ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಸಲೆಲ್ಲಿ ಕಂಡರಿಯದ ಚಹರೆಗಳ ನಡುವೆ …

ಕಾಣದ ಪುಳಕಗಳಿಗೆ ಹುಡುಕುವ ಮನ …..

ಕಮಲ ಬೆಲಗೂರ್

ಹುಡುಕುತಿಹೆ ಎಲ್ಲೆಲ್ಲು ಹಂಬಲಿಸಿ ನಿತ್ಯವೂ ಬಾಲ್ಯದಲಿ ಮನಗೆದ್ದ ಚಹರೆಗಳ, ಸವಿದ ಪುಳಕಗಳ …. ತಿಂಗಳ ಬೆಳಕಿನಲಿ ಅರಳಿದ ಬಾಲ್ಯದ ಮುಗ್ದತೆಯ ಅಜ್ಜಿಯ ಏಳು ಮಲ್ಲಿಗೆ ತೂಕದ ರಾಜಕುಮಾರಿಯ, ಅಂಗಳದ ಅರಳಿಯ ನೆರಳಲಿ ಅರಳಿದ ಶ್ರಮದ ಫಲದ ಸಿಹಿಯ, ಹರೆಯದ ಹೆಣ್ಣಿನ ಕಣ್ಣಿನಲಿ ಇಣುಕುತಿಹ ಸಣ್ಣನೆಯ ನಾಚಿಕೆಯಾ……. ಅರಸಲೆಲ್ಲಿ ಕಂಡರಿಯದ ಚಹರೆಗಳ ನಡುವೆ … ನಾ ಕಂಡ ಮುಖಗಳ. ಬರಿ ಗೋಡೆಗಳ ನಡುವೆ ಬದುಕ ನೂಕುತ್ತ ನಗೆಯ ಮುಖವಾಡ ಧರಿಸಿ ಮೆರೆಯುತ್ತಾ ನಿಜ ಚಹರೆಯ ಮರೆತವರ ನಡುವೆ … ಸುಖದ ಕನಸ ಬೆಂಬೆತ್ತಿ ಸುಖ ನಿದ್ದೆಗೆ ಸಂಚಕಾರ ತಂದುಕೊಂಡವರ ನಡುವೆ…….. ಕಾಣದ ಪುಳಕಗಳಿಗೆ ಹುಡುಕುವ ಮನ ಕಾಣಬಲ್ಲದೆ ಒಂದು ದಿನಾ…  ]]>

‍ಲೇಖಕರು G

13 September, 2012

2 Comments

  1. paresh Saraf

    ನಗೆಯ ಮುಖವಾಡ
    ಧರಿಸಿ ಮೆರೆಯುತ್ತಾ
    ನಿಜ ಚಹರೆಯ
    ಮರೆತವರ ನಡುವೆ …
    ಸುಖದ ಕನಸ ಬೆಂಬೆತ್ತಿ
    ಸುಖ ನಿದ್ದೆಗೆ ಸಂಚಕಾರ
    ತಂದುಕೊಂಡವರ ನಡುವೆ……..
    ಕಾಂಕ್ರೀಟು ಕಾಡಿನಲ್ಲಿ ಸುತ್ತ ಜನರಿದ್ದರೂ ಎಕಾಂಗಿಯೆಂಬ ಭಾವನೆ ಮೈದಳೆದು ಕುಳಿತಿರುವ ನಮ್ಮ ಮನದ ಸ್ವಾಗತ. ಚೆನ್ನಾಗಿದೆ:)

  2. faiznatraj

    ಸಹಜತೆಯ ಕವಿತೆ
    ನೆನಪುಗಳ ಮೀಟಿ ಸಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading