ಕಾಲದಲಿ ಅಡಗಿ ಕುಂತವಳು
ಚೈತ್ರ ಎನ್
ಅದೋ ಮಧು ಮಗಳ ಮೆರವಣಿಗೆ;
ಕಾಣಿಸಲಿಲ್ಲವಲ್ಲ ಆವಳು
ಆರೆರೆ! ಇದು ಕಾನೂರು ಅಲ್ಲವೇ!
ಇಲ್ಲೂ ಕಾಣುತ್ತಿಲ್ಲ ಅವಳು
ಶ್ರೀ ರಾಮಯಣದರ್ಶನಂ ನಲ್ಲೂ ದರ್ಶನವಾಗಲಿಲ್ಲ ಅವಳು
ಜಿಂಕೆಯ ಹಿಂಬಾಲಿಸಿದೆ ಮನ!

ಈ ಬಾರಿ ಹೊರಟಿರೋದು ಸಖೀ ಗೀತೆಯೊಳಗೆ
ದಕ್ಕುತ್ತಿಲ್ಲ ಅವಳು
ಹುಚ್ಚುಕೋಡಿ ಹುಡುಗಿಯ ಕೇಳಿದೆ ಮಾತು ಮರೆತ್ತಿದ್ದಳವಳು
ಮೂಡಲ ಮನೆಯ ಬೆಳಗು ಕೂಡ ಅವಳ ಸುಳಿವು ನೀಡುತ್ತಿಲ್ಲ
ಜಿಂಕೆಯ ಹಿಂಬಾಲಿಸಿದೆ ಮನ!
ಚೆನ್ನವೀರಕಣವಿಯವರ ದೀಪದಾರಿಗೂ ತಿಳಿದಿಲ್ಲ
ಬಳೆಗಾರ ಚೆನ್ನಯ್ಯನಿಗೂ ಗೊತ್ತಿಲ್ಲವಂತೆ!
ಮನೆಗೆ ಬಂದ ರಾಯರಿಗೂ ಅರಿವಾಗಲಿಲ್ಲ ವಂತೆ
ಜಿಂಕೆಯ ಹಿಂಬಾಲಿಸಿದೆ ಮನ!
ಲೇಖನಿ ಸುಮ್ಮನೆ ಜಾರುತಿತ್ತು; ನಾಲ್ಕು ಸಾಲುಗಳಲ್ಲೂ
ಶ್ಯಾನುಭೋಗರ ಮಗಳು ಹುಚ್ಚುಕೋಡಿ ಹುಡುಗಿ ಕಣ್ಣರಳಿಸಿದರು
ಕನ್ನಡಿಯ ಬಿಂಬವಲ್ಲವೇ; ಅರೆ ಅಲ್ಲೇ ಇದ್ದಾಳೆ ಅವಳು
ರೂಪಾಂತರಗೊಂಡು ಆಧುನಿಕ ಹೆಣ್ಣಿನ ಕಲ್ಪನೆಯಾದವಳು






Nice!!!