ಅಲ್ಲಿ ಸಮಾಧಿ ಸ್ವಚ್ಛ ಮಾಡಲು ಹಬ್ಬವಿದೆ..

ಶ್ರೀ ವಿದ್ಯಾ

ಇದರ ಹೆಸರು ಚಿಂಗ್ಮಿಂಗ್ ಫೆಸ್ಟಿವಲ್. (Qingming Festival) ಅಂದರೆ ಸಮಾಧಿಯನ್ನು ಸ್ವಚ್ಛ ಮಾಡುವ ಹಬ್ಬ. ಪೂರ್ವಜರ ಆರಾಧನೆಗೆಂದೇ ಇರುವ ಬಹುದೊಡ್ಡ ಹಬ್ಬಗಳಲ್ಲಿ ಇದು ಕೂಡ ಒಂದು. ಇನ್ನೊಂದು ಹಂಗ್ರಿ ಗೋಸ್ಟ್ ಫೆಸ್ಟಿವಲ್ (Hungry Ghost Festival) ಚಿಂಗ್ಮಿಂಗ್ ಹಬ್ಬದಂದು ಸ್ಮಶಾನಕ್ಕೆ ತೆರಳಿ ತಮ್ಮನ್ನು ಅಗಲಿದ ಪ್ರೀತಿ ಪಾತ್ರರ, ಬಂಧುಗಳ ಸಮಾಧಿಯನ್ನು ಗುಡಿಸಿ ಸಾರಿಸಿ, ಶುದ್ಧಗೊಳಿ ಸಲಾಗುತ್ತದೆ. ಬಳಿಕ ಸಮರ್ಪಣೆಯ ರೂಪದಲ್ಲಿ ಹೂವು ಹಣ್ಣು, ದೀಪ – ಆಗರಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸುವುದು ಈ ಹಬ್ಬದ ಸಂಪ್ರದಾಯ. ಜೊತೆಗೆ ಜಾಸ್ ಪೇಪರ್ ಗಳನ್ನು ಬೆಂಕಿಗೆ ಆಹುತಿ ಮಾಡಲಾಗುತ್ತದೆ.

ಈ ಹಬ್ಬದಂದೇ ಇವೆಲ್ಲಾ ಕೆಲಸವನ್ನು ಮಾಡಬೇಕೆನ್ನುವುದು ಚೀನಿಯರ ನಂಬಿಕೆ. ಸತ್ತ ನಂತರವೂ ಜೀವನವಿದ್ದು, ಉಳಿದ ದಿನಗಳಲ್ಲಿ ಈ ಕೆಲಸ ಕೈಗೆತ್ತಿಗೊಂಡರೆ ಪೂರ್ವಿಕರಿಗೆ ತೊಂದರೆ ನೀಡಿದಂತೆ ಎಂಬುದು ಇವರ ಅಭಿಮತ. ಈ ಹಬ್ಬಕ್ಕೂ ಒಂದು ಇತಿಹಾಸವಿದೆ. ಅದು 7 ನೇ ಶತಮಾನದ ಅವಧಿ. ಜೀ ಝಿಟ್ಯುಯಿ ಎಂಬಾತ ಜಿನ್ ರಾಜ ಚೋಂಗ್’ರ್ಗೆಯ ಆಡಳಿತದಲ್ಲಿ ಸೇವೆ ಸಲ್ಲಿಸಿದ ನಿಷ್ಟಾವಂತ ಅಧಿಕಾರಿ ಹಾಗೂ ಕವಿಯೂ ಆಗಿದ್ದರು. ಒಂದು ಕಾಲದಲ್ಲಿ ರಾಜನ ಪ್ರಾಣವನ್ನೇ ಉಳಿಸಲು ಕಾರಣನಾಗಿದ್ದ ಈ ಅಧಿಕಾರಿ, ಪ್ರತಿಫಲವಾಗಿ ರಾಜನಿಂದ ಯಾವುದೇ ಉಡುಗೊರೆ ಸ್ವೀಕರಿಸಲು ನಿರಾಕರಿಸಿದ್ದರು.

ಈ ಸಂಕೋಚದಿಂದ ತನ್ನ ಮುದಿ ತಾಯಿಯ ಜೊತೆ ಒಂದು ಪರ್ವತವೊಂದರ ಗುಹೆಯಲ್ಲಿ ಜೀವಿಸತೊಡಗಿದರು. ಆದರೆ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದ ಅಧಿಕಾರಿಗೆ ಗೌರವ ಸಲ್ಲಿಸಲೇಬೇಕೆಂಬ ಪಣತೊಟ್ಟ ರಾಜ, ಇಡೀ ಅರಣ್ಯಕ್ಕೆ ಬೆಂಕಿ ಇಡುವಂತೆ ಆದೇಶಿಸಿದರು. ಹಾಗಾದರೂ ಮತ್ತೆ ರಾಜ್ಯಕ್ಕೆ ಬರುವರೆಂದೇ ತಿಳಿದಿದ್ದ ರಾಜನ ನಂಬಿಕೆ ಹುಸಿಯಾಗಿತ್ತು. ಬೆಂಕಿಗೆ ಸಜೀವ ದಹನಗೊಂಡ ಅಧಿಕಾರಿ ಹಾಗೂ ಆತನ ತಾಯಿಯ ನೆನಪಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬದ ಹಿಂದಿನ ದಿನ ಕೋಲ್ಡ್ ಅಥವಾ ಹನ್ಸಿ ಫೆಸ್ಟಿವಲ್ ನಡೆಯುತ್ತದೆ. ಬೆಂಕಿಯನ್ನು ದುರ್ಬಳಕೆ ಮಾಡಿದ ಹಿನ್ನಲೆಯಲ್ಲಿ ಅಗ್ನಿ ಸ್ಪರ್ಶವಿಲ್ಲದ ಆಹಾರವನ್ನು ಸೇವಿಸಬೇಕೆಂಬುದು ಹಬ್ಬದ ನಿಯಮವಾಗಿದೆ. ಇದು ಚೀನಿಯರ ಸಾಂಪ್ರದಾಯಿಕ ಹಬ್ಬ. ವರ್ಷದ ಏಪ್ರಿಲ್ ತಿಂಗಳಿನ ನಾಲ್ಕನೇ ಅಥವಾ ಐದನೇ ತಾರೀಕಿಗೆ ನೆರವೇರುತ್ತದೆ. ಈ ಸಂದರ್ಭದಲ್ಲಿ ಹವಾಮಾನವು ಪ್ರಕಾಶಮಾನವಾಗಿರುತ್ತದೆ. ಉತ್ಸವದ ನಂತರ ತಾಪಮಾನವು ಏರಿಕೆಯಾಗಲು ಪ್ರಾರಂಭವಾಗುತ್ತದೆ ಮತ್ತು ಮಳೆ ಹೆಚ್ಚಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ನೇಗಿಲು ಮತ್ತು ಬಿತ್ತ ನೆಗೆ ಉತ್ತಮ ಸಮಯವೆಂದು ಬಣ್ಣಿಸಲಾಗುತ್ತದೆ.

ಈ ಹಬ್ಬವು ಚೀನಾ, ವಿಯೆಟ್ನಾಮ್, ದಕ್ಷಿಣ ಕೊರಿಯಾ, ರ್ಯೂಕಿ ಹಾಗೂ ಚೀನೀಯರು ನೆಲೆಸಿರುವ ಎಲ್ಲ ದೇಶಗಳಲ್ಲೂ ನಡೆಸಲಾಗುತ್ತದೆ. ಪ್ರಾರಂಭದಲ್ಲಿ ಧಾರ್ಮಿಕ ಆಚರಣೆಗಳು ನಡೆದರೆ, ನಂತರದ ಸಮಯದಲ್ಲಿ ಕುಟುಂಬ ಸದಸ್ಯರು ಒಟ್ಟುಗೂಡಿ ಪ್ರಯಾಣ, ಗಾಳಿಪಟಗಳ ಹಾರಾಟ, ಮಕ್ಕಳ ಜೊತೆ ಆಟ, ವಸಂತ ಋತುವಿನಲ್ಲಿ ಹಚ್ಚ ಹಸುರಾಗಿ ಬೆಳೆಯುವ ವಿಲೋ ಗಿಡಗಳನ್ನು ಸಮಾಧಿ ಬಳಿ ಹಾಗೂ ಇತರೆಡೆ ನೆಡುವುದು ಈ ಹಬ್ಬದ ವಿಶೇಷತೆ..

‍ಲೇಖಕರು Avadhi

April 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: