ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಮಳೆಯಾದ, ಅವಳು ಇಳೆಯಾದಳು

 ಶಮ ನಂದಿಬೆಟ್ಟ 

a pairದಿನಗಟ್ಟಲೆಯಿಂದ ಭೇಟಿಯಾಗದ ಅವರಿಬ್ಬರೂ ಭೇಟಿಯಾದ ದಿನ “ನಂಬಿಕೆ” ಅನ್ನೋ ಒಂದು ಪದವನ್ನಿಟ್ಟುಕೊಂಡು ಕಿತ್ತಾಡತೊಡಗಿದ್ದರು.

“ವರ್ಷಗಟ್ಟಲೇ ನಿನ್ನ ಕಣ್ಣನ್ನು ನೋಡುತ್ತಲೇ ಸುಮ್ಮನೇ ಪ್ರೀತಿಸುತ್ತಿದ್ದ ನಾನು ನೀ ಎದ್ದು ಹೋದ ಮೇಲೂ ಯಾವತ್ತೋ ಸಿಗುತ್ತೀ ಅಂತ ಕಾದಿದ್ದೆ ನೋಡು ಅದು ನಂಬಿಕೆ” ಅವನಂದ.

ಉಹುಂ.. ಅವಳು ಒಪ್ಪಲಿಲ್ಲ.

“ನಾವಿಬ್ಬರೂ ಎರಡು ದೇಶದಲ್ಲಿದ್ದರೂ ಆಕಾಶದಂತೆ ನಮ್ಮ ನಡುವೆ ಪ್ರೀತಿ ಹಬ್ಬಿದೆ ನೋಡು; ಅದು ನಂಬಿಕೆ” ಅವನಂದ.

ಉಹುಂ.. ಅವಳು ಒಪ್ಪಲಿಲ್ಲ.

“ಯಾವತ್ತಿಗೂ ನಾವು ಒಂದಾಗುವುದಿಲ್ಲ ಅನ್ನೋ ಸತ್ಯ ಗೊತ್ತಿದ್ದರೂ ಇಬ್ಬರೂ ಕಾಯುತ್ತಿದ್ದೇವಲ್ಲ; ಅದು ನಂಬಿಕೆ” ಅವನಂದ.

ಉಹುಂ.. ಅವಳು ಒಪ್ಪಲಿಲ್ಲ.

“ಸುಳಿಮಿಂಚಿನಂಥ ನನ್ನ ನಿಭಾಯಿಸಲಾಗದೆ ಎಲ್ಲರೂ ಸೋತ ಮೇಲೂ ನಿನ್ನಲ್ಲಿ ನನ್ನ ನಿಭಾಯಿಸಿ ಗೆಲ್ಲುವ ಭರವಸೆಯಿದೆ ನೋಡು ಅದು ನಂಬಿಕೆ” ಅವನಂದ.

ಉಹುಂ.. ಅವಳು ಒಪ್ಪಲಿಲ್ಲ.

we are each otherಅವನಿಗೂ ಸಾಕಾಯ್ತು.

“ಹೋಗ್ಲಿ ಬಿಡು, ನೀನೇ ಹೇಳು… ನಂಬಿಕೆ ಅಂದರೇನೇ ಮತ್ತೆ?” ಪ್ರಶ್ನಿಸಿದ್ದ.

“ನಂಬಿಕೆ ಅಂದರೆ ನೀನು” ಸಮುದ್ರದಂಥ ಕಣ್ಣಿನ ಹುಡುಗಿ ತಣ್ಣಗೆ ಹೇಳಿದಳು.

ಅವನು ಮಳೆಯಾದ
ಅವಳು ಇಳೆಯಾದಳು

 

‍ಲೇಖಕರು admin

26 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading