ಅವರು ಮುಂಬೈ ಕನ್ನಡಿಗರ ಆಸ್ತಿ

ಶ್ಯಾಮಲಾ ಮಾಧವ 

ನಮ್ಮ ಮುಂಬೈ ಕನ್ನಡಿಗರ ಆಸ್ತಿ ಪೂಜ್ಯ, ಪ್ರಿಯ ಮಾನವ್ಯಕವಿ, ಪಂಪ ಪ್ರಶಸ್ತಿವಿಜೇತ ಮುಂಬೈ ಕನ್ನಡಿಗ ಬಾಬಾಸಾಹೇಬ ಅಪ್ಪಾಸಾಹೇಬ ಸನದಿ. ಅವರು ನಮ್ಮನ್ನಗಲಿದ್ದಾರೆ.

ನಮ್ಮ ಪಾಲಿಗೆ ಸದಾ ಅಮರರು, ಅವರು.

ಸಾಹಿತಿ, ಜೊತೆಗಾರ ವ್ಯಾಸರಾಯ ಬಲ್ಲಾಳರು ಮುಂಬೈ ತೊರೆವಾಗ ಕರ್ನಾಟಕ ಸಂಘದ ಬೀಳ್ಕೊಡುಗೆ ಸಮಾರಂಭದಲ್ಲಿ ಬೇಂದ್ರೆಯವರ ಹಾಡಿನಂತೆ ,

“ಘಮ ಘಮ ಘಮಾಸ್ತಾವ ಮಲ್ಲಿಗೀ
ನೀವು ಹೊರಟಿದ್ದೀಗ ಎಲ್ಲಿಗಿ? ” ಎಂದು ಕೇಳಿದವರು.

“ನಿಮ್ಮ ನೆನಪು
ಹಸಿರಾಗಿ ಉಳೀತಾವು
ನೀವೆಲ್ಲಿದ್ದರೂ ಹೋಗಿ
ನಂಬಿದ ಜನಗಳ
ಅಪಾರ ಎದಿಭಾರ
ನೀವ ನೋಡಿ ತೂಗಿ ”

ಎಂದು ಬಲ್ಲಾಳರಿಗೆ ಅವರು ಅಂದು ಮಾಡಿದ ನಿವೇದನೆಯೇ ಇಂದು ನಮ್ಮದು.

“ಕನ್ನಡ ಜನಮನದ ಸೇವೆಯಲಿ ಹೊರಟವರ
ಮಧುರ ಸ್ಮರಣೆಯ ನಾವು ಜಪ್ಪಿಸುವೆವು ”

ಎಂದು ಅವರು ಅಂದ ಮಾತನ್ನೇ ನಾವಿಂದು ಜಪ್ಪಿಸುತ್ತಿರುವೆವು.

ಮಾನವ್ಯ ಕವಿ ಪ್ರಿಯ ಸನದಿ ಅವರನ್ನು ಕಳಕೊಂಡು ಮುಂಬೈ, ಕನ್ನಡನಾಡು ಇಂದು ಬಡವಾಗಿದೆ.

ಕುಮಟಾಗೆ ಆವರಲ್ಲಿಗೆ ಭೇಟಿಗೆ ಬರುವೆವೆಂದು ಎಷ್ಟು ವರ್ಷಗಳಿಂದ ಹೊರಟಿದ್ದ ನಾವು – ಮಮತಾ, ನಾನು – ಕೊನೆಗೂ ಅಲ್ಲಿಗೆ ತಲುಪಲಿಲ್ಲ. ಎಣಿಸಿದ್ದನ್ನು ಕೂಡಲೇ ಮಾಡಬೇಕೆಂಬ ಪಾಠ ಇದು ಎಷ್ಟನೇ ಬಾರಿಯೋ! ಹೃದಯ ಭಾರವಾಗಿದೆ.

‍ಲೇಖಕರು avadhi

March 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Gopal trasi

    ಹೌದು, ಎಂಥ ಲವಲವಿಕೆ ಅವರ ಮಾತು ಕಥೆ.. ಸನದಿ ಸರ್ ಅಪ್ಪಟ ಕವಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: