ಮನಸ್ಸಿಗೊಂದು ಅರ್ಥ ಕೊಡು
ಸುಚಿತ್ರಾ ಕೆ ಮಂಗಳೂರು
ನಾನು ನನ್ನದೆಲ್ಲ ಎನ್ನುವ
ನನ್ನದಲ್ಲದ ಈ
ಮನಸ್ಸಿಗೊಂದು ಅರ್ಥ ಕೊಡು…
ಆಂತರ್ಯದ ಹಿಮಗಡ್ಡೆ ಕರಗಿ
ಕಣ್ಣಾಳಗಳಲ್ಲಿ ತುಂಬಿ ತುಳುಕುವ ಗಂಗಾ ಜಲದಂತೆ
ಯಾವ ಉರಿ ಶಾಖ ತಗಲಿಸಿದರೂ
ಮತ್ತಷ್ಟು ಹೆಪ್ಪುಗಟ್ಟುವ
ಭಾವನೆಯ ಈ
ಮನಸ್ಸಿಗೊಂದು ಅರ್ಥ ಕೊಡು….
ಹಂಚಿಕೆಯಾಗದ ವಿಷಯಗಳ
ಮುತ್ತಿನ ಹಾರದಂತೆ ಸಾಲಾಗಿ ಪೋಣಿಸಿ
ಉದುರದಂತೆ ಜೋಪಾನ ಮಾಡಲು ಹೆಣಗುವ
ಈ ಮನಸ್ಸಿಗೊಂದು ಅರ್ಥ ಕೊಡು….
ಅವಿತು ಕುಳಿತ ಮಾತುಗಳು
ಹೆಬ್ಬಂಡೆಗಳಾಗಿವೆ…
ಅದ ಒಡೆಯಲೂ ಆಗದೆ,ಭಾರ ಹೊರಲು ಆಗದೆ
ಚಡಪಡಿಸಿವೆ..
ಅದು ಸಿಡಿದು ಚೂರಾಗುವ
ಮೊದಲೇ ಈ
ಮನಸ್ಸಿಗೊಂದು ಅರ್ಥ ಕೊಡು…
ಮನಸ್ಸಿನ ತೊಳಲಾಟವು
ವಿಷ ಸರ್ಪಿಣಿಯಂತೆ ಬುಸುಗುಡುತ್ತಿದೆ
ಅದು ವಿಷ ಕಾರಿ ಉಗುಳುವ
ಮೊದಲೇ ಈ
ಮನಸ್ಸಿಗೊಂದು ಅರ್ಥ ಕೊಡು….
ಅರ್ಥವಿಲ್ಲದ ಈ
ಮನಸ್ಸಿಗೊಂದು ಅರ್ಥಕೊಡು……







nice..very nice..
ತುಂಬಾ ಚೆನ್ನಾಗಿದೆ
Nice………
ತುಂಬಾ ಚೆನ್ನಾಗಿದೆ.
gud kavana suchitra… keep on writing….
nice……….suchi…
uttama prayatna… keep on writing.
thank u alllll.. thank u so much……
ಬಹಳ ದಿನದ ನಂತರ ಒಂದು ಒಳ್ಳೆಯ ಕವಿತೆ ಓದಿದ ಅನುಭವವಾಯಿತು.
-ಪರಶುರಾಮ ಬೋನೇರ
kavithe manasina tallanagalige arthavannu hudukalu horatiddu uttamavada salugalinda kudide.
nice kavithe