ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಿಗೆ ಅವಳೇ ಅಮ್ಮ..

vini nayak

ವಿನಿ ನಾಯಕ್ 

ಗೊಂಬೆಯಂತಹ
ಕಂದಮ್ಮ.
ಹುಟ್ಟಿ ಎರಡೇ
ವರ್ಷಗಳಾಗಿದೆಯಂತೆ

ಅಪ್ಪ ಎಂದರೇನು
ಅಮ್ಮ ಎಂದರೇನು
ಯಾವುದೂ ಗೊತ್ತಿಲ್ಲ
ಹಸುಳೆಗೆ

kidಮಾಸಿದ ಬಟ್ಟೆ
ಎಣ್ಣೆ ಕಾಣದ ಕೂದಲು
ಉಗುರುಗಳ
ತುಂಬ ಮಣ್ಣು.
ಯಾರೋ ಬಂದು
ಸ್ನಾನ,ಊಟಗಳನ್ನೆಲ್ಲ
ಮಾಡಿಸುತ್ತಾರೆ
ಕೆಲವೊಮ್ಮೆ.

ಅವಳನ್ಯಾರೂ ಎತ್ತಿ
ಮುದ್ದಾಡುವದಿಲ್ಲ
ತಟ್ಟಿ ಮಲಗಿಸುವದಿಲ್ಲ
ಅವಳಿಗೆ ಅವಳೇ ಅಮ್ಮ.

ಏಳುತ್ತ ಬೀಳುತ್ತ
ಅಂಬೆಗಾಲಿಡುತ್ತಾ
ಹೋಗುತ್ತಾಳೆ.
ಹಸಿವಾದಾಗಲೆಲ್ಲ
ಅಳುತ್ತಾಳೆ
ಯಾರೂ
ಕೇಳಿಸಿಕೊಳ್ಳುವದಿಲ್ಲ.

ಅಳುವಿನ ಶಬ್ದ
ಉಸಿರಾಡುವ ಶಬ್ದದಷ್ಟೇ
ಸಹಜ ಅನಾಥಾಶ್ರಮದಲ್ಲಿ

ಊಟ ಬಟ್ಟೆಗಾಗಿ
ಅನಾಥಾಶ್ರಮದ
ದೊಡ್ಡ ಮಕ್ಕಳೆಲ್ಲ
ಕಿತ್ತಾಡಿಕೊಳ್ಳುವಾಗ
ಇವರ ಕಿತ್ತಾಟಗಳೆಲ್ಲ
ಆಟವೆಂದುಕೊಂಡು
ಕೇಕೆ ಹಾಕಿ
ನಗುತ್ತಾಳೀಕೆ
ಪುಟ್ಟ ಕಂದಮ್ಮ.

ಆ ಮುಗ್ಧ
ನಗುವನ್ನೊಮ್ಮೆ
ನೋಡಿದರೆ
ಬದುಕು
ದುರಂತಗಳ ಸರಮಾಲೆ
ಎಂದುಬಿಡುತ್ತೀರಿ
ನೀವು.
ಕಣ್ಣೀರಿಟ್ಟುಬಿಡುತ್ತೀರಿ
ನೀವು.

‍ಲೇಖಕರು Admin

26 June, 2016

1 Comment

  1. shama nandibetta

    ಅಳುವಿನ ಶಬ್ದ
    ಉಸಿರಾಡುವ ಶಬ್ದದಷ್ಟೇ
    ಸಹಜ ಅನಾಥಾಶ್ರಮದಲ್ಲಿ

    Nija. Alli ellavoo sahaja, jagala dwesha hotte uri kooda. ivella illade iddare asahaja

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading