ಈಗ ಅಮೀರ್ ಖಾನ್ ಹೇಳಿದಂತೆಯೇ ಈ ಹಿಂದೆ ಅನಂತಮೂರ್ತಿ ಹೇಳಿದ್ದರು..

l n mukundrajಎಲ್ ಎನ್ ಮುಕುಂದರಾಜ್ 

ananta murthy tehelkaಈಗ ಅಮೀರ್ ಖಾನ್ ಹೇಳಿದಂತೆಯೇ ಈ ಹಿಂದೆ ಅನಂತಮೂರ್ತಿ ಹೇಳಿದ್ದರು. ಅವರಿಗೆ ಕೆಲವು ಮೂರ್ಖರು ವಿದೇಶಕ್ಕೆ ಟಿಕೆಟ್ ಬುಕ್ ಮಾಡಲು ಯತ್ನಿಸಿದ್ರು . 500 ವರ್ಷದ ಹಿಂದೆ ಕೃಷ್ಣದೇವರಾಯನ ಕಾಲದಲ್ಲಿ ಕುಮಾರವ್ಯಾಸ ಎಂಬ ಕನ್ನಡ ಕವಿ ಅಸಹಿಷ್ಣುತೆ ತಾಳಲಾರದೆ ಹೀಗೆ ಹೇಳಿದ್ದ.

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನಾ
ನೆರವು, ಸುಡು ಸುಡುತಲಿದೆ ದೇಶ
ಬಡವರ ಭಿನ್ನಪವನ್ನಿನ್ನಾರು ಕೇಳುವರು
ನಾವಿನ್ನಿಲ್ಲಿರಲು ಬಾರದೆಂದು ಜನ ಹೆಸರಿನ
ಬೇಗೆಯಾದರು.

ಮೂರ್ಖ ಕವಿ, ಆ ಕಾಲದ ಬುದ್ಧಿಜೀವಿ ಕುಮಾರವ್ಯಾಸನಿಗೂ ಟಿಕೆಟ್ ಬುಕ್ ಮಾಡಿಸಲಿ.

‍ಲೇಖಕರು admin

November 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. vasudevamurthy

    ಅನಂತಮೂರ್ತಿ ಅಮೀರ್‌ಖಾನ್‌ನಂತೆ ಅಡುಗೆಮನೆಯಲ್ಲಿ ನಡೆಯುವ ಮಾತುಕತೆಯ ಮೂಲಕ ರಾಜಕೀಯ ವಿಶ್ಲೇಷಣೆ ಮಾಡಲು ಹೋಗದೆ “ಮೋದಿಯಂತಹವರು ಪ್ರಧಾನಿಯಾಗುವ ದೇಶದಲ್ಲಿ ಬದುಕಿರಲು ನನಗಿಷ್ಟವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಪಬ್ಲಿಕ್ ಟಿವಿ ರಂಗನಾಥ್ “ಮುಂದೊಂದು ದಿವಸ ಅವರು ಪ್ರಧಾನಿಯಾಗೇ ಬಿಡಬಹುದು; ಒಂದು ವೇಳೆ ನೀವು ಕುಳಿತಿರುವ ವೇದಿಕೆಯ ಮೇಲೆ ಅವರೂ ಆಗಮಿಸಿದರೆ ಏನು ಮಾಡುವಿರಿ?” ಎಂದು ಸಂದರ್ಶನವೊಂದರಲ್ಲಿ ಕೇಳಿದ್ದರು. ಆಗ ಅನಂತಮೂರ್ತಿ “ಎಷ್ಟಾದರೂ ನಾನೊಬ್ಬ ಭಾರತೀಯ ಪ್ರಜೆ. ಅವರು ನನ್ನ ಪ್ರಧಾನಿ ಎಂದ ಮೇಲೆ ಎದ್ದು ನಿಂತು ಅವರನ್ನು ಗೌರವಿಸಬೇಕಾದುದು ನನ್ನ ಕರ್ತವ್ಯವಲ್ಲವೇ? ಆದರೆ ನನ್ನ ಸಾಮಾಜಿಕ ನಂಬಿಕೆ ಮತ್ತು ಕಾಳಜಿಗಳಿಗೆ ಅನುಗುಣವಾಗಿ ಅವರು ಆಡಳಿತ ನಡೆಸಬೇಕು ಎಂದು ಅವರನ್ನು ತಪ್ಪದೆ ಆಗ್ರಹಿಸುತ್ತೇನೆ” ಎಂದು ಉತ್ತರಿಸಿದ್ದರು. (ಅನಂತಮೂರ್ತಿಯವರ ಇಂತಹ ಮಾತುಗಳನ್ನು ಬಲಪಂಥೀಯರು ದ್ವಂದ್ವ, ಅವಕಾಶವಾದ ಎಂದೆಲ್ಲ ಸುಲಭವಾಗಿ ಅಪವ್ಯಾಖ್ಯಾನಿಸಬಹುದು). ಆದರೆ ಇಂತಹ ಆಶಾವಾದ ಮತ್ತು ಪಾಸಿಟೀವ್ ಆಟಿಟ್ಯೂಡ್ ಇರುವ ಒಬ್ಬನೇ ಒಬ್ಬ ಎಡಪಂಥೀಯ ಚಿಂತಕನೂ ನಮ್ಮ ನಡುವೆ ಇಲ್ಲದಿರುವುದು ಬಹುದೊಡ್ಡ ಕೊರತೆ ಮತ್ತು ಆತಂಕ ಉಂಟು ಮಾಡಿದೆ.

