‘ಅವಧಿ’ ಕಲಬುರಗಿ ಕಾವ್ಯಯಾನ

ಆಡಂಬರ, ಬಣ್ಣ, ಉಡುಪು ಇಲ್ಲದೆ ಕವಿತೆ ಮೂಡಲಿ : ಜೋಗಿ

ಆಡಂಬರವಿಲ್ಲದೆ, ಬಣ್ಣವಿಲ್ಲದೇ ಮತ್ತು ತೋರಿಕೆಯ ಉಡುಪಿಗಳಿಲ್ಲದೇ ಕವಿತೆಗಳು ಮೂಡುವಂತಾಗಲಿ. ಅಂತಹ ಕವಿತೆಗಳು ಕಲಬುರಗಿ ನೆಲದಿಂದ ರಚಿಸುವ ಗಟ್ಟಿತನವಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ಜೋಗಿ ಆಶಯ ವ್ಯಕ್ತಪಡಿಸಿದರು.

ಅಂತರ್ಜಾಲ ಮಾಧ್ಯಮ ‘ಅವಧಿ’ಯ ೧೫ ರ ಸಂಭ್ರಮ ನಿಮಿತ್ತ ಇಡೀ ರಾಜ್ಯದಾದ್ಯಂತ ನಡೆಯಲಿರುವ ಕಾವ್ಯಯಾನವನ್ನು ಕಲಬುರಗಿ ಜಿಲ್ಲೆಯಿಂದಲೇ ಶುರುವಾಗುವಂಥ ಆನ್‌ಲೈನಿನಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ‘ಕ್ಲಬ್‌ಹೌಸ್’ನ ‘ಅವಧಿ’ ಕವಿತೆ ಹಬ್ಬ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೂಪಕಗಳಿರುವ ಕವಿತೆಗಳು ಹೆಚ್ಚು ಜನರನ್ನು ತಟ್ಟುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರೆದದ್ದೆಲ್ಲವೂ ಕವಿತೆಯೆನ್ನುವಂತೆ ಹುಟ್ಟಿಕೊಳ್ಳುತ್ತಿರುವ ಕವಿತೆಗಳಲ್ಲಿ ರೂಪಕಾತ್ಮಕವಾಗಿರುವ ಕವಿತೆಗಳು ಮೂಡಲಿ. ಆ ಮೂಲಕ ರಾಜ್ಯದಾದ್ಯಂತ ನಡೆಯಲಿರುವ ಅವಧಿ ಕಾವ್ಯಯಾನಕ್ಕೆ ಕಲಬುರಗಿ ನೆಲದ ಕವಿತೆಗಳು ಇಂಬು ನೀಡಲಿ ಎಂದು ಹೇಳಿದರು.

ಅವಧಿ ಪ್ರಧಾನ ಸಂಪಾದಕ ಜಿ.ಎನ್.ಮೋಹನ ಅವರು ಪ್ರಾಸ್ತಾವಿಕ ಮಾತನಾಡಿ, ಕಲಬುರಗಿ ಎಂಬುದು ಸಾಂಸ್ಕೃತಿಕವಾಗಿ ಗಟ್ಟಿತನವಿರುವ ನೆಲ. ಇಲ್ಲಿ ಕವಿರಾಜಮಾರ್ಗ, ಕಾಗಿಣಾ ಸಂಸ್ಕೃತಿ ದಕ್ಕಿಸಿಕೊಂಡಿದ್ದು, ಯುವ ಕವಿಗಳು ಹೊಸ ಆಲೋಚನೆ ಮಾಡುತ್ತಿರುವ ಈ ಸಂದರ್ಭವನ್ನು ಮುಖಾಮುಖಿಯಾಗಿಸಿಕೊಳ್ಳಬೇಕಿದೆ. ಹೀಗಾಗಿ ಅವಧಿಯ ಈ ಯೋಚನೆಯು ಕಲಬುರಗಿ ಕಾವ್ಯಯಾನದಿಂದಲೇ ಆರಂಭಿಸುವ ಆಲೋಚನೆ ಉಂಟಾಗಿದೆ. ಇದನ್ನು ಎಲ್ಲ ಜಿಲ್ಲೆಗಳಲ್ಲೂ ಮುಂದುವರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಆಶಯ ನುಡಿಗಳನ್ನಾಡಿದರು.

ಕಾವ್ಯಯಾನದ ಚುಕ್ಕಾಣಿ ಹಿಡಿದಿದ್ದ ಸಂಧ್ಯಾ ಹೊನಗುಂಟಿಕರ್ ಅವರು ಕಾವ್ಯಯಾನವನ್ನು ಸೊಗಸಾಗಿ ನಿರೂಪಿಸಿದರು. ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ.ಬಸವರಾಜ ಕೋಡಗುಂಟಿ ಅಧ್ಯಕ್ಷತೆ ವಹಿಸಿ, ತುಂಬಾ ಸೊಗಸಾಗಿ ಮಾತನಾಡಿದರು. ಹಿರಿಯ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಆರಂಭದಲ್ಲಿ ಹಾಡು ಹಾಡಿದರು. ಕವಿಗಳಾದ ಶಂಕರಯ್ಯ ಘಂಟಿ, ಪ್ರೇಮಾ ಹೂಗಾರ, ವಿಜಯಭಾಸ್ಕರರೆಡ್ಡಿ, ರುಕ್ಮಿಣಿ ನಾಗಣ್ಣವರ್, ಡಿ.ಎಂ.ನದಾಫ್, ಜೋತ್ಸ್ನಾ ಹೇರೂರ್, ಸಂಗಮೇಶ ಸಜ್ಜನ್, ಕಾವ್ಯಶ್ರೀ ಮಹಾಗಾಂವಕರ್, ಸಿದ್ದ ಛಲವಾದಿ, ಭೀಮರಾಯ ಹೇಮನೂರ, ಮೆಹಬೂಬ ಬೀ,  ಸೇರಿದಂತೆ ಅನೇಕರು ಕವಿತೆಗಳನ್ನು ವಾಚಿಸಿದರು.

ಹಿರಿಯ ಲೇಖಕರಾದ ಮುರಳೀಧರ ಉಪಾಧ್ಯ ಹಿರಿಯಡ್ಕ, ಜಯಲಕ್ಷ್ಮೀ ಪಾಟೀಲ, ಸಿದ್ದರಾಮ ಹೊನ್ಕಲ್ ಸೇರಿದಂತೆ ಅನೇಕರು ಅನಿಸಿಕೆಗಳನ್ನು ಹೇಳಿದರು.

‍ಲೇಖಕರು Admin

July 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: