ರಾಘವೇಂದ್ರ ಹೆಗಡೇಕರ್
ಹನಮ್ಯಾ ದೌಡ್ ಬಾರಲೇ
ಬೇಗ ಬಾರೋ ಹನಮಂತು..
ನೀನು ಗೋಲಿಯಾಡಿದ ನೆಲ
ಇನ್ನು ಬಿರುಕಾಗಿಯೇ ಇದೆ.
ನೀರು ಹೊತ್ತು ಉಣಿಸಿದ್ದ
ತೆಂಗಿನ ಮರ ಕಾಯಿ ಹೊತ್ತಿದೆ.
ಅಡಿ ಓದಿದ ಶ್ಯಾಲಿಗೆ ನೋಡು
ಹೊಸ ಬೋರ್ಡು ಕೂತಿದೆ .
ಆದ ಹ್ಯಂಗ ಹೋಗಿ ಕೂತ್ಯಲೆ
ಐಸ್ ನ್ಯಾಗೆ ಮಲಗಿದ್ಯಲೇ..
ಗಟ್ಟಿಗಿತ್ತಿ ಅವ್ವನ ಹಾಲು
ಕೈ ತಟ್ಟಿದ ರೊಟ್ಟಿಯ ಕಸು.
ಬಪ್ಪರೆ ಗಂಡು ಮೆಟ್ಟಿನ
ನೆಲದವನಲೇ ನೀನು ಹನಮ್ಯಾ ..
ಬೇಗ ಬಾರೋ ಕಾಯಾಕ ಹತ್ತಿವಿ
ತಮ್ಯಾ,ದೌಡ್ ಬಾರೋ ಹನಮ್ಯಾ..






0 Comments