    ಪ್ರತಿಕ್ರಿಯೆ
    • AUggananavar

      ನಿಜ ಸರ್, ಇದು ಒನ್ದು ದೊಡ್ಡ ಸಮಸ್ಸೆಯಾಗಿ ಉಲ್ಬನಿಸುತ್ತಿದೆ.

      ಮಾತುಗಳ್ ಬರೀ ಅಕ್ಷರಗಳಲ್ಲ ಅದು ಭಾವನೆ, ಅದನ್ನು ಸರಿಯಾಗಿ ಅರ್ಥ ಮಾದಿಕೊಳ್ಳಬೆಕಾಗಿದೆ

      ಪ್ರತಿಕ್ರಿಯೆ
  2. G.W.Carlo

    ನಾನು ಮಾತನಾಡುವುದಾದರೆ ಅನಂತಮೂರ್ತಿಯವರಂತೆ ತೂಕ ಬದ್ಧವಾಗಿ ಮಾತನಾಡಲು ಸಾಧ್ಯವಿಲ್ಲ. ಅವರ ಪಾಂಡಿತ್ಯಕ್ಕೆ ನನ್ನದು ಯಾವುದೇ ಸರಿ ಸಾಠಿಯಲ್ಲ. ಅಮೀರ್ ಅಡುಗೆ ಮನೆಯಿಂದ ತನ್ನ ಹೆಂಡತಿ ವ್ಯಕ್ತ ಪಡಿಸಿದ ಆತಂಕವನ್ನು ದೇಶದ್ರೋಹವೆನ್ನುವುದಾದರೆ ಯಾರೂ ತಮ್ಮ ಮನದಾಳದ ಆತಂಕವನ್ನು ಸಹೃದಯರಾದ ತಮ್ಮಲ್ಲಿ ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ.

    ಪ್ರತಿಕ್ರಿಯೆ
    • vasudevamurthy

      ನಾನಂತೂ ದೇಶದ್ರೋಹ ಎನ್ನಲಾರೆ. ಆದರೆ ಅವರಿಗೆ ವ್ಯಕ್ತಿಗತವಾಗಿ ಏನೂ ಆಗಿರದ ಮೇಲೆ ಮನೆಯೊಳಗಿನ ಇಂತಹ (ಆಧಾರ ರಹಿತ) ಖಾಸಗಿ ಮಾತುಗಳು ಅನಗತ್ಯ ಅಶಾಂತಿ ನಿರ್ಮಾಣ ಮಾಡುತ್ತದೆ. ಅವರು ಪ್ರಭಾವೀ ವ್ಯಕ್ತಿ ಆಗಿದ್ದರಂತೂ ಹೊಣೆಗೇಡಿತನದ ಮಾತುಗಳೆಂದೇ ಕರೆಯಬೇಕಾಗುತ್ತದೆ.

      ಪ್ರತಿಕ್ರಿಯೆ
  3. Anonymous

    ಕುಮಾರವ್ಯಾಸ ಹೀಗೆ ಹೇಳಿದ್ದು – ಕರ್ಣಾಟ ಭಾರತ ಕಥಾಮಂಜರಿ ಸಭಾಪರ್ವ: ೦೧. ರಾಜಸೂಯಾರಂಭ (೬೨)ರಲ್ಲಿ ಮಹಾಭಾರತ ಕುರಿತು ಹೊರತು ಕೃಷ್ಣದೇವರಾಯನ ಆಡಳಿತದ ಸಮಕಾಲೀನ ಸಮಾಜಿಕ ಜೀವನ ಕುರಿತಲ್ಲ… ಅಲ್ಲದೆ ಕುಮಾರ ವ್ಯಾಸ ಕವಿಯ ಕಾಲವು ಗದುಗಿನ ವೀರ ನಾರಾಯಣನ ಕಾಲವೆಂದು ಹೇಳಲಾಗಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: