ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವನನ್ನೇ ದಿಟ್ಟಿಸಿ ನೋಡಿದೆ, ನೋಡಲು ಥೇಟ್ ನನ್ನ ಹಾಗೆ' – ಕಾಜೂರು ಸತೀಶ್

ಓಟ

ಕಾಜೂರು ಸತೀಶ್

ಒಂದು ದಿನ ನಿದ್ದೆಯಿಂದ ಎದ್ದು ನೋಡಿದೆ.
ಎಲ್ಲವೂ ಓಡುತ್ತಲೇ ಇವೆ:
ಹುಲಿಗಳು, ಮರಗಳು,
ಬೆಟ್ಟಗಳು, ನದಿಗಳು,
ಮೋಡಗಳು, ನಕ್ಷತ್ರಗಳು,
ಸೂರ್ಯ , ಚಂದ್ರ …
ಎಲ್ಲವೂ…
 
ನಿಬ್ಬೆರಗಾಗಿ ನೋಡಿದೆ:
ಒಬ್ಬಾತ ಹುಚ್ಚುಹಿಡಿದಂತೆ
ಚೂಪು ಕಠಾರಿಯ ಹಿಡಿದು
ಅವುಗಳ ಬೆನ್ನಟ್ಟಿ ಓಡುತ್ತಿದ್ದಾನೆ.
 
ಅವನನ್ನೇ ದಿಟ್ಟಿಸಿ ನೋಡಿದೆ-
ನೋಡಲು ಥೇಟ್ ನನ್ನ ಹಾಗೆ!
ನನ್ನ ಕೈಗಳನ್ನೇ ನೋಡಿಕೊಂಡೆ-
ಕೈಯ ತುಂಬೆಲ್ಲ ರಕ್ತವೋ ರಕ್ತ!

**

ಮಲಯಾಳಂ ಮೂಲ – ಕೆ ಸಚ್ಚಿದಾನಂದನ್
 
 

‍ಲೇಖಕರು G

8 October, 2014

4 Comments

  1. smitha Amrithraj

    olledide

  2. ashwini rao.k.n.

    kavithe super aagide saar..

  3. gavisidd hosamani

    arthapurna kavite

  4. maruti dasannavar

    wah. kavite tumba chennagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading