'ಅಲೆಸೋಕದ ಮರಳಿನ ಕಣಗಳಂತೆ …' – ರೋಹಿಣಿ ಸತ್ಯ

ವಿಸ್ಮೃತಿ

ರೋಹಿಣಿ ಸತ್ಯ


ನಮ್ಮ ಮಿಲನ ಕನಸಾಗಿ ಕಂಡಾಗ ಹೊರಬಿದ್ದ ನಿಟ್ಟುಸಿರು
ಉಛ್ವಾಸದಲ್ಲಿ ಒಳಸೇರಿ ನಿಶ್ವಾಸದಲ್ಲಿ ಹೊರಬರುತ್ತಿದೆ
ಉಸಿರೇ ನಿನ್ನ ರೂಪು ಆದ ಕಾರಣ
ಕಣ್ಣಮುಂದೆ ಕ್ಷಣಕಾಲ ನಿಲ್ಲಿಸಹೊರಟರೇ
ಜೀವ ಅಂಗೈಯಲ್ಲಿ ಬಂದು ನಿಲ್ಲುತ್ತಿದೆ
ಅಲೆಸೋಕದ ಮರಳಿನ ಕಣಗಳಂತೆ ನಿಸ್ತೇಜವಾಗಿದೆ ಮನ
ನೆಲೆಕಾಣದ ನಾವೆಯಂತೆ ಅನಾಥವಾಗಿದೆ ಜೀವನ
ನೋವಿನಿಂದ ಸುಕ್ಕುಗಟ್ಟಿದ ವದನಕೆ
ಬಲವಂತವಾಗಿ ನಗುವಿನ ಲೇಪನವದ್ದಿದರೇ
ಕನ್ನಡಿಯಲ್ಲಿ ಕಾಣುವ ರೂಪ ಸುಂದರವಾಗಿ ಕಂಡರೂ
ಅಂತರಂಗದಲ್ಲಿ ಅದೇ ಕಲಾವಿಹೀನ ವದನ
ಭಾವನೆಗಳು ಆಸೆಯ ಜಲಪಾತದ ಮೋಡಿಯಲ್ಲಿ
ನಿರಾಶೆಯ ಬಂಡೆಗಳಿಗಪ್ಪಳಿಸಿ ಛಿದ್ರವಾಗುತ್ತಿರೇ
ನಿನ್ನ ಸಾಂತ್ವನವು ಪುಟ್ಟ ದೋಣಿಯಾಗಿ
ದಡ ಸೇರಿಸುವುದೆಂಬ ನಂಬಿಕೆಯು ನಿರಾಧಾರವಾದಾಗ
ಚಿತ್ರ ಸ್ಪಷ್ಟವಾಗಿದೆ –
ಕಲ್ಪನೆಯ ಕ್ಷಿತಿಜದ ಅಂಚುಗಳ ಸೇರಿಸುವುದು ದುಸ್ತರ
ನೈಜಸ್ಥಿತಿಯ ವಸ್ತುಚಿತ್ರಣ ಹೆಚ್ಚಿಸಿದೆ ನಡುವಿನ ಅಂತರ
ಆಗ…..
ಕನಸಾಗಿ ಕಾಡುವ ನಿನ್ನ ಸ್ಮೃತಿಗಿಂತಲೂ
ವರವಾಗಿ ವರಿಸುವ ವಿಸ್ಮೃತಿ ಮೇಲೆನಿಸುತ್ತದೆ
 

‍ಲೇಖಕರು G

June 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. noorullathyamagondlu

    ಕನಸಾಗಿ ಕಾಡುವ ಸ್ಮೃತಿಯೇ ಕವಿತೆಯನ್ನು ಜೀವಂತವಾಗಿಸಿದೆ.ರೋಹಿಣಿಯವರೆ.ಚೆನ್ನಾಗಿದೆ.

    ಪ್ರತಿಕ್ರಿಯೆ
  2. ವೀರಣ್ಣ ಮಂಠಾಳಕರ್

    ಅದ್ಭುತವಾದ ಕಾವ್ಯ ರಚನೆ ಸುಂದರವಾಗಿ ಮೂಡಿ ಬಂದಿದೆ. ಕಾವ್ಯದ ಕುಸುರಿತನದಲ್ಲಿ ಜೀವಂತಿಕೆಯ ಚಿತ್ರಣವನ್ನು ಹಿಡಿದಿಟ್ಟಿರುವುದು ಇಷ್ಟವಾಯಿತು. ಭಾವಸ್ಫೂರ್ತಿಯ ಪದಗಳು ಮತ್ತೆ ಮತ್ತೆ ಓದಬೇಕೆನ್ನಿಸುವಂಥವು. ಇದೊಂದು ಶ್ರೇಷ್ಟ ಕವಿತೆಗಳ¯ಲ್ಲೊಂದು ಎಂದರೆ ತಪ್ಪಾಗಲಿಕಿಲ್ಲ.

    ಪ್ರತಿಕ್ರಿಯೆ
  3. vasudev

    “ಕನಸಾಗಿ ಕಾಡುವ ನಿನ್ನ ಸ್ಮೃತಿಗಿಂತಲೂ
    ವರವಾಗಿ ವರಿಸುವ ವಿಸ್ಮೃತಿ ಮೇಲೆನಿಸುತ್ತದೆ” ಚೆನ್ನಾಗಿದೆ. liked these lines.Kudos

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ; ಪದ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: