ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನ ಸಂಗಡ ಅಕ್ಕ..

-ದೀಪಾ ಗೋನಾಳ

ಪಾದ ಮುಟ್ಟಿದಳು ಮಣ್ಣ ಕಣ್ಣವ್ವ
ಕಿತ್ತಿಟ್ಟ ಕಾಲ ಕೆಳಗೆ ಹೊಳೆಸಾಲ ಗಂಗವ್ವ
ಹೊರಡುವುದೋ ನಿಲ್ಲುವುದೋ ಕೇಳಿಯೇ
ಬಿಟ್ಟೆ; ಕಾಲೂರಿ ಕುಳಿತ ಕಲ್ಲವ್ವನಲ್ಲಿ
ನಕ್ಕಳು ಹಲ್ಲ ಹೊಳಪ‌ ಹೊಳೆ ತುಂಬ ಚೆಲ್ಲಿ

ಹುಟ್ಟಾಡಿಸುತ ತೆರೆದ ಮೈಯ್ಯ ತೆರೆಗುಂಟ
ಅಂಬಿಗನ ಮಗ ನಂಬಿಗಯ್ಯ ಹೊಂಟ
ಹೊಳೆಗೂ ನಿನಗೂ ಎಂತ ನಂಟೋ
ಎಂದೆ ಹಾರಿಸುತ ಬಿಚ್ಚಿ ಹುಬ್ಬಗಂಟ

ಮಳಿಗಾಳಿ ಚಳಿಗಾಳಿ ಎಲ್ಲ ಕಾಲದ ಗಾಳಿಗೂ
ಗೊತ್ತಿವನ ನರಮೈಯ್ಯಿ
ಹರಿವ ಗಂಗಿಗೂ ತೇಲು ಗುಳ್ಳಿಗೂ
ಗೊತ್ತಿವನ ಗೆರೆ ಅಂಗೈ

ಹುಟ್ಟನೇ ಮೈ ಮಾಡಿಕೊಂಡಾವ
ತೋಳ ತೆರೆದೀಜೀಜಿ ಸಾಗಿದಾಂಗ
ಇಡೀ ದೋಣಿ ಓಟ
ದೂರ ದೂರ ಸಾಗುತಿರೆ ದಡಸರಿಸಿ
ಹೊಳೆ ನಡದಗುಂಟ ದೇವರ ಮಕ್ಕಳ ನೀರಾಟ

ಅದೋ ಹುಲ್ಲು; ಹುಲ್ಲು ದಾಟಿದರೆ
ಕಲ್ಲು;ಕಲ್ಲ ದಾಟಿದರೆ ಕಾಡು;
ಕಾಡ ಮೀಟಿ ಹೆಜ್ಜೆ
ಹೆಜ್ಜೆ ದಾಟಿ ನುಗ್ಗಿದರೆ
ಬೆಟ್ಟ;
ಬೆಟ್ಟದಾ ಮೇಲೆ ಚೆಲುವ ಚೆನ್ನಮಲ್ಲಿಕಾರ್ಜುನ
ಅವನ ಸಂಗಡ ಅಕ್ಕ

ಹೊಳೆ ಹೊಳೆವ ಗಂಗಿ
ಕೆಂಪ ನುಂಗಿ ಕಾಯುವೆನು
ಸಂಜೆ ಮರಳಿ ಬಾ ಎಂದಳು ಇಳಿಸಿ ದೋಣಿ

‍ಲೇಖಕರು Admin

27 May, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading