ಚುಕ್ಕು’ಬುಕ್ಕು’ಗೆ ಇಲ್ಲಿ ಕ್ಲಿಕ್ಕಿಸಿ
ಗೆಳೆಯ ಗೆಳತಿಯರೆ,
ಚುಕ್ಕುಬುಕ್ಕುಗೆ ಸ್ವಾಗತ. ಕನ್ನಡ ಪುಸ್ತಕಾಸಕ್ತರು ಸೇರಲು ಉಲ್ಲಾಸಕರ ತಾಣವೊಂದಿದ್ದರೆ ಚೆಂದ ಎಂಬ ಕಲ್ಪನೆಯೊಂದಿಗೆ ರೂಪುಗೊಂಡ ತಾಣವಿದು. ಲೇಖಕರು, ಓದುಗರು, ಪ್ರಕಾಶಕರು ಭೇಟಿಯಾಗಲು ಚುಕ್ಕುಬುಕ್ಕು ಒಂದು ಚೆಂದದ ‘ಫ್ಲಾಟ್‌ಫಾರ್ಮ್’ ಆಗಬೇಕೆಂಬುದು ನಮ್ಮ ಬಯಕೆ.
ಪ್ರತಿವರ್ಷ ಸುಮಾರು ೭೦೦೦ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳ ಮೂಲಕ ಓದುಗರಿಗೆ ಗೊತ್ತಾಗುವುದು ಸುಮಾರು ೧೦೦೦ ಪುಸ್ತಕಗಳು ಮಾತ್ರ. ಅಂದರೆ ಶೇಕಡಾ ೮೫ರಷ್ಟು ಪುಸ್ತಕಗಳು ಬಂದದ್ದು ಆಸಕ್ತನಿಗೆ ತಿಳಿಯುವುದೇ ಇಲ್ಲ. ಬರಹಗಾರ, ಪ್ರಕಾಶಕ, ಕಲಾವಿದ,ಮುದ್ರಕ-ಎಷ್ಟೊಂದು ಜನರ ಶ್ರದ್ಧೆಯಿಂದ ರೂಪುಗೊಳ್ಳುವ ಒಂದು ಪುಸ್ತಕ ಪ್ರಕಟವಾದದ್ದು ಓದುಗರಿಗೆ ತಿಳಿಯದಿರುವುದು ತೀರಾ ಅನ್ಯಾಯವಲ್ಲವೆ?
ಹಾಗಾಗಿ ಎಲ್ಲವೂ ಅಲ್ಲದಿದ್ದರೂ ಓದಲು ಯೋಗ್ಯ, ಸದಭಿರುಚಿಯ ಪುಸ್ತಕವೊಂದು ಬಂದಾಗ ಅದನ್ನು ನಿಮಗೆ ಪರಿಚಯಿಸುವುದು ಈ ತಾಣದ ಉದ್ದೇಶ. ಪರಿಚಯವೆಂದರೆ ಪುಟ ಇಷ್ಟು ಬೆಲೆ ಇಷ್ಟು ಅಂತ ಹೇಳುವುದಲ್ಲ; ನಾಲ್ಕು ಪ್ರತ್ಯೇಕ ಪುಟಗಳಲ್ಲಿ ಸವಿವರವಾಗಿ ಪುಸ್ತಕದ ವಿಶೇಷಗಳನ್ನು ಆಪ್ತವಾಗಿ ತೆರೆದಿಡಲಾಗುವುದು. ಅದೊಂಥರ ಹಬ್ಬ-ಬರವಣಿಗೆಯ ಮೆರವಣಿಗೆ. ಪ್ರತಿ ಹೊಸ ಪುಸ್ತಕದ ಒಂದು ಅಧ್ಯಾಯವನ್ನು ನೀವಿಲ್ಲಿ ಉಚಿತವಾಗಿ ಓದಬಹುದು. ಪುಸ್ತಕದ ಬಗ್ಗೆ ಲೇಖಕ ಹೇಳುವುದೇನು? ವಿಮರ್ಶಕರ ಅನಿಸಿಕೆಗಳೇನು? ಉಚಿತ ಅಧ್ಯಾಯ ಓದಿ ಇಷ್ಟವಾದವರಿಗೆ ಪುಸ್ತಕ ಕೊಂಡುಕೊಳ್ಳಲು ಪ್ರಕಾಶಕರ ಸಂಪರ್ಕ ವಿವರಗಳು ಎಲ್ಲವೂ ಇಲ್ಲಿ ಲಭ್ಯ. ಪುಸ್ತಕದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಇತರ ಓದುಗರೊಂದಿಗೆ ಚರ್ಚಿಸಬಹುದು. ಅದಲ್ಲದೆ ಪುಸ್ತಕ ಜಗತ್ತಿನ ಆಗುಹೋಗುಗಳು, ಯಾರು ಏನು ಓದುತ್ತಿದ್ದಾರೆ? ಯಾವ ಪುಸ್ತಕ ಯಾರನ್ನು ಹೇಗೆ ಮೋಡಿ ಮಾಡಿತು ಎಂಬಂಥ ಕಿರುಬರಹಗಳನ್ನೂ ಈ ತಾಣದಲ್ಲಿ ಓದಬಹುದು.
ಇಷ್ಟು ಹೇಳಿದರೆ ಬರೀ ಅರ್ಧವನ್ನಷ್ಟೇ ಹೇಳಿದಂತಾಗುತ್ತದೆ. ನಿಮ್ಮೆಲ್ಲರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದಷ್ಟೇ ಈ ಕನಸು ಪೂರ್ಣವಾಗುತ್ತದೆ. ಮತ್ತೊಂದು ವಿಷಯ ಹೇಳಬೇಕಿದೆ: ಮೂವರು ಗೆಳೆಯರು ಕನ್ನಡಪ್ರೇಮ ಮತ್ತು ಪುಸ್ತಕಪ್ರೀತಿಯಿಂದ ರೂಪಿಸಿರುವ ತಾಣವಿದು. ಹಾಗಾಗಿ ನಿಮ್ಮ ಸಲಹೆ, ಸೂಚನೆಗಳು ನಮಗೆ ಅಗತ್ಯ. ಅದೇರೀತಿ ಆರಂಭದಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬರಲೂ ಬಹುದು. ನಿಮ್ಮ ಕಂಪ್ಯೂಟರಿನಲ್ಲಿ ಚುಕ್ಕುಬುಕ್ಕು ತಾಣ ಸರಿಯಾಗಿ ಕಾಣುತ್ತಿಲ್ಲದಿದ್ದರೆ, ಕಿರಿಕಿರಿಗಳೇನಾದರೂ ಗಮನಕ್ಕೆ ಬಂದರೆ ದಯವಿಟ್ಟು ನಮಗೆ ತಿಳಿಸಿ; ಸರಿಪಡಿಸುತ್ತೇವೆ. ಚುಕ್ಕುಬುಕ್ಕು ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ಕನ್ನಡ ರಾಜ್ಯೋತ್ಸವದ ಈ ಶುಭಹೊತ್ತಿನಲ್ಲಿ ಹೊರಟಿರುವ ಚುಕ್ಕುಬುಕ್ಕು ಓದಿನ ಬಂಡಿ ನಿಮಗೆ ಇಷ್ಟವಾಗಲಿ. ಯಾವುದೋ ಪುಟ್ಟ ಊರಿನಲ್ಲಿ ಕೂತು ಹೊಸಬನೊಬ್ಬ ಬರೆಯುವ ಒಳ್ಳೆಯ ಪುಸ್ತಕವೊಂದು ಯಾರ ಹಂಗಿಲ್ಲದೆ ತನ್ನ ಕಸುವಿನ ಮೇಲೆ ತಾನು ಓದುಗನ ಕೈಗೆ ಸಿಗುವಂತಾಗಲಿ, ಅದಕ್ಕಾಗಿಯೇ ಈ ತಾಣ.
ನಿಮಗೆಲ್ಲ ರಾಜ್ಯೋತ್ಸವದ ಹಿತಾಶಯಗಳು….ವಂದನೆಗಳು.
ಚುಕ್ಕುಬುಕ್ಕು ಟೀಮ್
ಬಂಡಿ ಹೊರಟಿದ್ದು ಹೀಗೆ…
ಪುಸ್ತಕ ವ್ಯಾಮೋಹ, ಕನ್ನಡಪ್ರೇಮ ಮತ್ತು ಮಾಡಿದ್ದೆಲ್ಲ ಚಂದವಿರಲೇಬೇಕೆಂಬ ಹಂಬಲ- ಈ ಮೂರು ಸಮಾನ ಆಲೋಚನೆಗಳಿಂದ ಜತೆಗೂಡಿದ ಮೂವರು ಗೆಳೆಯರು ಒಟ್ಟಾಗಿ ಕಂಡ ಕನಸು ಈ ಚುಕ್ಕುಬುಕ್ಕು ತಾಣ.
ಮನದ ಕಪಾಟಿನ ತುಂಬ ಪುಸ್ತಕಗಳನ್ನು ಹರಡಿಕೊಂಡು ಸದಾ ಓದುತ್ತಾ ಇರುವ ಸೌಮ್ಯ ಕಲ್ಯಾಣ್‌ಕರ್ ಈ ತಾಣದ ಸಂಪಾದಕಿ. ಚಿತ್ರಕಲೆ ಮತ್ತು ಫೋಟೋಗ್ರಫಿ ಅವರ ಇನ್ನೆರಡು ಗೀಳು. ಇಂಥದೊಂದು ಓದಿನ ಮನೆ ಮಾಡುವ ಸೌಮ್ಯರ ಬಹುದಿನದ ಕನಸಿಗೆ ಸ್ಪಷ್ಟ ರೂಪುರೇಷೆ ಕೊಟ್ಟು, ಈ ಚಂದದ ವೆಬ್‌ಸೈಟನ್ನು ಒಬ್ಬರೇ ಕೂತು ಕಟ್ಟಿದ್ದು ಸಿದ್ಧಾರ್ಥ್ ಕಲ್ಯಾಣ್‌ಕರ್. ಚುಕ್ಕುಬುಕ್ಕುವಿನ ಬೋಗಿಗಳ ಒಪ್ಪ-ಓರಣ-ಬಣ್ಣ-ತೋರಣಗಳ ಹೊಣೆ ಹೊತ್ತದ್ದು ಅಪಾರ.
ಆನ್‌ಲೈನ್ ಬುಕ್ ಶಾಪ್, ಡಿಸೈನ್‌ಹೌಸ್ ಅಥವಾ ಇನ್ಯಾವುದನ್ನು ಮಾಡುವುದು ಎಂದು ಹಾಗೇ ಸುಮ್ಮನೆ ಕೂತಾಗಲೆಲ್ಲ ಚರ್ಚಿಸುತ್ತಿದ್ದ ಗೆಳೆಯರಿಗೆ ಒಂದು ದಿನ ಮಧ್ಯಾಹ್ನ ಯಾವುದೋ ಬೀದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಹೊಳೆದದ್ದು ಈ ಓದುಗರಿಗೂ ಪ್ರಕಾಶಕರಿಗೂ ಸಹಾಯವಾಗುವಂಥ ವೆಬ್‌ಸೈಟ್ ಒಂದನ್ನು ಸೃಷ್ಟಿಸಿದರೆ ಹೇಗೆ ಎಂಬ ಆಲೋಚನೆ. ಹಾಗೆ ಹೊಳೆದ ಆಲೋಚನೆಗೆ ಸಾಕಷ್ಟು ಸಾಧ್ಯತೆಗಳಿವೆ ಎಂದು ಯಾಕೋ ಬಲವಾಗಿ ಅನ್ನಿಸಿ ಅದೇ ದಿನ ಗುಡ್‌ಬುಕ್ಸ್ ಎಂಬ ಡೊಮೈನ್ ಅನ್ನು ಕೊಂಡುಕೊಂಡೂ ಆಯಿತು.
ಆಮೇಲೆ ಶುರುವಾಯಿತು ಅದರಲ್ಲಿ ಏನಿರಬೇಕು ಹೇಗೆ ಇರಬೇಕು ಎಂಬ ಬರೆದು ಹರಿದು ತಿದ್ದಿ ತೀಡಿದ ಕನಸಲ್ಲೂ ಕಾಡಿದ ಐಡಿಯಾಗಳ ಕಾಗದದುಂಡೆಗಳ ಕಾಲ. ಮಧ್ಯೆದಲ್ಲೆಲ್ಲೋ ಗುಡ್‌ಬುಕ್ಸ್ ಎಂಬ ಇಂಗ್ಲಿಷಿಗಿಂತ ಚುಕ್ಕುಬುಕ್ಕು ಎಂಬ ಹೆಸರು ಇಷ್ಟವಾಯಿತು. ಓದಿನ ಬಂಡಿಯ ಚಿತ್ರ ಬದಲಾಗುತ್ತಾ ಹೋಯಿತು. ವೆಬ್‌ಸೈಟು ಒಂದು ಹಳಿಗೆ ಬಂತು ಎನ್ನುವಷ್ಟರಲ್ಲಿ ಮತ್ತಷ್ಟು ಹೊಸ ಅನುಮಾನಗಳು, ಹೊಸ ಐಡಿಯಾಗಳು, ಹೊಸ ಥ್ರಿಲ್‌ಗಳು….ಒಟ್ಟಾರೆ ವೆಬ್‌ಸೈಟ್ ಹೊಸ ರೂಪ ಪಡೆಯುತ್ತಾ, ದಿನೇ ದಿನೇ ಚಂದಗೊಳ್ಳುತ್ತಾ ಮೂವರ ಹೃದಯವು ಕೆಲವೊಮ್ಮೆ ಚುಕ್ಕುಬುಕ್ಕು ಎಂದು ಬಡಿದುಕೊಳ್ಳಲಾರಂಭಿಸಿತು. ಇದು ಮುಗಿದು ಸ್ನೇಹಿತರಿಗೆ ತೋರಿಸುವುದು ಯಾವಾಗ ಎಂಬ ಉದ್ವೇಗ ಹೆಚ್ಚಾಗತೊಡಗಿತು.
ಚುಕ್ಕುಬುಕ್ಕು ಕನ್ನಡದ ಪುಸ್ತಕಾಸಕ್ತರೆಲ್ಲ ದಿನವೂ ಬಂದು ಹೋಗುವ ಜನಪ್ರಿಯ ಅಡ್ಡಾ ಆಗಬೇಕೆಂಬುದು ಈ ಮೂವರ ಆಕಾಂಕ್ಷೆ.
editor@chukkubukku.com
ಸಾಯಿ ಮಧುರಾ ರೆಸಿಡೆನ್ಸಿ
12ನೇ ಮೈನ್, ಜೆ.ಪಿ. ನಗರ 5ನೇ ಹಂತ
ಬೆಂಗಳೂರು – 560 078







Thank you sir. Avadhiya ella odugarige chukkubukku taanakke atmeeya swagatha
Best Wishes!
‘ಚುಕ್ಕು-ಬುಕ್ಕು’ವಿನ ಶ್ರುತಿ-ಲಯವೇ ಹಾಗಿದೆ… ತುಂಬಾ ಪ್ರಿಯವಾದ ಕೆಲಸ ಮಾಡಿದ್ದೀರಿ. ಶುಭವಾಗಲಿ ನೀವು ಮೂವರಿಗೂ…
“ಕನ್ನಡ ಪುಸ್ತಕ ಲೋಕದ ಜಗದಗಲ ಅನಾವರಣ -ಚುಕ್ಕು ಬುಕ್ಕು”,ಹಾರ್ದಿಕ ಅಭಿನಂದನೆಗಳು.
Chukkubukku railu!
ಯುವ ಉತ್ಸಾಹಿಗಳಿಗೆ ಒಳ್ಳೇದಾಗಲಿ!ಒಳ್ಳೇ ಉದ್ದೇಶ, ಒಳ್ಳೇದಾಗಿಯೇ ಆಗುತ್ತೆ.
ಕೆ.ವಿ. ತಿರುಮಲೇಶ್
ಧನ್ಯವಾದಗಳು!
mooru manassugalege abhinandanegalu.Nimma kanasu nanasagali.
Ranaganathan
tirumalesh sir, dhanyavaadagalu. nimma haaraikeyinda khushi aytu
gopal wajapeyi sir, samyukta, prakash, chukkubukku kadeyinda nimage krutagnategalu….
Nimma ashaya sartakavaagali…… all the best.
All the best.
ಅಭಿನಂದನೆಗಳು;ಹೊಸ ಪುಸ್ತಕಗಳನ್ನು ಪರಿಚಯಿಸುವ, ಅವುಗಳ ಬಗ್ಗೆ ಚರ್ಚಿಸುವ ಒಳ್ಳೆಯ ಉದ್ದೇಶ-ಆಶಯ ಹೊಂದಿರುವ ಹೊಸ ವೆಬ್ ತಾಣಕ್ಕೆ ಸ್ವಾಗತ. ಅವಧಿ, ಕೆಂಡಸಂಪಿಗೆಯ ಖಾಯಂ ಓದುಗಳಾಗಿರೋ ನನಗೆ ಅವುಗಳ ಜೊತಗೆ ಓದೋದಕ್ಕೆ, ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳೋದಕ್ಕೆ ಇನ್ನೊಂದು ಆಪ್ಶನ್…ಇದರ ಸೃಷ್ಟಿಕರ್ತರಿಗೆ ಥ್ಯಾಕ್ಯೂ ವೆರಿಮಚ್ 🙂
Thank u so much!
ತುಂಬ ಒಳ್ಳೆ ಐಡಿಯಾ, ನೀವು ಬರೆದಂಗೆ ಎಷ್ಟೋ ಪ್ರಕಟಿತ ಪುಸ್ತಕಗಳು ಓದುಗರ ಗಮನಕ್ಕೆ ಬರುವುದಿಲ್ಲ. ನಿಮ್ಮಿಂದಾದರೂ ಇನ್ನೊಂದಿಷ್ಟು ಪುಸ್ತಕಗಳು ಎಲ್ಲರ ಗಮನಕ್ಕೆ ಬಂದಂತಾಗುತ್ತದೆ. ತುಂಬ ದನ್ಯವಾದಗಳು.
ಫೇಸ್ ಬುಕ್ ನಲ್ಲಿ “ಮೊದಲು ಓದುಗನಾಗು” ಎನ್ನುವ ಪುಟಗಳಲ್ಲಿ ನಾವು ಓದಿದ ಒಂದಷ್ಟು ಹಳೆ ಹೊಸ ಪುಸ್ತಕಗಳ ಕುರಿತು ಮಾತಾಡುತ್ತ ಹಂಚಿಕೊಳ್ಳುತ್ತಲಿದ್ದ ನನ್ನಂತವರಿಗೆ ಈ ತಾಣ ಹೊಸ ಓದಿನ ಚಿಲುಮೆ..
ನಿಮ್ಮ ಪುಸ್ತಕ ಪ್ರೀತಿ ನಮ್ಮೊಡಗೂಡಿ ಬೆಳೆಯಲಿ ಸದಾ…
ಧನ್ಯವಾದ.
pustakagalannu jeevanada avibhajya angavagisuva prayatnakke yashassu sigali.
knn