ಎಲ್ಲ ಬಗೆಯ ಹಾನಿಕಾರಕ ಉತ್ಪನ್ನಗಳ ನಿಷೇದವೇಕಿಲ್ಲ?

– ವೆಂಕಟೇಶ ಕೆ ಜನಾದ್ರಿ

ಇತ್ತೀಚಿಗೆ ಮ್ಯಾಗಿ ನೂಡಲ್ಸ್ ಆಹಾರ ಉತ್ಪನ್ನದ ಕುರಿತು, ಅದರ ಬಳಕೆಯಿಂದ ಆರೋಗ್ಯದ ಮೇಲುಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ವ್ಯಾಪಕವಾದ ವಿಶ್ಲೇಷಣೆಯನ್ನು ಮಾಡಿ, ಮಾಧ್ಯಮಗಳ ಮೂಲಕ ಪ್ರಚುರಪಡಿಸಿ ತಕ್ಷಣಕ್ಕೆ ಅವಶ್ಯಕ ಕ್ರಮ ಕೈಕೊಂಡು ಮ್ಯಾಗಿ ನೂಡಲ್ಸ್ನ್ನು ನಿಷೇಧಿಸಿದ್ದು ಒಳ್ಳೆಯ ಬೆಳವಣಿಗೆ.
ಇದಕ್ಕಿಂತಲೂ ಹಾನಿಕಾರಕವಾದ ಮಧ್ಯಪಾನ, ಮಾದಕ ವಸ್ತುಗಳು ಮತ್ತು ಧೂಮಪಾನಕ್ಕೆ ಸಂಬಂಧಿಸಿದ ಉತ್ಪನ್ನಗಳ ಸೇವನೆಗೆ ಸಂಬಂಧಿಸಿದಂತೆ ಯಾಕೆ ಇಂಥ ಕಠಿಣ ನಿಧರ್ಾರ ಕೈಕೊಳ್ಳಬಹುದು? ಈ ಉತ್ಪನ್ನಗಳಂತೂ ವ್ಯಸನಿಗಳ ಆರೋಗ್ಯದ ಮೇಲೆ ತೀವ್ರತರವಾದ ದುಷ್ಪರಿಣಾಮ ಬೀರಬಲ್ಲಂಥವು ತಾನೆ? ಇಂಥ ಹಾನಿಕಾರಕ ಮತ್ತು ಅನಾರೋಗ್ಯಕರವಷ್ಟೇ ಏಕೆ ಜೀವಕ್ಕೆ ಮಾರಕವಾಗುವಂಥ ಉತ್ಪನ್ನಗಳನ್ನು ಬೇಕಾಬಿಟ್ಟಿ ತಯಾರಿಸುತ್ತಾರೆ, ಸಿಕ್ಕಾಪಟ್ಟೆ ಪ್ರಚಾರವನ್ನು ಮಾಡುತ್ತಾರೆ. ಹೆಸರಿಗೆ ಮಾತ್ರ ಸಣ್ಣ ಅಕ್ಷರಗಳಲ್ಲಿ ಶಾಸನಬದ್ದ ಎಚ್ಚರಿಕೆಯನ್ನು ಮುದ್ರಿಸುತ್ತಾರೆ. ಇದೆಂಥ ವಿಪರ್ಯಾಸ!!

ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ ಇಂಥ ಉತ್ಪನ್ನಗಳನ್ನೇಕೆ ಉತ್ಪಾದಿಸಬೇಕು? ಏಕೆ ಜಾಹೀರು ಪಡಿಸಬೇಕು? ಹೆಸರಿಗೆ ಮಾತ್ರ ಎಚ್ಚರಿಕೆಯನ್ನು ಮುದ್ರಿಸಿಬಿಟ್ಟರೆ ಸಂಬಂಧಿಸಿದವರ ಹೊಣೆಗಾರಿಕೆ ಮುಗಿಯಿತೇ? ನೋ, ಇಂಥ ಮಾರಕ ಮಾದಕ ಉತ್ಪನ್ನಗಳನ್ನೂ ಸಹ ಕೂಡಲೇ ನಿಷೇದಿಸಿ ಕ್ರಮ ಕೈಕೊಂಡರೆ ಎಷ್ಟೋ ಕುಟುಂಬಗಳು ನೆಮ್ಮದಿಯಿಂದ ಉಸಿರಾಡುತ್ತವೆ. ಸಂಬಂಧಿಸಿದವರಿಗೆ ಈ ವಿಚಾರ ತಲುಪಬಹುದೆಂಬುದೊಂದು ಸಣ್ಣ ಆಶಯ ನನ್ನದು.
 

‍ಲೇಖಕರು G

June 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: