ಅಲ್ಪಾಯುಷ್ಯದ ಮಹಾನ್ ಸಾಧಕರು-ಸಂಗೀತಗಾರರು ಆಡಿಯೋ ಪುಸ್ತಕ ಬಿಡುಗಡೆ

ಕೃತ್ತಿಕಾ ಶ್ರೀನಿವಾಸನ್

ನಮ್ಮ ಆಡಿಯೋ ಪುಸ್ತಕ, ‘ಅಲ್ಪಾಯುಷ್ಯದ ಮಹಾನ್ ಸಾಧಕರು-ಸಂಗೀತಗಾರರು’ ಬಿಡುಗಡೆಯಾಗಿದೆ. ಇದೇ ಹೆಸರಿನ ಪುಸ್ತಕ 2015 ರಲ್ಲಿ, ಬಿಡುಗಡೆಯಾಗಿದ್ದು, ಬಹಳ ಒಳ್ಳೆಯ ಪ್ರತಿಕ್ರಿಯೆ ಗಳಿಸಿತು. ಇದೀಗ, ಈ ಪುಸ್ತಕ ಆಡಿಯೋ ರೂಪದಲ್ಲಿ ಲಭ್ಯವಿದ್ದು, ಸಾಧಕರ ಬಗ್ಗೆ ಕೇಳುವುದಲ್ಲದೆ, ಅವರ ಜನಪ್ರಿಯ ರಚನೆಗಳ ಪ್ರಸ್ತುತಿಯನ್ನೂ ಕೇಳಬಹುದು.

ಈ ಆಡಿಯೋ ಪುಸ್ತಕದಲ್ಲಿ ನಾಡಿನ ಹೆಸರಾಂತ ಕಲಾವಿದರು ಸಂಗೀತ ಪ್ರಸ್ತುತಿಯಲ್ಲಿ ಪಾಲ್ಗೊಂಡಿದ್ದಾರೆ. ಬದುಕಿದ್ದು ಅಲ್ಪ ಕಾಲ ಆದರೆ ಸಂಗೀತದ ಸಾಧನೆಯಲ್ಲಿ ಸಾಧಿಸಿದ್ದು ಅಪಾರ ! ಅಂತಹ ಸಂಗೀತದ ಹಲವು ಮುತ್ತುರತ್ನಗಳನ್ನು ಹೆಕ್ಕಿ ತಂದು ಸಂಗೀತದೊಡನೆ ಪರಿಚಯಿಸುತ್ತಿರುವ ವಿನೂತನ ಆಡಿಯೋ ಪುಸ್ತಕ ‘ಅಲ್ಪಾಯುಷಿ ಮಹಾನ್ ಸಾಧಕರು – ಸಂಗೀತಗಾರರು’ ಈಗ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಬಿಡುಗಡೆಯಾಗಿದೆ.

ಭೇಟಿ ಕೊಡಿ:
ಭಾರತದಲ್ಲಿ: https://mylang.in/products/alpayushi-mahan-sadhakaru-audiobook-inr
ಹೊರದೇಶದಲ್ಲಿ: https://mylangbooks.com/products/alpayushi-mahan-sadhakaru-audiobook-usd

ಧ್ವನಿ ಪುಸ್ತಕವನ್ನು ಕೊಂಡು, ಕೇಳಿ, ಆನಂದಿಸಿರಿ !!

ಲೇಖಕಿಯರು : ಪ್ರೊಫೆಸರ್ ಗೀತಾ ಶ್ರೀನಿವಾಸನ್ ಹಾಗು ಕೃತ್ತಿಕಾ ಶ್ರೀನಿವಾಸನ್

ಓದಿದವರು: ಶ್ರೀಮತಿ ರಮಾ ಹಿರೇಮಠ (ನಿವೃತ್ತ ಕಾರ್ಯನಿರ್ವಾಹಕರು A.I.R.)

ಆಡಿಯೋ ಪುಸ್ತಕದ ಅವಧಿ : 4 ಗಂಟೆ 52 ನಿಮಿಷ

ನಿಮಗಿದು ತಿಳಿದಿತ್ತೆ?

೧.ಮಹಾರಾಜ ಸ್ವಾತಿ ತಿರುನಾಳ್ ರವರು ತಮ್ಮ ವರ್ಣಗಳು, ಕೃತಿಗಳು, ಪದಂ, ಜಾವಳಿ, ತಿಲ್ಲಾನಗಳ ಅಮೂಲ್ಯ ಭಂಡಾರಕ್ಕೆ ಪ್ರಸಿದ್ಧರಾಗಿದ್ದಲ್ಲದೆ ದಕ್ಷಿಣ ಭಾರತದ ಪ್ರಪ್ರಥಮ ಖಗೋಳ ಸಮೀಕ್ಷಾ ಕೇಂದ್ರಕ್ಕೆ ಕೂಡ ಕಾರಣಪುರುಷರಾಗಿದ್ದಾರೆ !!

೨. ಅಮೇರಿಕದ ಜಾನ್.ಬಿ.ಹಿಗ್ಗಿನ್ಸ್ ಭಾಗವತರು ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಸರಸ್ವತಿ ಪೂಜೆಯನ್ನು ಮಾಡುವ ಪದ್ಧತಿಯನ್ನು ಪ್ರಾರಂಭಿಸಿದರು !!

೩.ಮದುರೈ ಪುಶ್ಪವನಮ್ ಅಯ್ಯರ್ ಅವರು ಅಂದೂ ತಮ್ಮ ಮೋಹಕ ಸಂಗೀತದಿಂದ ಎಲ್ಲರಿಗೂ ಪ್ರಿಯರಾಗಿದ್ದು, ಇಂದಿನ ಪೀಳಿಗೆಯ ಸಂಗೀತಗಾರರಿಗೂ ಪ್ರಿಯರಾಗಿದ್ದಾರೆ, ಏಕೆಂದರೆ ಇವರಿಂದಲೇ ಸಂಗೀತಗಾರರಿಗೆ ಕೊಂಚ ಒಳ್ಳೆಯ ಸಂಭಾವನೆ ದೊರೆಯಲು ಪ್ರಾರಂಭವಾಗಿದ್ದುದು !

೪.ಹರಿದಾಸಿ ಅಂಬಾಬಾಯಿಯವರ ತವರಿನ ಕುಟುಂಬದಲ್ಲಿ ಎಲ್ಲರೂ ಹರಿದಾಸರಾಗಿದ್ದು, ತಮ್ಮ ಅಂಕಿತಗಳೊಡನೆ ಕೃತಿಗಳನ್ನು ರಚಿಸಿದ್ದರು !

ಬನ್ನಿ, ಇಂತಹ ಮಹಾನ್ ಸಂಗೀತಗಾರರ ಬಗ್ಗೆ ಮತ್ತಷ್ಟು ರೋಚಕ ಕಥೆಗಳು, ಅವರು ನಡೆದ ಹಾದಿ, ಅವರು ಎದುರಿಸಿದ ಕಷ್ಟ ಕಾರ್ಪಣ್ಯಗಳು, ಅಲ್ಪಾಯುಷ್ಯದಲ್ಲೇ ಅವರು ಮಾಡಿದ ಸಾಧನೆಗಳ ಬಗ್ಗೆ ತಿಳಿಯೋಣ, ನಮ್ಮ ಸಾಧನೆಗಳಿಗೂ ಸ್ಪೂರ್ತಿ ಪಡೆಯೋಣ! ಹಾಗೇ ಅವರ ಬಗ್ಗೆ ತಿಳಿದುಕೊಳ್ಳುವುದಲ್ಲದೆ ಅವರ ಕೃತಿಗಳ ಮಾಧುರ್ಯವನ್ನೂ ಸವಿಯೋಣ!

ಆಡಿಯೋಪುಸ್ತಕದಲ್ಲಿ ಪರಿಚಯಿಸಲಾದ ಸಾಧಕರು:

  • ಅಕ್ಕಮಹಾದೇವಿ
  • ಗೋಪಾಲನಾಯಕ
  • ಮೈಸೂರು ಅರಸರು ಮತ್ತು ಇಮ್ಮಡಿ ಕಂಠೀರವ ನರಸರಾಜ ಒಡೆಯರ್
  • ಗೋಪಾಲದಾಸರು
  • ಮೋಹನದಾಸರು
  • ಪಲ್ಲವಿ ದೊರೈಸ್ವಾಮಿ ಅಯ್ಯರ್
  • ಸರ್ಪಭೂಷಣ ಶಿವಯೋಗಿ
  • ವಡಿವೇಲು
  • ಮಹಾರಾಜ ಸ್ವಾತಿ ತಿರುನಾಳ್
  • ಕರೂರ್ ಚಿನ್ನ ದೇವುಡು
  • ಅಣ್ಣಾಮಲೈ ರೆಡ್ಡಿಯಾರ್
  • ಶರಭ ಶಾಸ್ತ್ರಿ ಮತ್ತು ಬಿ ಎನ್ ಸುರೇಶ್
  • ತಿರುಪತಿ ನಾರಾಯಣಸ್ವಾಮಿ ನಾಯ್ಡು
  • ಅಂಬಾಬಾಯಿ
  • ಬೆಳೆಗೆರೆ ಜಾನಕಮ್ಮ
  • ಜಿ ಹರಿಶಂಕರ್
  • ಸಂಗೀತಗಾರರು
  • “ಪಲ್ಲವಿ ಗಾಯನದ ರಾಜ” ಕೊನೇರಿರಾಜಪುರಂ ವಿದ್ಯಾನಾಥ ಐಯ್ಯರ್
  • ಸಂಗೀತ ಸಾಮ್ರಾಟ್ ಮಧುರೈ ಪುಷ್ಪವನಂ
  • ಬಹುಮುಖ ಪ್ರತಿಭೆ ಎನ್.ಸಿ.ವಸಂತಕೋಕಿಲಂ
  • ಜಾನ್ ಬಿ ಹಿಗ್ಗಿನ್ಸ್ ಭಾಗವತರ್
  • “ಮ್ಯಾಂಡೋಲಿನ್ ಮಾಂತ್ರಿಕ” ಮ್ಯಾಂಡೋಲಿನ್ ಯು ಶ್ರೀನಿವಾಸ
  • “ಕೃಷ್ಣಪ್ರಿಯೆ” ರಂಜನಿ ಹೆಬ್ಬಾರ್

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: