನೊಡಲ ದುಃಖ ತೋಡಿಕೊಳ್ಳುತ್ತಿದ್ದಾಳೆ
 
ಬಿಸಿಲು ಮರೆಯಾಗಿದೆ
ತಂಪು
ಮರದೊಡಲಿನ ಹೊರಗೂ ಹಾಜರಾಗಿದೆ
 
ಅವಳಿನ್ನೂ
ಮರದ ಬುಡದಲ್ಲೇ ಕುಳಿತಿದ್ದಾಳೆ
ಮಾತು ಸರಿಸಿ
ಮೌನ ವರಿಸಿ
ನಿಟ್ಟುಸಿರು ಅರಸುತ್ತಿದ್ದಾಳೆ
 

‍ಲೇಖಕರು G

26 October, 2014

1 Comment

  1. mmshaik

    upame chennaagide..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading