ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಿವು

ಎಚ್ ಆರ್ ರಮೇಶ 

ಆಗುತ್ತಿರುವಾಗ ಇರುವುದೇ ಅದೃಷ್ಟ
(ನಿಜ, ಅದೃಷ್ಟವೆನ್ನುವುದು ಲೋಕದ ಭ್ರಮೆ);
ಆಗುತ್ತಿರುವಾಗ ಪ್ರಕಟವಾಗುವುದರೊಳಗೆ ಸೇರಿಕೊಳ್ಳುವುದು
ಸತ್ಯ ಮತ್ತು ಸೌಂದರ್ಯಗಳಲಿ ಮೀಯುವುದೇ ಆಗಿದೆ,
ಆಗುವಾಗ ಆತಂಕವಿಲ್ಲ, ಏಕೆಂದರೆ ಅಲ್ಲಿ ಉದ್ದೇಶವೇ ಇಲ್ಲ,
ಮತ್ತು ಗುರಿಯೆನ್ನುವುದೇ ಇಲ್ಲ;
ಕಾರಣ ಕೇಳಿದರೆ ಆಗುತ್ತಿರುವುದು ಆಗಿಯೇ ಬಿಟ್ಟಿರುತ್ತದೆ ಅಷ್ಟರೊಳಗೆ;
ಲೋಕ ಪೂರ್ವ ಕಲ್ಪಿತಗಳಿಂದ ತುಂಬಿ ಹೋಗಿದೆ,
ಇಲ್ಲಿಯೇ ಒಂದು ಪ್ರಶ್ನೆಗೆ ಉತ್ತರ: ಆಗುತ್ತಿರುವ ತೀವ್ರತೆಗೆ ಅಥವಾ
ನಿಧಾನಗತಿಗೆ


ಲೋಕ ತಡೆದುಕೊಳ್ಳಲಾರದು;
ಇದು ವಾಸ್ತವವೂ ಹೌದು –
ಲೋಕ ಅಳಿಯಬೇಕಲ್ಲ, ಅದು;
ಆಗುತ್ತಿರುವಾಗ, ಇದ್ದಾಗ, ಅದು ಅದೃಷ್ಟ,
ಮತ್ತು ಬದುಕಿನ ಅಂತರಂಗದೊಳಗೆ
ಪ್ರವೇಶ,
ಅಲ್ಲಿ ಆಗ ಲೌಕಿಕ ಅಲೌಕಿಕವೆನ್ನುವ ಭಿನ್ನ-ಭೇಧಗಳಿರವು,
ಹಾಗೂ
ಲೋಕ ಲೋಕಾಂತರಗಳು ಮನಸಿನ ಪುಟಗಳಲಿ;
ಆಗುವಾಗ ಇರುವುದು ಅದೃಷ್ಟವೆಂದರೆ ಅದು ಅರಿವೇ.

‍ಲೇಖಕರು Avadhi

23 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading