ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ರಂಗವಲ್ಲಿಯ ಬಣ್ಣ..

ದೀಪಗನಸು

ಸಹನಾ ಹೆಗಡೆ

ನಿನ್ನ ಕಣ್ಣಂಚಿನ ಮಿಂಚು

ಹೊತ್ತಿಸಿದ ಕಿಡಿ

ಮುಖ ಸವರಿ ಮೈದಡವಿ

ಸರ್ರನೇ ಸರಿದು

ಎದೆಯ ಇಳಿಜಾರಿನಲಿ

ಹಬ್ಬಿಸಿದೆ ಬೆಂಕಿ

ಜೀವ ಕಣಕಣದಲ್ಲೂ ಈಗ

ಬಿಸಿಯುಸಿರ ತಾಪ

ಎದೆಯ ಬದುವಿನ ತುಂಬ

ಸಾಲುದೀಪ

ನರನಾಡಿಗಳಲಿ ಸಿಡಿವ

ಪಟಾಕಿಗೆ ತುರುಸು

ಕಿಡಿಗೇಡಿ ಬಾಣ ಬಿರುಸು

ಭಾವಭಿತ್ತಿಯ ಮೇಲೆ

ಮಿಣುಕು ಹಣತೆಯನು ನೀನಿಟ್ಟೆ

ಮಾಡಿ ನಕ್ಷತ್ರಬುಟ್ಟಿಯದನೆ

ಬಾಗಿಲಿಗೆ ನಾ ತೂಗಿಬಿಟ್ಟೆ

ಎಲ್ಲಿ ಕಾಲಿಟ್ಟರೂ ಅಲ್ಲಿ

ರಂಗವಲ್ಲಿಯ ಬಣ್ಣ

ತಾಕಿದರೂ ತಾಕದಂತೆ ನೀ

ನಡೆದುಬಿಟ್ಟೆ

ಮೈಮನದ ತುಂಬೆಲ್ಲ ಬೆಳಕಿನದೇ ಹಬ್ಬ

ಮೊರೆಯುತಿದೆ ಕಿವಿತುಂಬ ಹಾಡುಗಬ್ಬ

ಕುಳಿತಲ್ಲಿ ನಿಂತಲ್ಲಿ ದೀಪಾವಳಿಯ ಕನಸು

ಇರುವಲ್ಲೆ ಬೆರೆತವು ಆರ್ದ್ರ ಮನಸು

‍ಲೇಖಕರು avadhi

27 October, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading